ಕೇರಳದಲ್ಲಿ ಪ್ರಧಾನಿ ನರೇಂದ್ರ ಮೋದಿಯನ್ನು ಹೊಗಳುವುದೆ? ನಟಿ ಶೋಭನಾರನ್ನು ರುಬ್ಬುತ್ತಿರೋ ನೆಟ್ಟಿಗರು!
ನಟಿ ಶೋಭನಾ, ಕೇರಳದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯನ್ನು ಹೊಗಳಿದ್ದಕ್ಕೆ ನೆಟ್ಟಿಗರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಅಷ್ಟಕ್ಕೂ ಆಗಿದ್ದೇನು?
ಕೇರಳದ ತ್ರಿಶೂರ್‌ನಲ್ಲಿ ನಿನ್ನೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ರೋಡ್ ಷೋ ನಡೆಸಿದರು. ಬಿಜೆಪಿ ರಾಜ್ಯ ಘಟಕ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಎರಡು ಲಕ್ಷಕ್ಕೂ ಅಧಿಕ ಮಹಿಳೆಯರು ಭಾಗವಹಿಸಿದ್ದರು. ಪ್ರಧಾನಿ ಮೋದಿ ರೋಡ್‌ಷೋ ಬಳಿಕ ತೆಕ್ಕಿಂಕಾಡ್ ಮೈದಾನದಲ್ಲಿ ಸಮಾವೇಶವನ್ನು ಉದ್ದೇಶಿಸಿ ಮಾತನಾಡಿದರು. ಈ ಸಂದರ್ಭದಲ್ಲಿ ಖ್ಯಾತ ನಟಿ ಮತ್ತು ನೃತ್ಯಗಾರ್ತಿ ಶೋಭನಾ, ಭಾರತೀಯ ಒಲಿಂಪಿಕ್ ಸಂಸ್ಥೆ ಅಧ್ಯಕ್ಷೆ ಪಿ ಟಿ ಉಷಾ, ಭಾರತ ಮಹಿಳಾ ಕ್ರಿಕೆಟ್ ತಂಡದ ಕೇರಳ ಆಟಗಾರ್ತಿ ಮಿನ್ನುಮಣಿ, ಗಾಯಕಿ ವೈಕಂ ವಿಜಯಲಕ್ಷ್ಮಿ, ಜವಳಿ ಉದ್ಯಮಿ ಬೀನಾ ಕಣ್ಣನ್ ಸೇರಿದಂತೆ ಹಲವು ಸೆಲೆಬ್ರಿಟಿಗಳು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಟಿ ಶೋಭನಾ ಮಾತನಾಡುತ್ತಾ ಪ್ರಧಾನಿ ನರೇಂದ್ರ ಮೋದಿಯವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಒಂದೇ ಸಮಾರಂಭದಲ್ಲಿ ಇಷ್ಟೊಂದು ಮಹಿಳೆಯರು ಪಾಲ್ಗೊಳ್ಳುತ್ತಿರುವುದು ನನ್ನ ಜೀವನದಲ್ಲಿ ಇದೇ ಮೊದಲು ಎಂದು ಹೇಳಿದರು. ಮಹಿಳೆಯರ ಬಹು ವರ್ಷಗಳ ಕನಸಾಗಿದ್ದ ಮಹಿಳಾ ಮೀಸಲಾತಿಯನ್ನು ಮೋದಿ ನೇತೃತ್ವದ ಸರ್ಕಾರ ಅಂಗೀಕಾರ ಮಾಡಿರುವುದಕ್ಕೆ ಶ್ಲಾಘನೆ ವ್ಯಕ್ತಪಡಿಸಿದ ನಟಿ, ಈ ಕಾರ್ಯಕ್ರಮದಲ್ಲಿ ಕೇಂದ್ರ ಸರ್ಕಾರದ ಮಹಿಳಾ ಮೀಸಲಾತಿ ಮಸೂದೆಯು ನಿರ್ಣಯವು ಪ್ರತಿಧ್ವನಿಸುತ್ತಿದೆ. ಇಂಥ ಅದ್ಭುತ ಕಾರ್ಯಕ್ರಮದಲ್ಲಿ ಪ್ರಧಾನಿ ಜೊತೆ ವೇದಿಕೆ ಹಂಚಿಕೊಳ್ಳಲು ಅವಕಾಶ ಸಿಕ್ಕಿದ್ದು ನನ್ನ ಪುಣ್ಯ ಎನ್ನುತ್ತಲೇ ಇಂಥ ಅವಕಾಶ ನೀಡಿದ ಸಂಘಟಕರಿಗೆ ಧನ್ಯವಾದ ಅರ್ಪಿಸಿದರು, ಜೊತೆಗೆ, ಮಹಿಳಾ ಮೀಸಲಾತಿ ಮಸೂದೆಯನ್ನು ಅಂಗೀಕರಿಸಿದ್ದಕ್ಕಾಗಿ ಪ್ರಧಾನಿಗೆ ಧನ್ಯವಾದ ಎಂದರು.
