Asianet Suvarna News Asianet Suvarna News

ಬಾಲಕರಲ್ಲ ಇವರು ರಾಕ್ಷಸರು... ಶಾಲೆಗೆ ಹೋಗೋ ಮಕ್ಕಳಿಂದ ಇದೆಂಥಾ ಪೈಶಾಚಿಕ ಕೃತ್ಯ

ಆಂಧ್ರಪ್ರದೇಶದಲ್ಲಿ ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕರು ಮಾಡಿದ ಪೈಶಾಚಿಕ ಕೃತ್ಯಕ್ಕೆ ಇಡೀ ನಗರವೇ ಬೆಚ್ಚಿ ಬಿದ್ದಿದೆ. ಮೂರನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಬಾಲಕಿಯೊಬ್ಬಳನ್ನು ಮೂವರು ಬಾಲಕರು ಸೇರಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ.

three school going minor boys arrested for rape and murder of 8 year old girl in Andhra pradesh nandyala akb
Author
First Published Jul 11, 2024, 1:11 PM IST

ತಿರುಪತಿ: ಆಂಧ್ರಪ್ರದೇಶದಲ್ಲಿ ಶಾಲೆಗೆ ಹೋಗುತ್ತಿದ್ದ ಅಪ್ರಾಪ್ತ ಬಾಲಕರು ಮಾಡಿದ ಪೈಶಾಚಿಕ ಕೃತ್ಯಕ್ಕೆ ಇಡೀ ನಗರವೇ ಬೆಚ್ಚಿ ಬಿದ್ದಿದೆ. ಮೂರನೇ ತರಗತಿಯಲ್ಲಿ ಓದುತ್ತಿದ್ದ 8 ವರ್ಷದ ಬಾಲಕಿಯೊಬ್ಬಳನ್ನು ಮೂವರು ಬಾಲಕರು ಸೇರಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ಆಂಧ್ರ ಪ್ರದೇಶದ ನಂದ್ಯಾಲ ಜಿಲ್ಲೆಯ ಪಗಿದ್ಯಾಲ ಮಂಡಲದ ಮುಚ್‌ಮರಿ ಗ್ರಾಮದಲ್ಲಿ ಈ ಆಘಾತಕಾರಿ ಘಟನೆ ನಡೆದಿದೆ. ಮೂವರು ಬಾಲಕರು ಸೇರಿ ಶಾಲಾ ರಜಾದಿನವಾದ ಭಾನುವಾರ ಈ ಕೃತ್ಯವೆಸಗಿದ್ದು, ಬುಧವಾರ ಪ್ರಕರಣ ಬೆಳಕಿಗೆ ಬಂದಿದೆ. 

ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಬಾಲಕರನ್ನು ಪೊಲೀಸರು ಕಸ್ಟಡಿಗೆ ಪಡೆದಿದ್ದಾರೆ. ಆರೋಪಿ ಬಾಲಕರಲ್ಲಿ ಇಬ್ಬರು 12 ವರ್ಷದವರಾಗಿದ್ದು, ಆರನೇ ತರಗತಿಯಲ್ಲಿ ಓದುತ್ತಿದ್ದಾರೆ. ಹಾಗೆಯೇ ಮತ್ತೊಬ್ಬರ ಆರೋಪಿ ಬಾಲಕ 13 ವರ್ಷದವನಾಗಿದ್ದು 8ನೇ ತರಗತಿಯಲ್ಲಿ ಓದುತ್ತಿದ್ದ.  ಕೊಲೆಯಾದ ಬಾಲಕಿ ಹಾಗೂ ಈ ಬಾಲಕರು ಒಂದೇ ಶಾಲೆಯಲ್ಲಿ ಓದುತ್ತಿದ್ದರು ಎಂದು ತಿಳಿದು ಬಂದಿದೆ. 

ತಂದೆ- ತಾಯಿ, ಅಣ್ಣನ ಹತ್ಯೆಗೈದ 15ರ ಬಾಲಕ, ಕಾರಣ ಕೇಳಿ ಪೊಲೀಸರು ಶಾಕ್!

ನಂದಿಕೊಟ್ಕುರು ಪೊಲೀಸರ ಪ್ರಕಾರ, ಬಾಲಕಿ ನಾಪತ್ತೆಯಾಗಿದ್ದಾಳೆ ಎಂದು ಆಕೆಯ ತಂದೆ ಭಾನುವಾರ ಪೊಲೀಸರಿಗೆ ದೂರು ನೀಡಿದ್ದರು. ತನ್ನ ಪುತ್ರಿ ಮುಚ್‌ಮುರಿ ಪಾರ್ಕ್‌ನಲ್ಲಿ ಆಟವಾಡುತ್ತಿದ್ದು, ನಂತರ ನಾಪತ್ತೆಯಾಗಿದ್ದಾಳೆ ಎಂದು ಅವರು ದೂರು ನೀಡಿದ್ದರು. ಇದಾದ ನಂತರ ಪೊಲೀಸರು ಬಾಲಕಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದಾರೆ. ಅಲ್ಲದೇ ಸ್ಥಳೀಯರಲ್ಲಿಯೂ ಬಾಲಕಿಯ ಬಗ್ಗೆ ಕೇಳಿದ್ದಾರೆ. ಆದರೆ ಬಾಲಕಿಯನ್ನು ಪೊಲೀಸರಿಗೆ ಪತ್ತೆ ಮಾಡಲು ಸಾಧ್ಯವಾಗಿಲ್ಲ, ನಂತರ ಶ್ವಾನದಳವನ್ನು ಕರ್ತವ್ಯಕ್ಕೆ ನಿಯೋಜಿಸಿದ್ದಾರೆ. 

