Asianet Suvarna News Asianet Suvarna News

BJP leader Shot Dead ಶೋರೂಂ ನುಗ್ಗಿ ಬಿಜೆಪಿ ನಾಯಕನ ಗುಂಡಿಟ್ಟು ಹತ್ಯೆ, ಐವರು ದುಷ್ಕರ್ಮಿಗಳಿಂದ ಕೃತ್ಯ!

ಹತ್ಯೆ, ಪ್ರತೀಕಾರ, ಸೇಡು ಮತ್ತೆ ಸದ್ದು ಮಾಡತೊಡಗಿದೆ. ಇತ್ತೀಚೆಗಷ್ಟೇ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆಯಿಂದ ಕರ್ನಾಟಕ ಸೇರಿದಂತೆ ದೇಶದಲ್ಲೇ ಆತಂಕದ ವಾತಾವರಣ ನಿರ್ಮಾಣಗೊಂಡಿತ್ತು. ಈ ಪರಿಸ್ಥಿತಿ ಶಾಂತವಾಗುತ್ತಿದೆ ಅನ್ನುವಷ್ಟರಲ್ಲೇ ಇದೀಗ ಮತ್ತೊರ್ವ ಬಿಜೆಪಿ ನಾಯಕನ ಹತ್ಯೆಯಾಗಿದೆ

CM Manohar Lal Khattar close aide BJP leader Sukhbir Khatana shot dead inside cloth showroom Gurgaon ckm
Author
First Published Sep 1, 2022, 8:53 PM IST

ಗುರ್‌ಗಾಂವ್(ಸೆ.01): ದೇಶದಲ್ಲಿ ಸೇಡು, ಧರ್ಮದ ಪ್ರತೀಕಾರದ ಹತ್ಯೆಗಳು ಸರಣಿಯಾಗಿ ನಡೆಯುತ್ತಿದೆ. ಈ ಆತಂಕದ ವಾತಾವರಣ ತಿಳಿಯಾಗುತ್ತಿದ್ದೆ ಅನ್ನುವಷ್ಟರಲ್ಲೇ ಮತ್ತೊಂದು ಹತ್ಯೆಯಾಗಿದೆ. ಈ ಬಾರಿಯೂ ಬಿಜೆಪಿ ನಾಯಕರೇ ಟಾರ್ಗೆಟ್. ಹರ್ಯಾಣ ಮುಖ್ಯಮಂತ್ರಿ ಮನೋಹರ್ ಲಾಲ್ ಕಟ್ಟರ್, ಬಿಜೆಪಿ ಪ್ರಬಲ ನಾಯಕನಾಗಿ ಗುರುತಿಸಿಕೊಂಡಿದ್ದ ಸುಖ್ಬೀರ್ ಖಟನಾ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದಾರೆ. ಗುರ್‌‌ಗಾಂವ್ ಬಟ್ಟೆ ಶೋ ರೂಂ ಒಳಗೆಡೆ ಇದ್ದ ಸುಖ್ಬೀರ್ ಖಟನಾ ಟಾರ್ಗೆಟ್ ಮಾಡಿದ ದುಷ್ಕರ್ಮಿಗಳು ನೇರವಾಗಿ ಶೋ ರೂಂ ಒಳಗೆ ನುಗ್ಗಿ ಗುಂಡಿನ ಸುರಿಮಳೆಗೈದಿದ್ದಾರೆ. ಇತ್ತ ಸುಖ್ಬೀರ್ ಗನ್‌ಮ್ಯಾನ್ ಕೂಗಳತೆ ದೂರದಲ್ಲಿರುವಾಗಲೇ ಈ ಘಟನೆ ನಡೆದಿದೆ. ಗುಂಡಿನ ಮೊರೆತ ಆರಂಭವಾಗುತ್ತಿದ್ದಂತೆ ಬಟ್ಟೆ ಅಂಗಡಿಯಲ್ಲಿದ್ದ ಹಲವರು ದಿಕ್ಕಾಪಾಲಾಗಿ ಓಡಿದ್ದಾರೆ. ಕೆಲವರಿಗೆ ಗುಂಡು ತಗುಲಿದೆ. ತೀವ್ರವಾಗಿ ಗಾಯಗೊಂಡ ಸುಖ್ಬೀರ್ ಖಟನಾ ಆಸ್ಪತ್ರೆ ಸಾಗಿಸುವ ಮಧ್ಯೆ ನಿಧನರಾಗಿದ್ದಾರೆ.

