ಒಡಿಶಾದಲ್ಲಿ 2 ತಾಸಲ್ಲಿ 61 ಸಾವಿರ ಸಿಡಿಲು, 10 ಜನರ ಸಾವು!
ಒಡಿಶಾದಲ್ಲಿ ಶನಿವಾರ ಕೇವಲ 2 ತಾಸುಗಳಲ್ಲಿ ಬರೋಬ್ಬರಿ 61 ಸಾವಿರ ಸಿಡಿಲು ಬಡಿದಿದ್ದು, ರಾಜ್ಯದ ವಿವಿಧೆಡೆ 10 ಮಂದಿ ಸಾವನ್ನಪ್ಪಿದ್ದಾರೆ. ದೇಶದಲ್ಲಿ ಅತಿಹೆಚ್ಚು ಸಿಡಿಲು ಬಡಿಯುವ ರಾಜ್ಯ ಒಡಿಶಾ ಆಗಿದ್ದು, ಪ್ರತಿ ವರ್ಷ ನೂರಾರು ಜನರು ಸಾವನ್ನಪ್ಪುತ್ತಾರೆ.
ಭುವನೇಶ್ವರ (ಸೆ.5): ಕೇವಲ ಎರಡು ತಾಸುಗಳ ಅವಧಿಯಲ್ಲಿ ಬರೋಬ್ಬರಿ 61 ಸಾವಿರ ಸಿಡಿಲುಗಳು ಅಪ್ಪಳಿಸಿದ್ದರಿಂದ ಒಡಿಶಾದ ಆಯ್ದ ಭಾಗಗಳು ಶನಿವಾರ ಭೀತಿಯಿಂದ ತತ್ತರಿಸಲ್ಪಟ್ಟಿವೆ. ಈ ಸಿಡಿಲು ದಾಳಿಯಲ್ಲಿ 10 ಜನರು ಮೃತಪಟ್ಟಿದ್ದಾರೆ.
Bengaluru crime: ಡ್ರಗ್ಸ್ ಮಾರುತ್ತಿದ್ದ ಒಡಿಶಾ ಮೂಲದ 7 ಮಂದಿ ಸೆರೆ
ಶನಿವಾರ ಮಧ್ಯಾಹ್ನ ಭುವನೇಶ್ವರ ಹಾಗೂ ಆಸುಪಾಸಿನಲ್ಲಿ ಮಧ್ಯಾಹ್ನ ಮಳೆಯಾಯಿತು. ಆನಂತರ ಎರಡು ತಾಸುಗಳ ಅವಧಿಯಲ್ಲಿ 61 ಸಾವಿರ ಸಿಡಿಲುಗಳು ಅಬ್ಬರಿಸಿದವು. ಈ ಪೈಕಿ 36597 ಸಿಡಿಲುಗಳು ಮೋಡದಿಂದ ಮೋಡಕ್ಕೆ ಹಾಗೂ 25,753 ಸಿಡಿಲು ಮೋಡದಿಂದ ಭೂಮಿಗೆ ಅಪ್ಪಳಿಸಿತು. ಇದರಿಂದ ಜನರು ಆತಂಕಕ್ಕೆ ಒಳಗಾಗುವಂತಾಯಿತು. ವಿವಿಧ ಜಿಲ್ಲೆಗಳಲ್ಲಿ ಸಿಡಿಲಿಗೆ 10 ಜನರು ಬಲಿಯಾಗಿದ್ದಾರೆ ಎಂದು ಒಡಿಶಾ ರಾಜ್ಯ ಹವಾಮಾನ ಇಲಾಖೆ ಟ್ವೀಟರ್‌ನಲ್ಲಿ ಮಾಹಿತಿ ನೀಡಿದೆ.
ಬೆಳಗಾವಿ ವಿಭಜನೆ ವಿಚಾರದ ಬಗ್ಗೆ ಯಾವುದೇ ತೀರ್ಮಾನ ಸದ್ಯಕ್ಕಿಲ್ಲ: ಡಿ.ಕೆ.ಶಿವಕುಮಾರ್
ಭಾರೀ ಸಿಡಿಲು ಏಕೆ?: ಬಂಗಾಳಕೊಲ್ಲಿಯಿಂದ ಬೀಸಿ ಬರುತ್ತಿರುವ ಗಾಳಿಯಿಂದ ವಾತಾವರಣದಲ್ಲಿ ಶಾಖ ಮತ್ತು ಆದ್ರ್ರತೆ ಹೆಚ್ಚಾಗಿರುವುದರಿಂದ ಸಿಡಿಲು ಬಡಿಯುವುದು ಸಾಮಾನ್ಯವಾಗುತ್ತಿದೆ. ಅತಿಯಾದ ಬಿಸಿ ಗಾಳಿ ಹವಾಮಾನ ಬದಲಾವಣೆಯ ಜೊತೆಗೆ ಸಿಡಿಲು ಬಡಿಯಲು ಕಾರಣವಾಗುತ್ತಿದೆ. ಅಲ್ಲದೇ ಬಂಗಾಳ ಕೊಲ್ಲಿಯ ಮಾರುತದಿಂದ ಹೆಚ್ಚಾಗುತ್ತಿರುವ ಆದ್ರ್ರತೆ ಸಿಡಿಲು ಹೆಚ್ಚಳಕ್ಕೆ ಕಾರಣ ಎಂದು ಭುವನೇಶ್ವರದ ಐಎಂಡಿ ನಿರ್ದೇಶಕ ಎಸ್.ಸಿ.ಸಾಹು ಹೇಳಿದ್ದಾರೆ.
ಸಿಡಿಲಿಗೆ ನೂರಾರು ಸಾವು: ಒಡಿಶಾ ದೇಶದಲ್ಲೇ ಅತಿ ಹೆಚ್ಚು ಸಿಡಿಲು ಬಡಿತಕ್ಕೆ ಒಳಗಾಗುವ ರಾಜ್ಯವಾಗಿದೆ. 2020-21ರಲ್ಲಿ ರಾಜ್ಯದಲ್ಲಿ ಒಟ್ಟಾರೆ 20.43 ಲಕ್ಷ ಸಿಡಿಲು ದಾಖಲಾಗಿದ್ದವು. ಸಿಡಿಲು ಬಡಿತಕ್ಕೆ ಪ್ರತಿ ವರ್ಷ ರಾಜ್ಯದಲ್ಲಿ 150-200 ಜನರು ಸಾವನ್ನಪ್ಪುತ್ತಾರೆ.