ಬಿಜೆಪಿ ಸೇರಿದ್ದ ಕೇರಳ ಚರ್ಚ್ ಫಾದರ್ ವಜಾ ಮಾಡಿದ ಚರ್ಚ್ ಆಡಳಿತ ಮಂಡಳಿ
ಕಳೆದ ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದ ಸ್ಥಳೀಯ ಫಾದರ್ ಶೈಜು ಕುರಿಯನ್ ಅವರನ್ನು ಕ್ರೈಸ್ತ ಸಮುದಾಯದ ಎಲ್ಲಾ ಧಾರ್ಮಿಕ ಪದವಿಗಳಿಂದ ವಜಾ ಮಾಡಲಾಗಿದೆ.
ಪಟ್ಟಣಂತಿಟ್ಟ: ಕಳೆದ ಭಾನುವಾರ ಬಿಜೆಪಿಗೆ ಸೇರ್ಪಡೆಯಾಗಿದ್ದ ಸ್ಥಳೀಯ ಫಾದರ್ ಶೈಜು ಕುರಿಯನ್ ಅವರನ್ನು ಕ್ರೈಸ್ತ ಸಮುದಾಯದ ಎಲ್ಲಾ ಧಾರ್ಮಿಕ ಪದವಿಗಳಿಂದ ವಜಾ ಮಾಡಲಾಗಿದೆ.
ನೀಲಕ್ಕಲ್ ಭದ್ರಾಸನಂ ಆಡಳಿತ ಮಂಡಳಿ ಈ ನಿರ್ಧಾರ ತೆಗೆದುಕೊಂಡಿದೆ. ಕುರಿಯನ್ ಅವರನ್ನು ನೀಲಕ್ಕಲ್ ಭದ್ರಾಸನಂ ಆಡಳಿತ ಮಂಡಳಿ ಕಾರ್ಯದರ್ಶಿ, ನೀಲಕ್ಕಲ್ ಭದ್ರಾಸನಂ ಭಾನುವಾರದ ಶಾಲಾ ಆಡಳಿತ ಮಂಡಳಿಯ ಉಪಾಧ್ಯಕ್ಷ ಪದವಿಯಿಂದ ಅಮಾನತು ಮಾಡಲಾಗಿದೆ. ಜೊತೆಗೆ ಕುರಿಯೆನ್ ಅವರನ್ನು ವಿಚಾರಣೆಗೊಳಪಡಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದೂ ಸಹ ತಿಳಿಸಿದೆ.
ಪ್ರಧಾನಿ ಮೋದಿಯವರು ಕಳೆದ ವಾರವಷ್ಟೇ ‘ಸ್ನೇಹ ಯಾತ್ರೆ’ಯಡಿಯಲ್ಲಿ ಕ್ರೈಸ್ತ ಸಮುದಾಯದ ಮುಖಂಡರ ಮನೆಗೆ ತೆರಳಿ ಅವರನ್ನು ಪಕ್ಷಕ್ಕೆ ಆಹ್ವಾನಿಸಿದ್ದರು. ಈ ಹಿನ್ನೆಲೆಯಲ್ಲಿ ಕಳೆದ ಭಾನುವಾರ ಕುರಿಯೆನ್ ಮತ್ತು 50 ಕ್ರಿಶ್ಚಿಯನ್ ಕುಟುಂಬಗಳು ಕೇಂದ್ರ ಸಚಿವ ಮುರಳೀಧರನ್ ಅವರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವುದೆ? ನಟಿ ಶೋಭನಾರನ್ನು ರುಬ್ಬುತ್ತಿರೋ ನೆಟ್ಟಿಗರು!
ದಕ್ಷಿಣ ಭಾರತದಲ್ಲಿ ಮಿಷನ್-50ಗೆ ಬಿಜೆಪಿ ಪಣ: ರಾಜ್ಯದ 25 ಸೇರಿ ಒಟ್ಟು 50 ಸೀಟು ಗೆಲ್ಲಲು ಮೆಗಾ ಪ್ಲಾನ್