ಗುರುದ್ವಾರ ರಸ್ತೆಯಲ್ಲಿರುವ ಸದಾರ್ ಬಜಾರ್ ಪಕ್ಕದಲ್ಲೇ ಈ ಘಟನೆ ನಡೆದಿದೆGurgaon Crime). ಗುಂಡಿನ ಶಬ್ದ ಕೇಳಿಸುತ್ತಲೆ ಬಟ್ಟೆ ಶೋ ರೂಂ ಒಳಗೆ ನಿಂತಿದ್ದ ಗನ್‌ಮ್ಯಾನ್ ನಾಯಕ ಸುಖ್ಬೀರ್(BJP leader Sukhbir Khatana ) ರಕ್ಷಿಸಲು ಓಡಿದ್ದಾರೆ. ಆದರೆ ಐವರು ದುಷ್ಕರ್ಮಿಗಳು ಒಂದೇ ಸಮನೆ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ನಾಯಕ ಸುಖ್ಬೀರ್ ಕಟಾನನ್ನು(Shot Dead) ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿದೆ. ಆದರೆ ಆಸ್ಪತ್ರೆ ಸೇರುವ ಮುನ್ನವೇ ಸುಖ್ಬೀರ್ ನಿಧನರಾಗಿದ್ದಾರೆ.

Sonali Phogat ನಿಗೂಢ ಸಾವು ಪ್ರಕರಣದಲ್ಲಿ ಮತ್ತೊಂದು ಟ್ವಿಸ್ಟ್, ದೇಹದಲ್ಲಿ 46 ಗಾಯದ ಗುರುತು ಪತ್ತೆ!

ತಕ್ಷಣವೇ ಸ್ಥಳಕ್ಕೆ ಆಗಮಿಸಿದ ಪೊಲೀಸರು ಸಂಪೂರ್ಣ ಶೋ ರೂಂ ಹಾಗೂ ಬಜಾರ್ ವಶಕ್ಕೆ ಪಡೆದಿದ್ದಾರೆ. ಶೋ ರೂಂ ಒಳಗಿನ ಹಾಗೂ ಬಜಾರ್‌ನಲ್ಲಿ ಅಳವಡಿಸಿರುವ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಲಾಗುತ್ತಿದೆ. ಇನ್ನು ಗುರುದ್ವಾರ ರಸ್ತೆ ಸೇರಿದಂತೆ ಹಲವು ರಸ್ತೆಗಳಲ್ಲಿ ನಾಕಾಬಂದಿ ಹಾಕಲಾಗಿದ್ದು, ಪೊಲೀಸರು ತೀವ್ರ ತಪಾಸಣೆ ಮಾಡುತ್ತಿದ್ದಾರೆ. 

