ನಗರದಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದ ಏಳು ಮಂದಿಯನ್ನು ಪ್ರತ್ಯೇಕವಾಗಿ ಯಲಹಂಕ ಉಪನಗರ ಹಾಗೂ ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಬೆಂಗಳೂರು (ಸೆ.5): ನಗರದಲ್ಲಿ ಮಾದಕ ವಸ್ತು ಮಾರಾಟಕ್ಕೆ ಯತ್ನಿಸಿದ್ದ ಏಳು ಮಂದಿಯನ್ನು ಪ್ರತ್ಯೇಕವಾಗಿ ಯಲಹಂಕ ಉಪನಗರ ಹಾಗೂ ಕೊಡಿಗೇಹಳ್ಳಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಯಲಹಂಕ ಸಮೀಪ ಗ್ರಾಹಕರಿಗೆ ಗಾಂಜಾ ಪೂರೈಸಲು ಸಿದ್ಧರಾಗಿದ್ದ ಮೂವರು ಒಡಿಶಾ ಪ್ರಜೆಗಳು ಯಲಹಂಕ ಉಪನಗರ ಠಾಣೆ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಸುಧೀರ್‌ ರಾಣಾ, ಕ್ಯಾಂಬನ್‌ ಬಾಂಗ್‌ ಹಾಗೂ ಸಂತೋಷ್‌ ರಾಣಾ ಬಂಧಿತರಾಗಿದ್ದು, ಆರೋಪಿಗಳಿಂದ 21 ಕೇಜಿ ಗಾಂಜಾ ಜಪ್ತಿ ಮಾಡಲಾಗಿದೆ. ತಮ್ಮೂರಿನಿಂದ ನಗರಕ್ಕೆ ರೈಲಿನಲ್ಲಿ ಅಕ್ರಮವಾಗಿ ಗಾಂಜಾ ತಂದು ನಗರದಲ್ಲಿ ಮಾರಾಟಕ್ಕೆ ಯತ್ನಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಒಡಿಶಾ ತಂಡವನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. 

ಮಂಗಳೂರು ಸಿಸಿಬಿ ಭರ್ಜರಿ ಕಾರ್ಯಾಚರಣೆ; ನೈಜೀರಿಯಾ ಮೂಲದ ಡ್ರಗ್ಸ್ ಪೆಡ್ಲರ್ ಸೆರೆ

ಕೊಡಿಗೇಹಳ್ಳಿ ಠಾಣೆ ಪೊಲೀಸರು ನಡೆಸಿದ ಮತ್ತೊಂದು ಕಾರ್ಯಾಚರಣೆಯಲ್ಲಿ ರಾಜಸ್ಥಾನದ ಮೂಲದ ಮೂವರು ಸೇರಿದಂತೆ ನಾಲ್ವರು ಪೆಡ್ಲರ್‌ಗಳು ಸಿಕ್ಕಿಬಿದ್ದಿದ್ದಾರೆ. ಆರೋಪಿಗಳಿಂದ .3 ಲಕ್ಷ ಮೌಲ್ಯದ ಹೆರಾಯಿನ್‌ ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಿಐಟಿ ಕಾಯ್ದೆ ಬಳಸಿ ಕುಖ್ಯಾತ ಡ್ರಗ್‌ ದಂಧೆಕೋರನ ಬಂಧನ

ಐದಾರು ವರ್ಷಗಳಿಂದ ರಾಜಧಾನಿಯಲ್ಲಿ ಮಾದಕ ವಸ್ತು ಮಾರಾಟ ಜಾಲದಲ್ಲಿ ಸಕ್ರಿಯವಾಗಿದ್ದ ಬಿಹಾರ ಮೂಲದ ಪೆಡ್ಲರ್‌ವೊಬ್ಬನನ್ನು ಅಕ್ರಮ ಮಾದಕ ವಸ್ತು ನಿರ್ಬಂಧ ಕಾಯ್ದೆ(ಪಿಐಟಿ-ಎನ್‌ಡಿಪಿಎಸ್‌) ಅಡಿ ಸಿಸಿಬಿ ಬಂಧಿಸಿದೆ.

ಬೆಂಗಳೂರು: ಬೆಳ್ಳಂಬೆಳಗ್ಗೆ ಬಸ್‌ಗಳ ತಡೆದು ಡ್ರಗ್ಸ್‌ ಹುಡುಕಾಡಿದ ಸಿಸಿಬಿ..!

ಕುಖ್ಯಾತ ಪೆಡ್ಲರ್‌ ಅಖಿಲೇಶ್‌ ಕುಮಾರ್‌ ಅಲಿಯಾಸ್‌ ಅಖಿಲೇಶ್‌ ಬಂಧಿತನಾಗಿದ್ದು, 2018ರಿಂದ ನಗರದಲ್ಲಿ ಮಾದಕ ವಸ್ತು ಮಾರಾಟದಲ್ಲಿ ಆತ ತೊಡಗಿದ್ದ. ಈತನ ವಿರುದ್ಧ ವೈಟ್‌ಫೀಲ್ಡ್‌, ಕಾಟನ್‌ಪೇಟೆ, ಆಡುಗೋಡಿ ಹಾಗೂ ಚಾಮರಾಜಪೇಟೆ ಠಾಣೆಗಳಲ್ಲಿ ಒಟ್ಟು 6 ಪ್ರಕರಣಗಳು ದಾಖಲಾಗಿದ್ದವು. ಕೆಲ ಕೃತ್ಯಗಳಲ್ಲಿ ಬಂಧಿತನಾಗಿ ಜೈಲು ಸೇರಿದ್ದ ಅಖಿಲೇಶ್‌, ಜಾಮೀನು ಪಡೆದು ಹೊರಬಂದ ಬಳಿಕ ಮತ್ತೆ ತನ್ನ ಚಾಳಿ ಮುಂದುವರೆಸಿದ್ದ. ಈ ಕೃತ್ಯಗಳ ಹಿನ್ನೆಲೆಯಲ್ಲಿ ಆತನ ಮೇಲೆ ಪಿಐಟಿ ಕಾಯ್ದೆಯಡಿ ಕ್ರಮ ಜರುಗಿಸಲು ಪೊಲೀಸ್‌ ಆಯುಕ್ತರಿಗೆ ಸಿಸಿಬಿ ಪ್ರಸ್ತಾವನೆ ಸಲ್ಲಿಸಿತು. ಅದರನ್ವಯ ಆರೋಪಿ ವಿರುದ್ಧ ಪಿಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸು ಆಯುಕ್ತರು ಆದೇಶಿಸಿದ್ದಾರೆ ಎಂದು ಅಧಿಕಾರಿಗಳು ಹೇಳಿದ್ದಾರೆ.