* 'ಸ್ಫೋಟ, ದಾಳಿ ಮೂಲಕ ಭಾರತದಲ್ಲಿ ಹಿಂಸಾಚಾರಕ್ಕೆ ಯತ್ನ* ಭಾರತದಲ್ಲಿ ದಾಳಿಗೆ ದಾವೂದ್‌ ‘ವಿಶೇಷ ಟೀಂ’* ಭಾರತದ ರಾಜಕಾರಣಿ, ಉದ್ಯಮಿಗಳೇ ದಾವೂದ್‌ ಟಾರ್ಗೆಟ್‌* ರಾಷ್ಟ್ರೀಯ ತನಿಖಾ ದಳದಿಂದ ಸ್ಫೋಟಕ ಮಾಹಿತಿ ಬಹಿರಂಗ

ನವದೆಹಲಿ(ಫೆ.20): ರಾಷ್ಟ್ರ ರಾಜಧಾನಿ ನವದೆಹಲಿ ಹಾಗೂ ವಾಣಿಜ್ಯ ರಾಜಧಾನಿ ಮುಂಬೈ ಸೇರಿದಂತೆ ದೇಶದ ಇನ್ನಿತರ ಭಾಗಗಳಲ್ಲಿ ಭಾರೀ ರಕ್ತಪಾತ ಹರಿಸಲು ಪಾಕ್‌ನಲ್ಲಿ ಅವಿತಿರುವ ಪಾತಕಿ ದಾವೂದ್‌ ಇಬ್ರಾಹಿಂ ಬಹುದೊಡ್ಡ ಸಂಚು ರೂಪಿಸಿದ್ದಾನೆ ಎಂಬ ವಿಚಾರ ರಾಷ್ಟ್ರೀಯ ತನಿಖಾ ದಳ(ಎನ್‌ಐಎ)ದಿಂದ ಬಹಿರಂಗವಾಗಿದೆ.

ಭಾರತದಲ್ಲಿ ವಿಧ್ವಂಸಕ ಕೃತ್ಯಕ್ಕಾಗಿ ಒಂದು ವಿಶೇಷ ತಂಡ ರಚಿಸಿರುವ ದಾವೂದ್‌, ಸುಧಾರಿತ ಸ್ಫೋಟಕಗಳು ಮತ್ತು ಮಾರಕಾಸ್ತ್ರಗಳನ್ನು ಬಳಸಿ ಎಸಗುವ ಮೂಲಕ ಭಾರತದಲ್ಲಿ ಹಿಂಸಾಚಾರ ಸೃಷ್ಟಿಸುವುದು ಆತನ ದುರುದ್ದೇಶವಾಗಿದೆ. ಅಲ್ಲದೆ ದೇಶದ ಪ್ರಖ್ಯಾತ ರಾಜಕಾರಣಿಗಳು ಮತ್ತು ಉದ್ಯಮಿಗಳ ಹೆಸರುಗಳ ಸಹ ಈ ಉಗ್ರನ ಟಾರ್ಗೆಟ್‌ ಪಟ್ಟಿಯಲ್ಲಿವೆ ಎಂದು ಎನ್‌ಐಎ ಹೇಳಿದೆ.

ದಾವೂದ್‌ ನಂಟಿನ ಡ್ರಗ್ಸ್‌ ಫ್ಯಾಕ್ಟರಿ ಮುಂಬೈನಲ್ಲಿ ಪತ್ತೆ!

ಇತ್ತೀಚೆಗಷ್ಟೇ ಭಯೋತ್ಪಾದಕ ಚಟುವಟಿಕೆಗಳಿಗಾಗಿ ಹಣಕಾಸು ಪ್ರಕ್ರಿಯೆಯಲ್ಲಿ ತೊಡಗಿದ ಪ್ರಕರಣದಲ್ಲಿ ದಾವೂದ್‌ ಇಬ್ರಾಹಿಂ ಸೋದರ ಇಕ್ಬಾಲ್‌ ಕಸ್ಕರ್‌, ಅವನ ಆಪ್ತರು ಮತ್ತು ಗ್ಯಾಂಗ್‌ ಸದಸ್ಯರನ್ನು ಫೆ.24ರವರೆಗೆ ಜಾರಿ ನಿರ್ದೇಶನಾಲಯ ವಶಕ್ಕೆ ಪಡೆದಿದ್ದು, ಅವರನ್ನು ವಿಚಾರಣೆ ನಡೆಸಲಿದೆ. ಇದರ ಮಧ್ಯೆಯೇ ಭಾರತವನ್ನು ದಾವೂದ್‌ ಗುರಿಯಾಗಿಸಿದ್ದಾನೆ ಎಂಬ ವಿಚಾರ ಬೆಳಕಿಗೆ ಬಂದಿದೆ.