ಆದರೆ ನಟಿ ಶೋಭನಾ ಅವರ ಈ ಮಾತು ಕೆಲವರಿಗೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಮೋದಿ ಹಾಗೂ ಕೇಂದ್ರ ಸರ್ಕಾರವನ್ನು ಮುಕ್ತಕಂಠದಿಂದ ಶ್ಲಾಘಿಸಿದ ನಟಿಯ ವಿರುದ್ಧ ಬಿಜೆಪಿ ವಿರೋಧಿಗಳು ನಟಿಯನ್ನು ಹಿಗ್ಗಾಮುಗ್ಗ ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ನೀವೊಬ್ಬ ಸಂಘಿ ಎಂದು ನಟಿಯನ್ನು ಜರಿದಿದ್ದಾರೆ. ಆಕೆಯ ಫೇಸ್‌ಬುಕ್ ಪೋಸ್ಟ್‌ನಲ್ಲಿಯೂ ಪ್ರಧಾನಿಗೆ ಬೆಂಬಲ ನೀಡಿದ್ದಕ್ಕೆ ಸಿಕ್ಕಾಪಟ್ಟೆ ವಿರೋಧ ವ್ಯಕ್ತವಾಗಿದೆ. ನಿಮ್ಮ ನಟನೆ ನಮಗೆ ಇಷ್ಟ, ನಿಮ್ಮ ನೃತ್ಯದ ಅಭಿಮಾನಿ ನಾವು. ಆದರೆ ಇದೀಗ ಮೋದಿಯನ್ನು ಹೊಗಳಿ ನಿಮ್ಮ ಅಸ್ತಿತ್ವ ಕಳೆದುಕೊಂಡಿರುವಿರಿ. ರಾಜಕೀಯದಿಂದ ದೂರ ಉಳಿದಿದ್ದರೆ ಕಲಾವಿದರು ಇನ್ನಷ್ಟು ಸಾಧನೆ ಮಾಡುತ್ತಾರೆ. ಆದರೆ ನೀವು ನಿರಾಶೆ ವ್ಯಕ್ತಪಡಿಸಿದ್ದೀರಿ ಎಂದು ಹೇಳುತ್ತಿದ್ದಾರೆ.
ದೇವರ ದರ್ಶನಕ್ಕೂ ಬಿಡದ ಪಾಪರಾಜಿಗಳು: ಮಾಧುರಿ ದೀಕ್ಷಿತ್- ಪತಿ ಶ್ರೀರಾಮ್ ಸುಸ್ತೋ ಸುಸ್ತು!
