Asianet Suvarna News Asianet Suvarna News

D Company: ಸುಳಿವು ನೀಡಿದರೆ 90 ಲಕ್ಷ ಬಹುಮಾನ, ದಾವೂದ್‌ ಹೊರತಾಗಿ ಎಲ್ಲರ ಹೊಸ ಚಿತ್ರ ಪ್ರಕಟಿಸಿದ NIA!

ರಾಷ್ಟ್ರೀಯ ತನಿಖಾ ದಳ ಗುರುವಾರ, ಭಯೋತ್ಪಾದಕರಾದ ದಾವೂದ್‌ ಇಬ್ರಾಹಿಂ ಹಾಗೂ ಆತನ ಗ್ಯಾಂಗ್‌ನ ಸುಳಿವು ನೀಡಿದವರಿಗೆ ಒಟ್ಟಾರೆ 90 ಲಕ್ಷ ಬಹುಮಾನ ಘೋಷಣೆ ಮಾಡಿದೆ. ಇದರಲ್ಲಿ ಭಾರತಕ್ಕೆ ಬೇಕಾಗಿರುವ ಪರಮಪಾತಕಿ ದಾವೂದ್‌ ಇಬ್ರಾಹಿಂಗೆ ಗರಿಷ್ಠ 25 ಲಕ್ಷ ರೂಪಾಯಿ ಬಹುಮಾನ ಪ್ರಕಟಿಸಲಾಗಿದೆ.

90 lakh reward on D gang NIA released fresh photos of everyone for the first time old picture of Dawood san
Author
First Published Sep 1, 2022, 1:28 PM IST

ನವದೆಹಲಿ (ಸೆ. 1): ದಾವೂದ್ ಇಬ್ರಾಹಿಂ ಮತ್ತು ಡಿ ಕಂಪನಿಯೊಂದಿಗೆ ಸಂಬಂಧ ಹೊಂದಿರುವವರ ಬಗ್ಗೆ ಮಾಹಿತಿ ನೀಡಿದವರಿಗೆ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಬಹುಮಾನ ಘೋಷಿಸಿದೆ. ಎನ್‌ಐಎ ಗುರುವಾರ ಬಹುಮಾನ ಮೊತ್ತದ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ದಾವೂದ್ ಇಬ್ರಾಹಿಂ ಸುಳಿವು ನೀಡಿದವರಿಗೆ ಗರಿಷ್ಠ 25 ಲಕ್ಷ ಬಹುಮಾನ ಘೋಷಣೆ ಮಾಡಲಾಗಿದೆ. ಇದಲ್ಲದೇ ಛೋಟಾ ಶಕೀಲ್ ಬಗ್ಗೆ ಮಾಹಿತಿ ನೀಡಿದವರಿಗೆ 20 ಲಕ್ಷ ಬಹುಮಾನ ಘೋಷಿಸಲಾಗಿದೆ. ದಾವೂದ್, ಛೋಟಾ ಶಕೀಲ್, ಅನೀಸ್ ಇಬ್ರಾಹಿಂ, ಜಾವೇದ್ ಚಿಕ್ನಾ ಮತ್ತು ಟೈಗರ್ ಮೆಮನ್ ಹೆಸರುಗಳು ಪಟ್ಟಿಯಲ್ಲಿವೆ. ಎನ್‌ಐಎ ಸಾರ್ವಜನಿಕವಾಗಿ ಇಷ್ಟೊಂದು ದೊಡ್ಡ ಮೊತ್ತದ ಬಹುಮಾನ ಘೋಷಿಸಿರುವುದು ಇದೇ ಮೊದಲು. ವಿಶೇಷವೆಂದರೆ ಇದೇ ಮೊದಲ ಬಾರಿಗೆ ಇವರಿಬ್ಬರ ಹಳೆಯ ಮತ್ತು ಹೊಸ ಚಿತ್ರಗಳು ಒಟ್ಟಿಗೆ ಬಿಡುಗಡೆಯಾಗಿವೆ. ಆದರೆ, ದಾವೂದ್‌ ಇಬ್ರಾಹಿಂನ ಹೊಸ ಫೋಟೋವನ್ನು ಪ್ರಕಟ ಮಾಡಲಾಗಿಲ್ಲ. 1993 ರ ಮುಂಬೈ ಸ್ಫೋಟದ ನಂತರ ಹಲವಾರು ಸರ್ಕಾರಿ ಸಂಸ್ಥೆಗಳು ಬಿಡುಗಡೆ ಮಾಡಿದ ಅವರ ಅದೇ ಫೋಟೋವನ್ನು ಎನ್‌ಐಎ ಬಿಡುಗಡೆ ಮಾಡಿದೆ.


