Asianet Suvarna News Asianet Suvarna News

ನಿವೃತ್ತಿಗೂ ಮೊದಲು ಅಮ್ಮನಿಗೆ ಸಮವಸ್ತ್ರದಲ್ಲಿ ಸೇನಾಧಿಕಾರಿಯಿಂದ ಕೊನೆ ಸೆಲ್ಯೂಟ್

ಇಲ್ಲೊಬ್ಬರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಅಧಿಕಾರಿಯೊಬ್ಬರು ನಿವೃತ್ತಿಗೂ ಮೊದಲು ತಮ್ಮ ಸೇನಾ ಸಮವಸ್ತ್ರದಲ್ಲಿ ಕೊನೆಯ ಬಾರಿಗೆ ತಾಯಿಗೆ ಸೆಲ್ಯೂಟ್ ಹೊಡೆಯುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

A final salute from an army officer in uniform to Mother before her retirement akb
Author
First Published Dec 25, 2022, 6:15 PM IST

ನವದೆಹಲಿ: ವ್ಯಕ್ತಿಯ ನಿಜವಾದ ಗುಣ ಏನು ಎಂಬುದನ್ನು ತಿಳಿಯಲು ಆತ ತನ್ನ ತಾಯಿಯನ್ನು ಹೇಗೆ ನೋಡಿಕೊಳ್ಳುತ್ತಾನೆ ಎಂಬುದನ್ನು ನೋಡಿ ತಿಳಿಯಬಹುದು ಎಂಬ ಮಾತಿದೆ. ತಾಯಿ ಮಗನ ಸಂಬಂಧ ಮಗನ ಬದುಕಿನ ಮೇಲೆ, ಆತನ ವ್ಯಕ್ತಿತ್ವದ ಮೇಲೆ ಅಗಾಧವಾದ ಪರಿಣಾಮ ಬೀರುತ್ತದೆ. ಬಾಲ್ಯದಲ್ಲಿ ಶಾಲೆಯಲ್ಲಿ ನಡೆಯುವ ಸಣ್ಣ ಸ್ಪರ್ಧೆಯಲ್ಲಿ ಗೆಲ್ಲವುದರಿಂದ ಆರಂಭಿಸಿ ಬದುಕಿನಲ್ಲಿ ದೊಡ್ಡ ನಿರ್ಧಾರ ತೆಗೆದುಕೊಳ್ಳುವಾಗಲೂ ಆತನಿಗೆ ಅಮ್ಮ ಜೊತೆಗಿರಬೇಕು ಇದು ಅಮ್ಮ ಮಗನ ಬಾಂಧವ್ಯ. ಈ ಉತ್ತಮ ಬಾಂಧವ್ಯದ ಯೋಗ ಎಲ್ಲರಿಗೂ ಸಿಗುವುದಿಲ್ಲ. ಕೆಲವರಿಗೆ ಅಮ್ಮನೇ ಇರುವುದಿಲ್ಲ. ಮತ್ತೆ ಕೆಲವರಿಗೆ ಅಮ್ಮನ ಕಾಳಜಿ ತೋರುವ ವ್ಯವಧಾನವಿರುವುದಿಲ್ಲ. ಅದೇನೆ ಇರಲಿ ಇಲ್ಲೊಬ್ಬರು ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಅಧಿಕಾರಿಯೊಬ್ಬರು ನಿವೃತ್ತಿಗೂ ಮೊದಲು ತಮ್ಮ ಸೇನಾ ಸಮವಸ್ತ್ರದಲ್ಲಿ ಕೊನೆಯ ಬಾರಿಗೆ ತಾಯಿಗೆ ಸೆಲ್ಯೂಟ್ ಹೊಡೆಯುತ್ತಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. 