93ರ ಮುಂಬೈ ದಾಳಿ ರೂವಾರಿಗಳಿಗೆ ಪಾಕ್‌ ಆತಿಥ್ಯ: ಭಾರತ

1993ರ ಮುಂಬೈ ಸರಣಿ ಬಾಂಬ್‌ ದಾಳಿಗಳ ರೂವಾರಿಯ ಅಪರಾಧದ ಸಿಂಡಿಕೇಟ್‌ಗೆ ಪಾಕಿಸ್ತಾನ ರಕ್ಷಣೆಯಷ್ಟೇ ಅಲ್ಲದೆ ಪಂಚತಾರಾ ಹೋಟೆಲ್‌ನ ಸೇವಾ ಸೌಲಭ್ಯವನ್ನು ಸಹ ನೀಡಿತ್ತು ಎಂದು ಭಾರತ ಹೇಳಿದೆ. ತನ್ಮೂಲಕ ಈ ಬಾಂಬ್‌ ದಾಳಿಯ ರೂವಾರಿ ಮತ್ತು ಭಾರತಕ್ಕೆ ಬೇಕಿರುವ ಮೋಸ್ಟ್‌ ವಾಂಟೆಡ್‌ ಭಯೋತ್ಪಾದಕ ಡಿ ಕಂಪನಿ ಮುಖ್ಯಸ್ಥ ದಾವೂದ್‌ ಇಬ್ರಾಹಿಂಗೆ ಪಾಕಿಸ್ತಾನ ಭದ್ರ ನೆಲೆ ಕಲ್ಪಿಸಿತ್ತು ಎಂದು ಪರೋಕ್ಷವಾಗಿ ಭಾರತ ಹೇಳಿದೆ.

ಜಾಗತಿಕ ಭಯೋತ್ಪಾದನೆ ನಿಗ್ರಹ ಕೌನ್ಸಿಲ್‌ನಿಂದ ಆಯೋಜಿಸಲಾದ 2022ರ ಅಂತಾರಾಷ್ಟ್ರೀಯ ಉಗ್ರ ನಿಗ್ರಹ ಸಮಾವೇಶದಲ್ಲಿ ವಿಶ್ವಸಂಸ್ಥೆ ದೂತವಾಸಕ್ಕೆ ಭಾರತದ ಶಾಶ್ವತ ಪ್ರತಿನಿಧಿಯಾಗಿರುವ ಟಿ.ಎಸ್‌ ತಿರುಮೂರ್ತಿ ಅವರು ಮಂಗಳವಾರ ಮಾತನಾಡಿ, 1993ರ ಮುಂಬೈ ಬಾಂಬ್‌ ದಾಳಿಗಳನ್ನು ಎಸಗಿದ ಉಗ್ರ ಸಿಂಡಿಕೇಟ್‌ಗೆ ಕೇವಲ ಬೆಂಬಲವಷ್ಟೇ ಅಲ್ಲದೆ ಪಂಚತಾರಾ ಹೋಟೆಲ್‌ ಸೌಲಭ್ಯವನ್ನು ನೀಡಿದ ದೇಶವನ್ನು ನಾವು ಕಂಡಿದ್ದೇವೆ ಎಂದು ಹೇಳಿದರು.

ಕುಕು ಕಾಗೆಯನ್ನು ಮನೆಯ ಮಗುವಿನಂತೆಯೇ ಸಾಕ್ತಾರೆ ಈ ಮನೆಯ ಜನ

1267 ಅಲ್‌ಖೈದಾ ನಿರ್ಬಂಧಗಳ ಸಮಿತಿ ಸೇರಿದಂತೆ ವಿಶ್ವಸಂಸ್ಥೆಯ ನಿರ್ಬಂಧದ ಕ್ರಮಗಳು ಭಯೋತ್ಪಾದನೆಗೆ ಹಣ ಪೂರೈಕೆ, ಉಗ್ರರ ಚಲನವಲನಗಳು ಮತ್ತು ಭಯೋತ್ಪಾದನೆ ಸಂಘಟನೆಗಳು ಶಸ್ತ್ರಾಸ್ತ್ರ ಪಡೆಯದಂತೆ ನಿಯಂತ್ರಿಸಲು ಬಹುಮುಖ್ಯ ಪಾತ್ರ ವಹಿಸಲಿವೆ. ಆದಾಗ್ಯೂ, ಈ ಕ್ರಮಗಳ ಜಾರಿಯು ಎದುರಾಗಿರುವ ಸವಾಲುಗಳು ಕಳವಳಕಾರಿಯಾಗಿವೆ ಎಂದು ಹೇಳಿದರು.

ಕೌನ್ಸಿಲ್‌ನ ಎಲ್ಲಾ ನಿರ್ಬಂಧಗಳ ಆಡಳಿತಗಳು ಸರಿಯಾದ ಪ್ರಕ್ರಿಯೆಯಲ್ಲಿ ತಮ್ಮ ಕೆಲಸ ನಿರ್ವಹಿಸುವುದು ನಿರ್ಣಾಯಕವಾಗಿದೆ. ನಿರ್ಧಾರ ಕೈಗೊಳ್ಳುವ ಪ್ರಕ್ರಿಯೆ, ವಸ್ತುನಿಷ್ಠ, ತ್ವರಿತ, ವಿಶ್ವಾಸಾರ್ಹ, ಸಾಕ್ಷ್ಯ ಆಧಾರಿತ ಮತ್ತು ಪಾರದರ್ಶಕವಾಗಿರಬೇಕೇ ಹೊರತು ರಾಜಕೀಯ ಮತ್ತು ಧಾರ್ಮಿಕವಾಗಿರಬಾರದು ಎಂದು ತಿಳಿಸಿದರು.