ಸರಿಯಾಗಿ ಒಂದು ವರ್ಷಗಳ ಹಿಂದೆ ಭಾರತೀಯ ಸೇನಾ ಮುಖ್ಯಸ್ಥ ಬಿಪಿನ್ ರಾವತ್ , ರಾವತ್ ಪತ್ನಿ ಸೇರಿ 14 ಸೇನಾಧಿಕಾರಿಗಳು ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ಭೀಕರ ಅಪಘಾತ ಭಾರತ ಬೆಚ್ಚಿ ಬಿದ್ದಿತ್ತು. ಹೆಲಿಕಾಪ್ಟರ್‌ನಲ್ಲಿದ್ದ ಎಲ್ಲಾ ಗಣ್ಯರು ಹುತಾತ್ಮರಾಗಿದ್ದರು. ಬಿಪಿನ್ ರಾವತ್ ಒಂದನೇ ವರ್ಷದ ಪುಣ್ಯತಿಥಿಯಂದ ಅಗಲಿದೆ ಗಣ್ಯರಿಗೆ ಗೌರವ ನಮನ ಸಲ್ಲಿಸಲಾಗಿದೆ.

ಬಾರಾಮುಲ್ಲಾ (ಡಿ.08): CDS ಹೆಲಿಕಾಪ್ಟರ್ ದುರಂತಕ್ಕೆ ಒಂದು ವರ್ಷ. ಭಾರತ ಸೇರಿದಂತೆ ಇಡೀ ವಿಶ್ವವೇ ಮರುಗಿದ ದಿನ ಇದು. ಕಾರಣ ಮೂರೂ ಸೇನಾ ಪಡೆಗಳ ನೇತೃತ್ವ ವಹಿಸಿದ್ದ ದೇಶದ ಮೊದಲ ಸಶಸ್ತ್ರ ಪಡೆಗಳ ಮುಖ್ಯಸ್ಥ ಜನರಲ್‌ ಬಿಪಿನ್‌ ರಾವತ್‌ ಸೇರಿ 14 ಮಂದಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪತನಗೊಂಡಿತ್ತು. ಈ ದುರಂತದಲ್ಲಿ 14 ಸೇನಾಧಿಕಾರಿಗಳು ಮೃತಪಟ್ಟಿದ್ದರು. ಬಿಪಿನ್ ರಾವತ್, ರಾವತ್ ಪತ್ನಿ ಸೇರಿ ಹೆಲಿಕಾಪ್ಟರ್‌ನಲ್ಲಿದ್ದ ಸೇನಾಧಿಕಾರಿಗಳಿಗೆ ಇಂದು ಒಂದನೇ ವರ್ಷದ ಪುಣ್ಯತಿಥಿ. ಇದರ ಹಿನ್ನಲೆಯಲ್ಲಿ ಗೌರವ ನಮನ ಸಲ್ಲಿಸಲಾಗಿದೆ. ಸೇನಾ ದಗ್ಗರ್ ವಾರ್ ಸ್ಮಾರಕದಲ್ಲಿ ಬಿಪಿನ್ ರಾವತ್ ಅವರಿಗೆ ಗೌರವ ನಮನ ಸಲ್ಲಿಸಲಾಗಿದೆ. ಇಷ್ಟೇ ಅಲ್ಲ ಭಾರತೀಯ ಸೇನೆಯ ಹಲವು ಕೇಂದ್ರಗಳಲ್ಲಿ ಬಿಪಿನ್ ರಾವತ್ ಅವರಿಗೆ ಗೌರವ ನಮನ ಸಲ್ಲಿಸಲಾಗಿದೆ.

ಬ್ರಿಗೇಡಿಯರ್ ಸಂಜೀವ್ ಕುಮಾರ್ ಸೇರಿದಂತೆ ದಗ್ಗರ್ ವಾರ್ ಮೆಮೋರಿಯಲ್‌ನಲ್ಲಿ ರಾವತ್‌ಗೆ ಮೆಮೋರಿಯಲ್‌ಗೆ ಪುಷ್ಪ ಸಮರ್ಪಿಸಿ ನಮನ ಸಲ್ಲಿಸಿದ್ದರು. ಇನ್ನು ಬಾರಮುಲ್ಲಾದ ಜನರು ಸಾರ್ವಜನಿಕ ಕಾರ್ಯಕ್ರಮ ಆಯೋಜಿಸಿದ್ದರು. ಬೃಹತ್ ಸಂಖ್ಯೆಯಲ್ಲಿ ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Padma Awards 2022: ಪದ್ಮವಿಭೂಷಣ ರಾವತ್‌, ಪದ್ಮಶ್ರೀ ಸಿದ್ದಲಿಂಗಯ್ಯ... ಸಾಧಕರಿಗೆ ಗೌರವ

