ಆಶ್ರಯ ಕೇಂದ್ರದಿಂದಲೇ ಬಾಲಕಿ ಎಸ್ಕೇಪ್ : ಬಾಯ್‌ಫ್ರೆಂಡ್ ಮೇಲೆ ಶಂಕೆ: ಕಿಡ್ನಾಪ್‌ ದೃಶ್ಯ ವೈರಲ್

ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಹಿಳಾ ಪುನರ್ವಸತಿ ಕೇಂದ್ರದಿಂದಲೇ ಬಾಲಕಿಯೊಬ್ಬಳನ್ನು ಮಾಸ್ಕ್‌ ಧರಿಸಿ ಬಂದ ಆರು ಜನ ಯುವಕರು ಅಪಹರಿಸಿದ ಘಟನೆ ನಡೆದಿದೆ. 20 ನಿಮಿಷದಲ್ಲಿ ಈ ಯುವಕರು ಅತ್ಯಂತ ಭದ್ರತೆಯ ಪುನರ್ವಸತಿ ಕೇಂದ್ರದಿಂದ ಬಾಲಕಿಯನ್ನು ಅಪಹರಿಸಿದ್ದಾರೆ.

6 Masked man kidnapped girl from Shelter Centre at Madhya Pradesh Gwalior akb

ಗ್ವಾಲಿಯರ್ : ಮಧ್ಯಪ್ರದೇಶದ ಗ್ವಾಲಿಯರ್‌ನಲ್ಲಿ ಮಹಿಳಾ ಪುನರ್ವಸತಿ ಕೇಂದ್ರದಿಂದಲೇ ಬಾಲಕಿಯೊಬ್ಬಳನ್ನು ಮಾಸ್ಕ್‌ ಧರಿಸಿ ಬಂದ ಆರು ಜನ ಯುವಕರು ಅಪಹರಿಸಿದ ಘಟನೆ ನಡೆದಿದೆ. 20 ನಿಮಿಷದಲ್ಲಿ ಈ ಯುವಕರು ಅತ್ಯಂತ ಭದ್ರತೆಯ ಪುನರ್ವಸತಿ ಕೇಂದ್ರದಿಂದ ಬಾಲಕಿಯನ್ನು ಅಪಹರಿಸಿದ್ದಾರೆ. ಈ ದೃಶ್ಯ ಪುನರ್ವಸತಿ ಕೇಂದ್ರದ ಮುಂಭಾಗದಲ್ಲಿರುವ ಸಿಸಿ ಕ್ಯಾಮರಾದಲ್ಲಿ ಸೆರೆ ಆಗಿದೆ. 

ಒಬ್ಬರು ಮಹಿಳಾ ಭದ್ರತಾ ಸಿಬ್ಬಂದಿ, ಇಬ್ಬರು ಇತರ ಭದ್ರತಾ ಸಿಬ್ಬಂದಿ, ಒಬ್ಬ ಪೊಲೀಸ್‌ ಅಧಿಕಾರಿ ನಿದ್ದೆಯಲ್ಲಿದ್ದ ವೇಳೆ ಭಾನುವಾರ ನಸುಕಿನ ಜಾವ 2 ಗಂಟೆ  ಸುಮಾರಿಗೆ ಈ ಘಟನೆ ನಡೆದಿದೆ. ಗ್ವಾಲಿಯರ್‌ನ ಕಂಪೂನಲ್ಲಿರುವ ಪುನರ್ವಸತಿ ಕೇಂದ್ರದಲ್ಲಿ ಈ ಘಟನೆ ನಡೆದಿದೆ.  ಈ ಮಹಿಳಾ ಪುನರ್ವಸತಿ ಕೇಂದ್ರದ  4 ಅಡಿ ಎತ್ತರದ ಕಾಂಪೌಂಡ್ ಹಾರಿದ ಆರು ಜನ ಅಪಹರಣಕಾರರು ಈ ಪುನರ್ವಸತಿ ನಿಲಯದ ಕೀ ಪಡೆಯಲು ಕೋಲೊಂದನ್ನು ಬಳಸಿ ಗಾರ್ಡ್‌ ರೂಮ್‌ನಲ್ಲಿ ಕೀಯನ್ನು ಕಿಟಕಿ ಮೂಲಕ ಹೊರತೆಗೆದಿದ್ದಾರೆ. ಬಳಿಕ ಡೋರ್ ಒಪನ್ ಮಾಡಿದ್ದು, ಬಾಲಕಿಯನ್ನು ಹೊರಗೆ ಕರೆದುಕೊಂಡು ಬಂದು ಕೈಹಿಡಿದು ಕರೆದುಕೊಂಡು ಹೋಗಿದ್ದಾರೆ. 