ಮುಂಬೈನಲ್ಲಿ ಸಕ್ರಿಯವಾಗಿದ್ದ ಡಿ ಕಂಪನಿ: ಮುಂಬೈನಲ್ಲಿ ಡ್ರಗ್ಸ್ ಮತ್ತು ಅಕ್ರಮ ಆಸ್ತಿಗಳ ಮೂಲಕ ಭಯೋತ್ಪಾದಕರು ಹಣ ಸಂಪಾದನೆ ಮಾಡಿರುವ ಪುರಾವೆಗಳನ್ನು ಎನ್ಐಎ (NIA) ಪತ್ತೆ ಮಾಡಿದೆ. ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸಿಂಡಿಕೇಟ್ ಇದರ ಹಿಂದೆ ಕೆಲಸ ಮಾಡುತ್ತಿದೆ. ಐಎಸ್‌ಐ ನೆರವಿನೊಂದಿಗೆ ಭಯೋತ್ಪಾದನೆಯ ಹೊಸ ಘಟಕವನ್ನು ಸಿದ್ಧಪಡಿಸಲಾಗುತ್ತಿದೆ. ಎನ್‌ಐಎ ಗುಪ್ತಚರ ವರದಿ ಪ್ರಕಾರ ( intelligence report of NIA), ದಾವೂದ್ ಗ್ಯಾಂಗ್‌ನ ಜನರು ಪಾಕಿಸ್ತಾನವನ್ನು ಬೆಂಬಲಿಸುವ ಭಯೋತ್ಪಾದಕ ಸಂಘಟನೆಗಳಿಗೆ ಹಣ ನೀಡುತ್ತಿದ್ದಾರೆ. ಇದರಿಂದಾಗಿ ಮುಂಬೈ, ಥಾಣೆ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಲಿಗೆ, ಬೆಟ್ಟಿಂಗ್, ಬಿಲ್ಡರ್‌ಗಳಿಗೆ ಬೆದರಿಕೆ, ಡ್ರಗ್ಸ್ ದಂಧೆ ಹೆಚ್ಚಾಗಿದೆ.

ಬಹುಮಾನ ಮೊತ್ತ ಘೋಷಿಸಿರದ ಗೃಹ ಸಚಿವಾಲಯ: ಕಿರುಚಿತ್ರಗಳನ್ನು ನಿರ್ಮಿಸಿದ ನಿರ್ಮಾಪಕ ಉಲ್ಲಾಸ್ ಪಿ.ರೇವಣಕರ್ ಅವರು ದಾವೂದ್ ಮತ್ತು ಅವನ ಗ್ಯಾಂಗ್ ಸದಸ್ಯರ ಮೇಲೆ ಬಿಡುಗಡೆ ಮಾಡಿದ ಬಹುಮಾನದ ಮೊತ್ತವನ್ನು ತಿಳಿಸುವಂತೆ ಒತ್ತಾಯಿಸಿ 2016 ರಲ್ಲಿ ಗೃಹ ಸಚಿವಾಲಯಕ್ಕೆ ಆರ್‌ಟಿಐ ಸಲ್ಲಿಸಿದ್ದರು. ಆಗ ಗೃಹ ಸಚಿವಾಲಯ ನೀಡಿದ ಉತ್ತರ- ‘ಅಂತಹ ಯಾವುದೇ ಮಾಹಿತಿ ಲಭ್ಯವಿಲ್ಲ’. ಈ ಉತ್ತರದಿಂದ ತೃಪ್ತರಾಗದ ರೇವಣಕರ್ ಮುಖ್ಯ ಸಾರ್ವಜನಿಕ ಮಾಹಿತಿ ಅಧಿಕಾರಿಗೆ ಮನವಿ ಸಲ್ಲಿಸಿದರು. ಆದರೆ, ಅವರಿಂದಲೂ ಯಾವುದೇ ಉತ್ತರ ಬಂದಿರಲಿಲ್ಲ.