ತಮಿಳುನಾಡಿನ ನೀಲಗಿರಿ ಜಿಲ್ಲೆಯ ವೆಲ್ಲಿಂಗ್ಟನ್‌ನಲ್ಲಿರುವ ರಕ್ಷಣಾ ಸಿಬ್ಬಂದಿಯ ಕಾಲೇಜಿನಲ್ಲಿ ಡಿಸೆಂಬರ್ 8, 2021ರ ಮಧ್ಯಾಹ್ನ 2.45ಕ್ಕೆ ಉಪನ್ಯಾಸ ಕಾರ್ಯಕ್ರಮವೊಂದರಲ್ಲಿ ಜನರಲ್‌ ಬಿಪಿನ್‌ ರಾವತ್‌ ಭಾಗಿಯಾಗಬೇಕಿತ್ತು. ಪತ್ನಿ ಮಧುಲಿಕಾ ಹಾಗೂ ಇತರೆ ಸಿಬ್ಬಂದಿ ಜತೆಗೆ ತಮಿಳುನಾಡಿನ ಸೂಲೂರಿಗೆ ವಿಮಾನದಲ್ಲಿ ಅವರು ಬಂದಿಳಿದಿದ್ದರು. ಅಲ್ಲಿಂದ ಹೆಲಿಕಾಪ್ಟರ್‌ ಮೂಲಕ ವೆಲ್ಲಿಂಗ್ಟನ್‌ಗೆ ಪ್ರಯಾಣ ಬೆಳೆಸಿದರು. ವೆಲ್ಲಿಂಗ್ಟನ್‌ನಿಂದ 16 ಕಿ.ಮೀ. ದೂರದಲ್ಲಿ ಕಾಪ್ಟರ್‌ ಇದ್ದಾಗ ಪತನಗೊಂಡಿತು. ಸೂಲೂರಿನಿಂದ ಹೊರಟ ಕಾಪ್ಟರ್‌ ವೆಲ್ಲಿಂಗ್ಟನ್‌ನಿಂದ 16 ಕಿ.ಮೀ ದೂರದಲ್ಲಿದ್ದಾಗ ಈ ದುರ್ಘಟನೆ ಸಂಭವಿಸಿದೆ. 5 ನಿಮಿಷ ಕಳೆದಿದ್ದರೆ ಕಾಪ್ಟರ್‌ ಸುರಕ್ಷಿತವಾಗಿ ಲ್ಯಾಂಡ್‌ ಆಗುತ್ತಿತ್ತು. ಬಿಪಿನ್‌ ರಾವತ್‌ ಅವರು ಅಪಾಯದಿಂದ ಪಾರಾಗುತ್ತದ್ದರು. ಆದರೆ ಕೂನೂರಿನ ಬಳಿ ಹೆಲಿಕಾಪ್ಟರ್‌ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ 13 ಜನರು ಸಾವಿಗೀಡಾಗಿದ್ದಾರೆ.

CDS Gen Rawat's helicopter crash: ಸಿಒಐ ತನಿಖೆಯಲ್ಲಿ ಬಹಿರಂಗವಾಯ್ತು ಅಪಘಾತದ ಕಾರಣ!

ಮೊದಲ ಸರ್ಜಿಕಲ್‌ ದಾಳಿ
2015ರ ಜೂನ್‌ 4ರಂದು ಯುನೈಟೆಡ್‌ ಲಿಬರೇಷನ್‌ ಫ್ರಂಟ್‌ ಬಂಡುಕೋರರು ಮಣಿಪುರದ ಚಂಡೇಲ್‌ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಡೋಗ್ರಾ ರೆಜಿಮೆಂಟ್‌ ವಾಹನಗಳ ಮೇಲೆ ದಾಳಿ ಮಾಡಿದ್ದರು. ಈ ಘಟನೆಯಲ್ಲಿ 18 ಭಾರತೀಯ ಯೋಧರು ಹುತಾತ್ಮರಾಗಿದ್ದರು. 15 ಯೋಧರು ಗಂಭೀರವಾಗಿ ಗಾಯಗೊಂಡಿದ್ದರು. ಚಂಡೇಲ್‌ ಜಿಲ್ಲೆ ಮ್ಯಾನ್ಮಾರ್‌ ಗಡಿಯಲ್ಲಿದೆ. ಇಲ್ಲಿ ದಾಳಿ ನಡೆಸಿದ್ದ ಬಂಡುಕೋರರು ಮ್ಯಾನ್ಮಾರ್‌ನಲ್ಲಿ ಆಶ್ರಯ ಪಡೆದಿದ್ದರು. ಆಗ ಆ ಭಾಗದ ಜನರಲ್‌ ಆಫೀಸರ್‌ ಕಮಾಂಡಿಂಗ್‌ ಹಾಗೂ ಲೆಫ್ಟಿನಂಟ್‌ ಜನರಲ್‌ ಆಗಿದ್ದ ಬಿಪಿನ್‌ ರಾವತ್‌ ಅವರು ಉಗ್ರರ ಮೇಲೆ ದಾಳಿಯ ಮೇಲುಸ್ತುವಾರಿ ವಹಿಸಿದ್ದರು. ಭಾರತೀಯ ಯೋಧರು ಮ್ಯಾನ್ಮಾರ್‌ ಗಡಿಯೊಳಕ್ಕೆ ನುಗ್ಗಿ ಎರಡು ಉಗ್ರಗಾಮಿ ಶಿಬಿರಗಳನ್ನು ಧ್ವಂಸ ಮಾಡಿದ್ದರು. 38 ಉಗ್ರರು ಹತರಾಗಿದ್ದರು. ಪಾಕಿಸ್ತಾನದ ಮೇಲೆ ಸರ್ಜಿಕಲ್ ಸ್ಟ್ರೈಕ್ ಮಾಡಿದ ಖ್ಯಾತಿಯೂ ಬಿಪಿನ್ ರಾವತ್‌ಗಿದೆ. ಉರಿ ದಾಳಿ ಹಿನ್ನಲೆಯಲ್ಲಿ ರಾವತ್ ಪ್ರತಿದಾಳಿ ನಡೆಸಿದ್ದರು. ಇನ್ನು ಏರ್ ಸ್ಟ್ರೈಕ್ ಮೂಲಕ ಪಾಕಿಸ್ತಾನ ನಿದ್ದೆಗಿಡಿಸಿದ್ದ ಬಿಪಿನ್ ರಾವತ್, ಚೀನಾಗು ದುಸ್ವಪ್ನವಾಗಿ ಕಾಡಿದ್ದರು.