Asianet Suvarna News Asianet Suvarna News

ದಕ್ಷಿಣ ಭಾರತದಲ್ಲಿ ಮಿಷನ್‌-50ಗೆ ಬಿಜೆಪಿ ಪಣ: ರಾಜ್ಯದ 25 ಸೇರಿ ಒಟ್ಟು 50 ಸೀಟು ಗೆಲ್ಲಲು ಮೆಗಾ ಪ್ಲಾನ್

 ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದು, ತಾನು ಹಾಕಿಕೊಂಡಿರುವ 400 ಸೀಟುಗಳ ಗುರಿಯನ್ನು ತಲುಪಲು ದಕ್ಷಿಣ ಭಾರತದಲ್ಲಿ 40-50 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ.

Loksabha election 2024 BJP Mega plan to win 50 seats in South India including 25 in the Karnataka akb
Author
First Published Jan 4, 2024, 7:39 AM IST

ನವದೆಹಲಿ: ಲೋಕಸಭಾ ಚುನಾವಣೆಗೆ ಬಿಜೆಪಿ ಈಗಾಗಲೇ ತೆರೆಮರೆಯಲ್ಲಿ ಸಿದ್ಧತೆ ಆರಂಭಿಸಿದ್ದು, ತಾನು ಹಾಕಿಕೊಂಡಿರುವ 400 ಸೀಟುಗಳ ಗುರಿಯನ್ನು ತಲುಪಲು ದಕ್ಷಿಣ ಭಾರತದಲ್ಲಿ 40-50 ಕ್ಷೇತ್ರಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ.

ಇದರ ಭಾಗವಾಗಿಯೇ ಪ್ರಧಾನಿ ನರೇಂದ್ರ ಮೋದಿಯವರು ಮೂರು ದಿನಗಳ ಕಾಲ ದಕ್ಷಿಣ ಭಾರತದ ಪ್ರವಾಸ ಮಾಡುತ್ತಿದ್ದಾರೆ. ತಮಿಳುನಾಡು ಹಾಗೂ ಲಕ್ಷದ್ವೀಪದಲ್ಲಿ ಸಾವಿರಾರು ಕೋಟಿ ರು. ಕಾಮಗಾರಿಗೆ ಕಳೆದ 2 ದಿನದಲ್ಲಿ ಚಾಲನೆ ನೀಡಿದ್ದಾರೆ.. ಅಲ್ಲದೆ ಕೇರಳದ ತ್ರಿಶೂರ್‌ನಲ್ಲಿ ಬಿಜೆಪಿ ಬೃಹತ್‌ ಸಮಾವೇಶದಲ್ಲಿ ನಡೆಸಿದ್ದಾರೆ. ಎನ್ನಲಾಗಿದೆ. ಜೊತೆಗೆ ಕೇರಳದ ವಯನಾಡಿನಲ್ಲೂ ರಾಹುಲ್‌ ಗಾಂಧಿ ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತಿಸುತ್ತಿದೆ ಎಂದು ಗೊತ್ತಾಗಿದೆ.

ಲೋಕಸಭಾ ಚುನಾವಣೆ: ಇಂದು ವರಿಷ್ಠರ ಜೊತೆ ಸಿದ್ದರಾಮಯ್ಯ, ಡಿಕೆಶಿ ರಣತಂತ್ರ ಸಭೆ!

ಕಳೆದ ಬಾರಿ 25 ಕ್ಷೇತ್ರ ಗೆದ್ದಿದ್ದ ಕರ್ನಾಟಕದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಸೋತಿದ್ದರೂ ಮತ್ತೆ ಎಲ್ಲ 25 ಸ್ಥಾನಗಳನ್ನು ಉಳಿಸಿಕೊಳ್ಳಲು ತಾಲೀಮು ಆರಂಭಿಸಿದೆ. ಅಲ್ಲದೆ ನೆರೆಯ ತೆಲಂಗಾಣದಲ್ಲೂ ಕಳೆದ ಬಾರಿ ಗೆದ್ದಿದ್ದ 4 ಸ್ಥಾನಗಳ ಜೊತೆಗೆ ಮತ್ತಷ್ಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದೆ. ಜೊತೆಗೆ ಆಂಧ್ರ ಪ್ರದೇಶದಲ್ಲೂ ಸಹ ಖಾತೆ ತೆರೆಯಲು ಎದುರು ನೋಡುತ್ತಿದೆ ಮತ್ತು ತಮಿಳುನಾಡಿನಲ್ಲಿ ಸಾಧ್ಯವಾದಷ್ಟು ಸ್ಥಾನ ಗೆಲ್ಲಲು ತಂತ್ರ ರೂಪಿಸಿದೆ. ಒಟ್ಟಾರೆ, ಕಳೆದ ಬಾರಿ ಕರ್ನಾಟಕದಲ್ಲಿ ಗೆದ್ದಿದ್ದ 25 ಸ್ಥಾನಗಳನ್ನು ಉಳಿಸಿಕೊಳ್ಳುವ ಜೊತೆಗೆ ಇತರ ರಾಜ್ಯಗಳಿಂದ ಕನಿಷ್ಠ 15-25 ಕ್ಷೇತ್ರ ಗೆಲ್ಲುವ ಮೂಲಕ ಮಿಷನ್‌-50 ಸಾಧಿಸುವ ಗುರಿ ಹಾಕಿಕೊಂಡಿದೆ ಎಂದು ಮಾಧ್ಯಮ ವರದಿಯೊಂದು ಹೇಳಿದೆ. ದಕ್ಷಿಣ ಭಾರತದಲ್ಲಿರುವ 129 ಲೋಕಸಭಾ ಕ್ಷೇತ್ರಗಳ ಪೈಕಿ ಕಳೆದ ಬಾರಿ ಕೇವಲ 29 ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದಿತ್ತು.