ಇನ್ನು ದಾವೂದ್‌ ಇಬ್ರಾಹಿಂ ಕುರಿತಾಗಿ ಇನ್ನೂ ಕೆಲವು ಮಾಹಿತಿಗಳನ್ನು ಕೇಳಲಾಗಿತ್ತು. ಅದರಲ್ಲಿ ಪ್ರಮುಖವಾದವೆಂದರೆ, ಪರಾರಿಯಾದ ಭಯೋತ್ಪಾದಕರ ಬಗ್ಗೆ ಮಾಹಿತಿ ನೀಡಲು ಭಾರತದ ಯಾವುದೇ ಸಚಿವಾಲಯವು ಇದುವರೆಗೆ ಇಟ್ಟುಕೊಂಡಿರುವ ಗರಿಷ್ಠ ಬಹುಮಾನ ಎಷ್ಟು? ಹಾಗೂ 10 ಮೋಸ್ಟ್ ವಾಂಟೆಡ್ ಭಯೋತ್ಪಾದಕರ ಪಟ್ಟಿಯನ್ನು ನೀಡಿ, 1990 ಮತ್ತು 2015 ರ ನಡುವೆ ಯಾವುದೇ ಸಚಿವಾಲಯವು ಯಾರಿಗೆ ಭಯೋತ್ಪಾದಕರ ಬಗ್ಗೆ ನೀಡಿದ ಮಾಹಿತಿಗೆ ಕೊಟ್ಟಿರುವ ಬಹುಮಾನವೆಷ್ಟು ಎನ್ನುವ ಪ್ರಶ್ನೆಗಳನ್ನು ಕೇಳಲಾಗಿತ್ತು.

NIA ಭರ್ಜರಿ ಕಾರ್ಯಾಚರಣೆ, ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತರ ಮೇಲೆ ದಾಳಿ!

2015ರ ಸೆಪ್ಟೆಂಬರ್ 6 ರಂದು ಸಲ್ಲಿಕೆಯಾದ ಆರ್‌ಟಿಐಗೆ ಕೇಂದ್ರ ಗೃಹ ಸಚಿವಾಲಯ ಉತ್ತರ ನೀಡಿತ್ತು.ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಎಂ.ಎ.ಗಣಪತಿ ಅವರು, 2015ರ ನವೆಂಬರ್ 30ರಂದು ಆನ್‌ಲೈನ್‌ನಲ್ಲಿ ಸಲ್ಲಿಸಿರುವ ರೇವಣಕರ್ ಅವರ ಮೇಲ್ಮನವಿ ಮತ್ತು ಅವರ ಮೂಲ ಆರ್‌ಟಿಐ ಅರ್ಜಿಯನ್ನು ನೋಡಿದ್ದೇನೆ ಎಂದು ಹೇಳಿದರು. ಆದರೆ ಈ ಮಾಹಿತಿ ತಾವು ಸಿಪಿಐಒ ಆಗಿರುವ ಕಚೇರಿಯಲ್ಲಿ ಲಭ್ಯವಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ ಎಂದು ಉತ್ತರದಲ್ಲಿ ತಿಳಿಸಲಾಗಿದೆ.

ಭಾರತದಲ್ಲಿ ದಾಳಿಗೆ ದಾವೂದ್‌ ‘ವಿಶೇಷ ಟೀಂ’, ಹಿಂಸಾಚಾರಕ್ಕೆ ಯತ್ನ!

2003 ರಲ್ಲಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ದಾವೂದ್ ಇಬ್ರಾಹಿಂಗೆ $25 ಮಿಲಿಯನ್ ಬಹುಮಾನವನ್ನು ಘೋಷಣೆ ಮಾಡಿತ್ತು. ದಾವೂದ್ ಅಲ್ಲದೆ, ಲಷ್ಕರ್ ಮುಖ್ಯಸ್ಥ ಹಫೀಜ್ ಸಯೀದ್, ಜೈಶ್ ಮುಖ್ಯಸ್ಥ ಮೌಲಾನಾ ಮಸೂದ್ ಅಜರ್, ಹಿಜ್ಬುಲ್ ಮುಜಾಹಿದ್ದೀನ್ ಸಂಸ್ಥಾಪಕ ಸೈಯದ್ ಸಲಾವುದ್ದೀನ್ ಮತ್ತು ಅಬ್ದುಲ್ ರೌಫ್ ಅಸ್ಗರ್ ಕೂಡ ಭಾರತದ ಮೋಸ್ಟ್ ವಾಂಟೆಡ್ ಪಟ್ಟಿಯಲ್ಲಿ ಸೇರಿದ್ದಾರೆ.

Follow Us:
Download App:
  • android
  • ios