ಸುಖ್ಬೀರ್ ಖಟನಾ ಬಿಜೆಪಿ (BJP)ನಾಯಕನಾಗಿ ಮಾತ್ರವಲ್ಲ, ಹಿಂದೂ ಹೋರಾಟಗಾರನಾಗಿ(Pro Hindu Leader) ಗುರುತಿಸಿಕೊಂಡಿದ್ದರು. ಈ ಹಿಂದೆ ಕೆಲವು ಬಾರಿ ಬೆದರಿಕೆಗಳು ಬಂದಿತ್ತು. ಈ ಘಟನೆಗೆ ಕಾರಣವೇನು ಅನ್ನೋ ಮಾಹಿತಿ ಲಭ್ಯವಾಗಿಲ್ಲ. ಇದೀಗ ಪೊಲೀಸರು ತನಿಖೆ(Police Investigation) ಕೈಗೊಂಡಿದ್ದಾರೆ. ಸೋಹ್ನ ಮಾರ್ಕೆಟ್ ಸಮಿತಿಯ ಮಾಜಿ ಉಪಾಧ್ಯಕ್ಷರಾಗಿರುವ ಸುಖ್ಬೀರ್, ರಿಥೋಜ್ ಗ್ರಾಮದಲ್ಲಿ ಜಿಲ್ಲಾ ಪಂಚಾಯತ್ ಚುನಾವಣೆಗೆ ಸ್ಪರ್ಧಿಸಲು ತಯಾರಿ ಮಾಡಿಕೊಂಡಿದ್ದರು. 

 

ಅಂತ್ಯಕ್ರಿಯೆ ವೇಳೆ ಎದ್ದು ಕುಳಿತ 3 ವರ್ಷದ ಕಂದಮ್ಮ, ಸಂತಸದಲ್ಲಿದ್ದ ಕುಟುಂಬಕ್ಕೆ ಮತ್ತೆ ಶಾಕ್!

12 ತಾಸಲ್ಲಿ ಇಬ್ಬರು ರಾಜಕೀಯ ನಾಯಕರ ಹತ್ಯೆ: ಕೇರಳ ಉದ್ವಿಗ್ನ
ಕೇರಳದಲ್ಲಿ ಕೇವಲ 12 ತಾಸಿನಲ್ಲಿ ಇಬ್ಬರು ರಾಜಕೀಯ ನಾಯಕರ ಹತ್ಯೆ ನಡೆದಿದ್ದು, ಇದರ ಬೆನ್ನಲ್ಲೇ ಕರಾವಳಿಯ ಆಲಪ್ಪುಳ ಜಿಲ್ಲೆಯಲ್ಲಿ ಉದ್ವಿಗ್ನ ಸ್ಥಿತಿ ಸೃಷ್ಟಿಯಾಗಿದೆ. ಪರಿಸ್ಥಿತಿ ನಿಯಂತ್ರಿಸಲು ಜಿಲ್ಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಈ ಕೊಲೆಗಳ ಹಿನ್ನೆಲೆಯಲ್ಲಿ ರಾಜಕೀಯ ಜಟಾಪಟಿಯೂ ತೀವ್ರವಾಗಿದೆ. ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಕೆ.ಎಸ್‌.ಶಾನ್‌ ಅವರು ಶನಿವಾರ ರಾತ್ರಿ ತಮ್ಮ ಮನೆಗೆ ಮರಳುತ್ತಿದ್ದಾಗ ಅವರ ಮೇಲೆ ಮಾರಣಾಂತಿಕ ಹಲ್ಲೆಯಾಗಿತ್ತು. ಮಧ್ಯರಾತ್ರಿ ವೇಳೆಗೆ ಅವರು ಕೊಚ್ಚಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು.   ಇದಾದ ಕೆಲವೇ ತಾಸಿನಲ್ಲಿ ಕೇರಳ ಬಿಜೆಪಿ ಒಬಿಸಿ ಮೋರ್ಚಾ ರಾಜ್ಯ ಕಾರ್ಯದರ್ಶಿ ರಂಜಿತ್‌ ಶ್ರೀನಿವಾಸ್‌ ಅವರ ಮನೆಗೆ ಭಾನುವಾರ ಬೆಳಗ್ಗೆ ಕೆಲವರು ನುಗ್ಗಿ ಅವರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ. ಎಸ್‌ಡಿಪಿಐ ನಾಯಕನ ಹತ್ಯೆಗೆ ಪ್ರತೀಕಾರವಾಗಿ ಶ್ರೀನಿವಾಸ್‌ ಅವರ ಹತ್ಯೆಯಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

Follow Us:
Download App:
  • android
  • ios