11 ವರ್ಷದ ವಿದ್ಯಾರ್ಥಿನಿ ಮೇಲೆ ರೇಪ್... ಬಾಲಕಿ ಸೇರಿದಂತೆ ಮೂವರು ಬಾಲಕರ ಬಂಧನ

ಇಷ್ಟೆಲ್ಲಾ ಆದರೂ ಭದ್ರತೆಗೆ ಇದ್ದ ಒಬ್ಬರೇ ಒಬ್ಬರಿಗೂ ಎಚ್ಚರವಾಗಿಲ್ಲ, ವೀಡಿಯೋದಲ್ಲಿ ಕಾಣಿಸುವಂತೆ ಬಾಲಕಿ ಮಾಸ್ಕ್ ಧರಿಸಿದವರಲ್ಲಿ ಒಬ್ಬನ ಕೈ ಹಿಡಿದು ಜೊತೆಗೆ ಹೋಗುತ್ತಿರುವುದು ಕಾಣುತ್ತಿದೆ. ಈ ವೇಳೆ ನಿಲಯದ ಭದ್ರತೆಗೆ ಇದ್ದ ಇಬ್ಬರು ಮಹಿಳಾ ಭದ್ರತಾ ಸಿಬ್ಬಂದಿ ಹಾಗೂ ಪೊಲೀಸ್ ಅಧಿಕಾರಿ ಇಬ್ಬರೂ ನಿದ್ದೆಗೆ ಜಾರಿದ್ದಾರೆ.

ಘಟನೆಗೆ ಸಂಬಂಧಿಸಿದಂತೆ ಸಿಎಸ್‌ಪಿ ಅಶೋಕ್ ಜಾಡೊನ್ ಮಾಹಿತಿ ನೀಡಿದ್ದು, ಈ ಹುಡುಗಿ ಈ ಹಿಂದೆಯೂ ಎರಡು ಬಾರಿ ಮನೆಬಿಟ್ಟು ಓಡಿ ಹೋಗಿದ್ದಾಳೆ. ಈ ಪ್ರಕರಣದಲ್ಲಿ ಆಕೆಯ ಲವರ್ ಭಾಗಿಯಾಗಿರುವ ಸಂಶಯವಿದೆ. ಈ ಸಂಪೂರ್ಣ ಘಟನೆ ಯೋಜಿತ ಕೃತ್ಯವಾಗಿದ್ದು, ಅಪಹರಣಕಾರರು ಈ ನಿಲಯದ ಬಗ್ಗೆ ಪ್ರತಿಯೊಂದು ಮಾಹಿತಿಯನ್ನು ಹೊಂದಿದ್ದರು. ಈ ಹಿಂದೆಯೂ ಬಾಲಕಿ ಥಾತಿಪುರ್ ಪ್ರದೇಶದಿಂದ ನಾಪತ್ತೆಯಾಗಿದ್ದಳು. ಆತನ ಬಾಯ್‌ ಫ್ರೆಂಡ್ ವಿರುದ್ಧ ಆತ ಅಪಹರಣ ಪ್ರಕರಣ ದಾಖಲಾಗಿತ್ತು. 

ಬಾಲಕರಲ್ಲ ಇವರು ರಾಕ್ಷಸರು... ಶಾಲೆಗೆ ಹೋಗೋ ಮಕ್ಕಳಿಂದ ಇದೆಂಥಾ ಪೈಶಾಚಿಕ ಕೃತ್ಯ

ಇದಾದ ನಂತರ ಬಾಲಕಿಯನ್ನು ಪತ್ತೆ ಮಾಡಿ  ಜೂನ್ 7ರಂದು ಕೋರ್ಟ್‌ಗೆ ಹಾಜರುಪಡಿಸಲಾಗಿತ್ತು. ಈ ವೇಳೆ ಆಕೆ ಮತ್ತೆ ಪೋಷಕರ ಜೊತೆ ಹೋಗುವುದಕ್ಕೆ ನಿರಾಕರಿಸಿದಳು. ಇದಾದ ನಂತರ ಪೊಲೀಸರು ಆಕೆಯನ್ನು ಪುನರ್ವಸತಿ ಕೇಂದ್ರಕ್ಕೆ ಕಳುಹಿಸಿದ್ದರು. ಇದಾದ ನಂತರ ಮಹಿಳಾ ಪುನರ್ವಸತಿ ಕೇಂದ್ರದಿಂದಲೂ ಆಕೆ ಓಡಿ ಹೋಗಲು ಯತ್ನಿಸಿದ್ದಳು. ಹೀಗಾಗಿ ಆಕೆಯನ್ನು ಪುನರ್ವಸತಿ ಕೇಂದ್ರದ ತುಂಬಾ ಒಳಭಾಗದಲ್ಲಿರುವ ಕೋಣೆಯಲ್ಲಿ ಇರಿಸಲಾಗಿತ್ತು. ಆದರೆ ಅಲ್ಲಿಂದಲೂ ಆಕೆ ಎಸ್ಕೇಪ್ ಆಗಿದ್ದಾಳೆ. ಈ ಕೃತ್ಯದ ಹಿಂದೆ ಪುನರ್ವಸತಿ ಕೇಂದ್ರದವರು ಭಾಗಿಯಾಗಿರಬಹುದಾ ಎನ್ನುವ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 

 

Latest Videos
Follow Us:
Download App:
  • android
  • ios