ಇಂದು ಮೋದಿಯಿಂದ 71000 ನೌಕರಿ ಪ್ರದಾನ 10 ಲಕ್ಷ ಉದ್ಯೋಗ ಸೃಷ್ಟಿಯ 2ನೇ ಕಂತು ಇತ್ತೀಚೆಗೆ 75000 ಕೆಲಸ ನೀಡಿದ್ದ ಪ್ರಧಾನಿ ಆನ್‌ಲೈನ್‌ನಲ್ಲಿ ಪ್ರಧಾನಿಯಿಂದ ನೇಮಕಾತಿ ಪತ್ರಗಳ ವಿತರಣೆ ಕರ್ಮಯೋಗಿ ಪ್ರಾರಂಭ್‌ ಎಂಬ ಆನ್‌ಲೈನ್‌ ತರಬೇತಿ ಉದ್ಘಾಟನೆ

ನವದೆಹಲಿ (ನ.21) : ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ರೋಜಗಾರ್‌ ಮೇಳದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು, ಹೊಸದಾಗಿ ನೇಮಕಗೊಂಡ ನೌಕರರಿಗೆ 71 ಸಾವಿರ ಮಂಗಳವಾರ ನೇಮಕಾತಿ ಪತ್ರಗಳನ್ನು ವಿತರಿಸಲಿದ್ದಾರೆ. ಅಲ್ಲದೇ ನೇಮಕಗೊಂಡ ನೌಕರರಿಗೆ ಆನ್‌ಲೈನ್‌ನಲ್ಲಿ ತರಬೇತಿ ನೀಡುವ ‘ಕರ್ಮಯೋಗಿ ಪ್ರಾರಂಭ’ ಹೊಸ ಪ್ರಕ್ರಿಯೆಗೂ ಮೋದಿ ಚಾಲನೆ ನೀಡಲಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಕೇಂದ್ರ ಸರ್ಕಾರ ಇನ್ನು 1 ವರ್ಷದಲ್ಲಿ 10 ಲಕ್ಷ ಉದ್ಯೋಗಿಗಳ ನೇಮಕ ಗುರಿ ಹೊಂದಿದೆ. ಈ ನಿಮಿತ್ತ ಕಳೆದ ಅಕ್ಟೋಬರ್‌ನಲ್ಲಿ ಸಹ ಮೋದಿ ನೇಮಕಗೊಂಡ 75 ಸಾವಿರ ಜನರಿಗೆ ನೇಮಕಾತಿ ಪತ್ರಗಳನ್ನು ವಿತರಿಸಿದ್ದರು. ಇದರ 2ನೇ ಭಾಗವಾಗಿ ಮಂಗಳವಾರ 71 ಸಾವಿರ ಜನರ ನೇಮಕ ಪತ್ರವನ್ನು ಆನ್‌ಲೈನ್‌ನಲ್ಲಿ ಮೋದಿ ಸಾಂಕೇತಿಕವಾಗಿ ವಿತರಿಸಲಿದ್ದಾರೆ. ವಿವಿಧ ರಾಜ್ಯಗಳಲ್ಲಿ ನಡೆಯುವ ಸಮಾರಂಭದಲ್ಲಿ ವ್ಯಕ್ತಿಗತವಾಗಿ ನೇಮಕ ಪತ್ರ ನೀಡಲಾಗುತ್ತದೆ. ಶಿಕ್ಷಕ, ಅಧ್ಯಾಪಕ, ವೈದ್ಯ, ನರ್ಸ್‌ ಹಾಗೂ ವೈದ್ಯಕೀಯ ಸಂಬಂಧಿಸಿದ ಕ್ಷೇತ್ರಗಳಲ್ಲಿ ನೇಮಕಾತಿ ನಡೆಯುತ್ತಿದೆ.

ಸೋಮನಾಥ ಸನ್ನಿಧಿಯಲ್ಲಿ ಮೋದಿ: ಮೂರು ದಿನಗಳಲ್ಲಿ 25 ರ‍್ಯಾಲಿ

ಕರ್ಮಯೋಗಿ ತರಬೇತಿ:

ಈ ನಡುವೆ, ನೇಮಕಗೊಂಡ ನೌಕರರಿಗೆ, ಜ್ಞಾನ, ಸಾಮರ್ಥ್ಯ ಹಾಗೂ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ‘ಕರ್ಮಯೋಗಿ ಪ್ರಾರಂಭ್‌’ ಎಂಬ ಆನ್‌ಲೈನ್‌ ತರಬೇತಿ ಕಾರ್ಯಕ್ರಮವೂ ಆರಂಭವಾಗಲಿದೆ. ಇವರು ಜಿಜಟಠಿka್ಟಞayಟಜಜಿ.ಜಟv ವೆಬ್‌ಸೈಟ್‌ ಸಹಾಯವನ್ನು ಪಡೆದು ಕೌಶಲ್ಯ ವೃದ್ಧಿಸಿಕೊಳ್ಳಬಹುದು ಎಂದು ಸರ್ಕಾರ ಹೇಳಿದೆ. 

ಬಿಜೆಪಿ ಮೋದಿ ಹೆಸರಲ್ಲಿ ವೋಟು ಕೇಳೋದೇಕೆ?: ಅಮಿತ್‌ ಶಾ