ಈ ವಿಡಿಯೋವನ್ನು ಮೇಜರ್ ಜನರಲ್ ರಂಜನ್ ಮಹಾಜನ್ ಅವರು ತಮ್ಮ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದು, ವಿಡಿಯೋದಲ್ಲಿ ಕಾಣಿಸುವಂತೆ ಸೇನಾ ಅಧಿಕಾರಿ ತನ್ನ ಮನೆಯೊಳಗೆ ಪ್ರವೇಶಿಸಿ ಸೇನಾ ಸಮವಸ್ತ್ರ ಧರಿಸಿಕೊಂಡೆ ತನ್ನ ತಾಯಿಯನ್ನು ಭೇಟಿ ಮಾಡುತ್ತಾರೆ. ಈ ವೇಳೆ ಅವರ ತಾಯಿ ಸೋಫಾದ ಮೇಲೆ ಕುಳಿತುಕೊಂಡಿರುತ್ತಾರೆ. ಮಾಹಿತಿ ಇಲ್ಲದೇ ಸಡನ್ ಆಗಿ ಬಂದು ಸರ್‌ಫ್ರೈಸ್ ನೀಡಿದ ಮಗನ ನೋಡಿ ಅವರು ಅಚ್ಚರಿಗೊಳಗಾಗುತ್ತಾರೆ. ಅಲ್ಲದೇ ಆತ ಸೋಫಾದ ಬಳಿ ಬಂದು ತಮ್ಮ ತಾಯಿಗೆ ಸೆಲ್ಯೂಟ್ ಹೊಡೆಯುತ್ತಾರೆ. ಇದೊಂದು ಭಾವುಕ ಕ್ಷಣವಾಗಿದ್ದು, ತಾಯಿ ಮಗ ಇಬ್ಬರು ಒಬ್ಬರನ್ನೊಬ್ಬರು ಅಪ್ಪಿಕೊಳ್ಳುತ್ತಾರೆ. ಅಲ್ಲದೇ ಈ ಹಿರಿಯ ಅಧಿಕಾರಿ ತಮ್ಮ ಪ್ರೀತಿಯ ತಾಯಿಗೆ ಹೂವಿನ ಹಾರವನ್ನು ಕೂಡ ಹಾಕುತ್ತಾರೆ. ನನ್ನ ತಾಯಿ ನನ್ನನ್ನು ಈ ಜೀವನಕ್ಕೆ ಹಾಗೂ ಸಮವಸ್ತ್ರಕ್ಕೆ ಯೋಗ್ಯನಾಗಿ ಬೆಳೆಸಿದರು ಎಂದು ಅವರು ಹೇಳುತ್ತಾರೆ. 

Indian Army day: ಮೊದಲ ಬಾರಿಗೆ ನಗರದಲ್ಲಿ ಭೂಸೇನಾ ದಿನ

ಈ ವಿಡಿಯೋ ಪೋಸ್ಟ್ ಮಾಡಿ ಮೇಜರ್ ಜನರಲ್ ರಂಜನ್ ಮಹಾಜನ್ (Major General Ranjan Mahajan) ಹೀಗೆ ಬರೆದುಕೊಂಡಿದ್ದಾರೆ. ನನ್ನ ಸಮವಸ್ತ್ರವನ್ನು ನೇತು ಹಾಕುವ ಮೊದಲು ಅಮ್ಮನಿಗೆ ಸಮವಸ್ತ್ರದಲ್ಲಿ ಕೊನೆಯ ಸೆಲ್ಯೂಟ್, ನಾವು ನನ್ನ ತಾಯಿಗೆ ಸರ್‌ಫ್ರೈಸ್ ನೀಡುವ ಸಲುವಾಗಿ ಹರಿಯಾಣದ ಅಂಬಾಲಾದಿಂದ (Ambala) ದೇಹಲಿಗೆ ಹಾರಿದೆವು. ಅವರು ನನಗೆ ಜನ್ಮ ನೀಡಿ, ನನ್ನನ್ನು ಈ ಬದುಕಿಗೆ ಹಾಗೂ ಈ ಸೇನಾ ಸಮವಸ್ತ್ರಕ್ಕೆ ಯೋಗ್ಯನನ್ನಾಗಿ ಮಾಡುವ ಮೂಲಕ 35 ವರ್ಷಗಳ ಕಾಲ ತಾಯ್ನಾಡಿಗೆ ಹೆಮ್ಮೆಯಿಂದ ಸೇವೆ ಸಲ್ಲಿಸಲು ಯೋಗ್ಯನನ್ನಾಗಿಸಿದರು. ಒಂದು ವೇಲೇ ಮತ್ತೊಮ್ಮೆ ನನಗೆ ಅವಕಾಶ ಸಿಕ್ಕರೆ ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ಮತ್ತೆ ಸಿದ್ಧ ಎಂದು ಅವರು ಬರೆದುಕೊಂಡಿದ್ದಾರೆ. 