ಲಕ್ಷದ್ವೀಪ ಗಾತ್ರದಲ್ಲಿ ಚಿಕ್ಕದು, ಆದರೆ ಹೃದಯ ದೊಡ್ಡದು: ಮೋದಿ

ಕವರಟ್ಟಿ: ಲಕ್ಷದ್ವೀಪವು ಗಾತ್ರದಲ್ಲಿ ಚಿಕ್ಕದಾದರೂ ಇಲ್ಲಿನ ಜನರ ಹೃದಯ ಬಹಳ ದೊಡ್ಡದು ಎಂಬುದಾಗಿ ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ಈ ಮೂಲಕ ಮುಸ್ಲಿಂ ಬಾಹುಳ್ಯದ ಲಕ್ಷದ್ವೀಪದಲ್ಲಿ ಮುಸ್ಲಿಂ ಮತದಾರರ ಮನಗೆಲ್ಲಲು ಯತ್ನ ನಡೆಸಿದ್ದಾರೆ.

ಕವರಟ್ಟಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಪ್ರಧಾನಿ, ‘ನನ್ನನ್ನು ಇಲ್ಲಿಗೆ ಬರಮಾಡಿಕೊಂಡ ರೀತಿಯಿಂದ ನಾನು ಬಹಳ ಮಂದಸ್ಮಿತನಾಗಿದ್ದೇನೆ. ಲಕ್ಷದ್ವೀಪ ಗಾತ್ರದಲ್ಲಿ ಚಿಕ್ಕದಾದರೂ ಇಲ್ಲಿನ ಜನರ ಪ್ರೀತಿ ಮತ್ತು ಆಶೀರ್ವಾದ ತೋರುವ ಗುಣ ಬಹಳ ದೊಡ್ಡದು. ಇದಕ್ಕೆ ನಾನು ನಿಮಗೆ ಕೃತಜ್ಞತೆ ಅರ್ಪಿಸುತ್ತೇನೆ’ ಎಂದು ತಿಳಿಸಿದರು. ಲಕ್ಷದ್ವೀಪದಲ್ಲಿ ಮುಸ್ಲಿಮರೇ ಹೆಚ್ಚು ಎಂಬುದು ಇಲ್ಲಿ ಗಮನಾರ್ಹ.
 

ಲೋಕಸಭಾ ಸೀಟು ಹಂಚಿಕೆ ಚರ್ಚೆಗೆ ಎಚ್‌.ಡಿ.ಕುಮಾರಸ್ವಾಮಿ ಶೀಘ್ರ ದಿಲ್ಲಿಗೆ

ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ

ಇದೇ ವೇಳೆ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದ ಪ್ರಧಾನಿ ಮೋದಿ, ‘ಹಿಂದಿನ (ಕಾಂಗ್ರೆಸ್‌) ಸರ್ಕಾರಗಳು ದೂರದ ರಾಜ್ಯಗಳು ಮತ್ತು ಸಮುದ್ರದೊಳಗಿನ ಪ್ರದೇಶದ ಅಭಿವೃದ್ಧಿಯನ್ನು ನಿರ್ಲಕ್ಷಿಸಿ ತಮ್ಮ ಪಕ್ಷಗಳನ್ನು ಅಭಿವೃದ್ಧಿ ಪಡಿಸಿಕೊಂಡವು. ಆದರೆ ನಾನು ನಿಮಗೆ 2020ರಲ್ಲಿ ಮುಂದಿನ 1000 ದಿನಗಳ ಒಳಗೆ ಅತ್ಯಂತ ವೇಗಯುತ ಇಂಟರ್‌ನೆಟ್‌ ಸೌಲಭ್ಯ ಕೊಡುವುದಾಗಿ ವಾಗ್ದಾನ ಕೊಟ್ಟಿದ್ದೆ. ಅದನ್ನು ಸಬ್‌ಮೆರಿನ್‌ ಆಪ್ಟಿಕ್‌ ಫೈಬರ್‌ ಪ್ರಾಜೆಕ್ಟ್‌ ಮೂಲಕ ಇಂದು ಉದ್ಘಾಟಿಸಿದ್ದೇನೆ. ಇನ್ನು ಮುಂದೆ ಲಕ್ಷದ್ವೀಪದಲ್ಲಿ ನೂರು ಪಟ್ಟು ವೇಗದಲ್ಲಿ ದೂರಸಂಪರ್ಕ ಮತ್ತು ಅಂತರ್ಜಾಲ ಸೇವೆಗಳು ದೊರಕಲಿವೆ ಎಂದರು.

Follow Us:
Download App:
  • android
  • ios