ಪಾಪಿ ಬಾಲಕರ ಸುಳಿವು ನೀಡಿದ ಪೊಲೀಸ್ ಸ್ನಿಫರ್ ಡಾಗ್

ಈ ಸ್ನೀಫರ್ ಡಾಗ್ ನೀಡಿದ ಸುಳಿವು ಪೊಲೀಸರಿಗೆ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಸಹಾಯ ಮಾಡಿತ್ತು. ಪೊಲೀಸರಿಗೆ ಬರೀ ಸುಳಿವು ಮಾತ್ರ ನೀಡಿದ್ದಲ್ಲದೇ, ಈ ಪೊಲೀಸ್ ಶ್ವಾನ, ಆರೋಪಿಗಳ ಮನೆ ಮುಂದೆ ಹೋಗಿ ನಿಂತಿತ್ತು. ನಂತರ ಬಾಲಕರನ್ನು ಪ್ರಾಥಮಿಕ ಹಂತದ ತನಿಖೆ ನಡೆಸಿದ ಪೊಲೀಸರು ಅಪ್ರಾಪ್ತ ಬಾಲಕರನ್ನು ಕಸ್ಟಡಿಗೆ ಪಡೆದಿದ್ದಾರೆ. ಪೊಲೀಸರ ವಿಚಾರಣೆ ವೇಳೆ ಬಾಲಕರು ತಾವು ಅತ್ಯಾಚಾರವೆಸಗಿ ಬಾಲಕಿಯ ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಬಾಲಕಿಯನ್ನು ಕೊಲೆ ಮಾಡಿದ ನಂತರ ತಮ್ಮ ತಪ್ಪನ್ನು ಮುಚ್ಚಿಕೊಳ್ಳುವುದಕ್ಕಾಗಿ ಆಕೆಯ ಮೃತದೇಹವನ್ನು ನೀರಾವರಿ ಕಾಲುವೆಯೊಂದಕ್ಕೆ ಎಸೆದಿದ್ದಾಗಿ ಈ ರಕ್ಕಸ ಬಾಲಕರು ಪೊಲೀಸರ ಮುಂದೆ ತಪ್ಪೊಪ್ಪಿಕೊಂಡಿದ್ದಾರೆ. 

ಮೊಬೈಲ್‌ನಲ್ಲಿ ಏನು ಡೌನ್‌ಲೋಡ್ ಮಾಡಿದ್ದೀಯಾ? ತಂದೆ ಬೈದಿದ್ದಕ್ಕೆ ನೇಣಿಗೆ ಕೊರಳೊಡ್ಡಿದ ಮಗಳು 

ಮುಚುಮರಿ ಪಾರ್ಕ್‌ನಲ್ಲಿ ಬಾಲಕಿ ಆಟವಾಡುತ್ತಿರುವುದನ್ನು ಗಮನಿಸಿದ ದುರುಳ ಬಾಲಕರು ಆಕೆಯನ್ನು  ತಮ್ಮೊಂದಿಗೆ ಆಟವಾಡಲು ಬರುವಂತೆ ಕರೆದಿದ್ದಾರೆ. ಬಳಿಕ  ನೀರಾವರಿ ಯೋಜನೆಯ ಸಮೀಪದ ನಿರ್ಜನ ಪ್ರದೇಶಕ್ಕೆ ಆಕೆಯನ್ನು ಕರೆದೊಯ್ದು ಆಕೆಯ ಬಾಯನ್ನು ಬಟ್ಟೆಯಿಂದ ಗಟ್ಟಿಯಾಗಿ ಕಟ್ಟಿ ಒಬ್ಬರಾದ ಮೇಲೊಬ್ಬರಂತೆ ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ. ಇದಾದ ನಂತರ ಬಾಲಕರಿಗೆ ಆಕೆ ತನ್ನ ಪೋಷಕರಿಗೆ ತಮ್ಮ ಬಗ್ಗೆ ಹೇಳಿದರೆ ಎಂಬ ಭಯ ಶುರುವಾಗಿದೆ. ಇದೇ ಕಾರಣಕ್ಕೆ ಆಕೆಯನ್ನು ಕೊಲೆ ಮಾಡಿದ ಪಾಪಿಗಳು ಬಳಿಕ ಆಕೆಯ ದೇಹವನ್ನು ನೀರಿಗೆ ಎಸೆದು ಸ್ಥಳದಿಂದ ಜಾಗ ಖಾಲಿ ಮಾಡಿದ್ದಾರೆ. 

 

Latest Videos
Follow Us:
Download App:
  • android
  • ios