ದೇಶ ಸೇವೆಗೆ ಯುವಕರ ಕಾತುರ ಹೆಮ್ಮೆ ವಿಷಯ: ಕೇಂದ್ರ ಸಚಿವ ಖೂಬಾ

ಈ ವಿಡಿಯೋವನ್ನು ಡಿಸೆಂಬರ್ 13 ರಂದು ಶೇರ್ ಮಾಡಲಾಗಿದ್ದು, 38 ಸಾವಿರಕ್ಕೂ ಹೆಚ್ಚು ಜನ ಈ ವಿಡಿಯೋ ನೋಡಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸೆಲೆಬ್ರಿಟಿ ರಣವಿಜಯ್ ಸಂಘ ಎಂಬುವವರು ಕೂಡ ಈ ವಿಡಿಯೋಗೆ ಕಾಮೆಂಟ್ ಮಾಡಿದ್ದು, ನಿಮ್ಮ ಬಗ್ಗೆ ಹೆಮ್ಮೆ ಎನಿಸುತ್ತಿದೆ, ಇದು ತುಂಬಾ ಸಿಹಿಯಾದ ಕ್ಷಣ ಎಂದು ಬರೆದು ಕೊಂಡಿದ್ದಾರೆ. ಮತ್ತೊಬ್ಬರು ಎಷ್ಟೊಂದು ಸುಂದರ ಅಂಕಲ್, ನಿಮ್ಮ ಸೆಕೆಂಡ್ ಇನ್ನಿಂಗ್ಸ್‌ಗೆ ಶುಭ ಹಾರೈಸುತ್ತೇವೆ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. ಎಂಥಾ ಸಂಸ್ಕೃತಿ ಎಂಥಾ ಸಭ್ಯತೆ, ಇದೊಂದು ಅಪೂರ್ವ ಕ್ಷಣ. ಅದ್ಭುತ. ಭಾರತೀಯ ಸಶಸ್ತ್ರ ಪಡೆಗಳ ನೀತಿ ಮತ್ತು ಸೌಂದರ್ಯ, ಭಾರತೀಯ ಸಂಸ್ಕೃತಿ ಮತ್ತು ಸಂಪ್ರದಾಯಗಳನ್ನು ಪ್ರತಿಬಿಂಬಿಸುತ್ತದೆ. ನಾವು ಜೀವನದಲ್ಲಿ ಎಷ್ಟೇ ದೊಡ್ಡವರಾಗಿದ್ದರೂ ಅಥವಾ ನಾವು ಎಷ್ಟು ವಯಸ್ಸಾಗಿದ್ದರೂ, ನಮ್ಮ ಜೀವನದಲ್ಲಿ ಹೆತ್ತವರು ಯಾವಾಗಲೂ ದೇವರ ಸ್ಥಾನಮಾನವನ್ನು ಹೊಂದಿರುತ್ತಾರೆ. ಜೈ ಹಿಂದ್ ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. ಒಟ್ಟಿನಲ್ಲಿ ಈ ವಿಡಿಯೋಗೆ ಅನೇಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
 

CDS ಹೆಲಿಕಾಪ್ಟರ್ ದುರಂತಕ್ಕೆ ಒಂದು ವರ್ಷ, ಬಿಪಿನ್ ರಾವತ್ ಸೇರಿ ಅಗಲಿದ ಗಣ್ಯರಿಗೆ ನಮನ!

 
 
 
 
 
 
 
 
 
 
 
 
 
 
 

A post shared by Smiley (@iranjanmahajan)

p> 

 

Follow Us:
Download App:
  • android
  • ios