ಈ ಕಾರ್ಯಕ್ರಮದಲ್ಲಿ, ಸಂಸತ್ತಿನ ಉಭಯ ಸದನಗಳಲ್ಲಿ ಮಹಿಳಾ ಮೀಸಲಾತಿ ಮಸೂದೆಯನ್ನು ಯಶಸ್ವಿಯಾಗಿ ಅಂಗೀಕರಿಸಿದ್ದಕ್ಕಾಗಿ ಪ್ರಧಾನಿ ಮೋದಿಯವರನ್ನು ಶ್ಲಾಘಿಸಲು ‘ಸ್ತ್ರೀ ಶಕ್ತಿ ಮೋದಿಕ್ಕ್ ಒಪ್ಪಂ’ (ಮೋದಿಯೊಂದಿಗೆ ಸ್ತ್ರೀ ಶಕ್ತಿ ) ಎಂಬ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಅಂಗನವಾಡಿ ಶಿಕ್ಷಕಿಯರು , ಆಶಾ ಕಾರ್ಯಕರ್ತೆಯರು, ಉದ್ಯಮಿಗಳು, ಕಲಾವಿದರು, ಎಂಜಿಎನ್‌ಆರ್‌ಇಜಿಎ ಮತ್ತು ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಕರ್ತರು ಸೇರಿದಂತೆ ವಿವಿಧ ಹಿನ್ನೆಲೆಯ ಮಹಿಳೆಯರು ಸಮಾವೇಶದಲ್ಲಿ ಭಾಗವಹಿಸಿದ್ದರು. ಅದೇ ರೀತಿ ಶೋಭನಾ ಕೂಡ ಭಾಗವಹಿಸಿ ಮೋದಿಯ ಪರವಾಗಿ ಮಾತನಾಡಿದ್ದು ಇಷ್ಟೆಲ್ಲಾ ಟೀಕೆಗಳಿಗೆ ಗುರಿಯಾಗಿದೆ.
ಅಂದಹಾಗೆ, ಶೋಭನಾ ಅವರು ಕಳೆದ ನವೆಂಬರ್‌ನಲ್ಲಿ ಎಲ್‌ಡಿಎಫ್ ನೇತೃತ್ವದ ಪಿಣರಾಯಿ ಸರ್ಕಾರದ ಕೇರಳೀಯಂ ಕಾರ್ಯಕ್ರಮದಲ್ಲಿ ಮಮ್ಮುಟ್ಟಿ, ಮೋಹನ್‌ಲಾಲ್ ಮತ್ತು ಕಮಲ್ ಹಾಸನ್ ಅವರೊಂದಿಗೆ ಭಾಗವಹಿಸಿದ್ದರು ಎಂಬುದು ಗಮನಿಸಬೇಕಾದ ಸಂಗತಿ. ಸಮಾರಂಭದಲ್ಲಿ, ಶೋಭಾನಾ ಅವರು ತಿರುವನಂತಪುರಕ್ಕೆ ಸೇರಿದವರು ಎಂದು ಹೇಳಿದ್ದರು. ಅಲ್ಲಿ ಅಂತಹ ಕಾರ್ಯಕ್ರಮಗಳು ಮತ್ತು ಉತ್ಸವಗಳು ದೊಡ್ಡದಾಗಿ ನಡೆಯುತ್ತವೆ. ಆದರೆ ಆಗ ಎಂದಿಗೂ ಆಗದ ಸಮಸ್ಯೆ ಕೆಲವರಿಗೆ ಈಗ ಆಗಿದೆ. ಇಂಥ ಕಮೆಂಟ್ಗಳಿಗೆ ವಿರೋಧ ವ್ಯಕ್ತಪಡಿಸಿರುವ ಬಿಜೆಪಿ ಬೆಂಬಲಿಗರು ನಟಿ ಶೋಭನಾ ಪರ ನಿಂತಿದ್ದಾರೆ. ಇದ್ದದ್ದು ಇದ್ದಹಾಗೆ ಹೇಳಿದರೆ ಹೊಟ್ಟೆ ಉರಿ ತಡೆದುಕೊಳ್ಳಲು ಕೆಲವರಿಗೆ ಆಗುವುದಿಲ್ಲ, ಏನೂ ಮಾಡಲು ಸಾಧ್ಯವಿಲ್ಲ ಎಂದು ಕಮೆಂಟ್ ಹಾಕಿದ್ದಾರೆ.
10 ನಿಮಿಷ ಹಾರ್ಟ್ಬೀಟ್ ನಿಂತಿತ್ತು: ಶವವಾಗಿದ್ದವ ಮತ್ತೆ ಬದುಕಿದ್ದೇ ಪವಾಡ! ಭಯಾನಕ ಅನುಭವ ಹೇಳಿದ ನಟ ಶ್ರೇಯಸ್