ನವದೆಹಲಿ(ಏ.16): ಚುನಾವಣಾ ಆಯೋಗ ಈ ಬಾರಿ ಇತಿಹಾಸ ಬರೆದಿದೆ. ಪಂಚರಾಜ್ಯಗಳ ಚುನಾವಣೆಗಳಲ್ಲಿ 344 ಕೋಟಿ ನಗದು ಸೇರಿ ಬರೋಬ್ಬರಿ 1000 ಕೋಟಿ ರೂಪಾಯಿ ಮೊತ್ತದ ಮಾಲ್ ಸೀಜ್ ಮಾಡುವ ಮೂಲಕ ದಾಖಲೆ ಬರೆದಿದೆ. ವಿಧಾನಸಭಾ ಚುನಾವಣೆಗಳಲ್ಲಿ ಇಷ್ಟೊಂದು ದೊಡ್ಡ ಮಟ್ಟದ ಸೀಜ್ ನಡೆದಿರುವುದು ಇದೇ ಮೊದಲ ಬಾರಿ ಅಂಥ ಕೇಂದ್ರ ಚುನಾವಣಾ ಆಯೋಗ ತಿಳಿಸಿದೆ.

ದೀದಿ ಕ್ಲೀನ್‌ ಬೌಲ್ಡ್‌, ಟಿಎಂಸಿ ಆಲೌಟ್‌: ಮೋದಿ ವ್ಯಂಗ್ಯ

ಚುನಾವಣಾ ಭ್ರಷ್ಟಾಚಾರ ನಡೆಸಲು ಒಂದೊಂದು ರಾಜ್ಯ ಒಂದೊಂದು ವಿಷಯದಲ್ಲಿ ಮೊದಲು ಸ್ಥಾನ ಪಡೆಯಲು ಪೈಪೋಟಿ ನಡೆಸಿವೆ. ಹಣ ಸೀಜ್ ಪ್ರಕರಣಗಳಲ್ಲಿ ತಮಿಳುನಾಡು ಮೊದಲ ಸ್ಥಾನ ಪಡೆದಿದೆ. ಒಂದೇ ಹಂತದಲ್ಲಿ ನಡೆದ ಮತದಾನದಲ್ಲಿ ಬರೋಬ್ಬರಿ 236.69 ಕೋಟಿ ರುಪಾಯಿ ನಗದು ಹಣ ಪತ್ತೆಯಾಗಿದೆ. ಡ್ರಗ್ಸ್ ವಿಚಾರದಲ್ಲಿ ಪಶ್ಚಿಮ ಬಂಗಾಳ ಸ್ಥಾನ ಬಿಟ್ಟುಕೊಟ್ಟಿಲ್ಲ. ಬರೋಬ್ಬರಿ 118.83 ಕೋಟಿ ರೂಪಾಯಿ ಮೊತ್ತದ ಡ್ರಗ್ ವಶ ಪಡಿಸಿಕೊಳ್ಳಲಾಗಿದೆ ಅಂಥ ಚುನಾವಣಾ ಆಯೋಗ ತಿಳಿಸಿದೆ.

ಪುಟಾಣಿಗಳಲ್ಲಿ ಬಾಯಲ್ಲಿ ದೀದಿ..ಓ..ದೀದಿ ಟ್ರೆಂಡ್: ಬಂಗಾಳ ಚುನಾವಣೆ ಟೆನ್ಶನ್ ನಡುವೆ ಫನ್ನಿ ವಿಡಿಯೋ!

ಅದೇ ರೀತಿ ಚುನಾವಣೆಯಲ್ಲಿ ಹಂಚಲು ತಂದಿದ್ದ ಬೆಲೆಬಾಳುವ ಆಭರಣಗಳ ಪತ್ತೆ ಪ್ರಕರಣಗಳಲ್ಲೂ ತಮಿಳುನಾಡು ನಾನೇ ಫಸ್ಟ್ ಅಂಥ ಹೇಳಿದೆ. 176.46 ಕೋಟಿ ರೂಪಾಯಿ ಮೊತ್ತದ ಆಭರಣಗಳು ಸೇರಿ ವಿವಿಧ ವಸ್ತುಗಳು ಪತ್ತೆಯಾಗಿವೆ. ಇನ್ನು ಪಶ್ಚಿಮ ಬಂಗಾಳದಲ್ಲಿ ಪುಕಟ್ಟೆಯಾಗಿ ಹಂಚಲು ತಂದಿದ್ದ 88.39 ಕೋಟಿ ರೂಪಾಯಿ ಮೊತ್ತದ ವಸ್ತುಗಳು ಸಿಕ್ಕಿವೆ.

ಐದು ರಾಜ್ಯಗಳ ಒಟ್ಟಾರೆ ಅಂಕಿ ಅಂಶಗಳ ಬಗ್ಗೆ ಹೇಳೋದಾದ್ರೆ 344.85 ಕೋಟಿ ರುಪಾಯಿ ನಗದು, 85 ಕೋಟಿ ರೂಪಾಯಿ ಮೊತ್ತದ ಲಿಕ್ಕರ್, 161.60 ಕೋಟಿ ಮೊತ್ತದ ಡ್ರಗ್ಸ್, ಪುಕ್ಕಟ್ಟೆ ಹಂಚಲು ತಂದಿದ್ದ 139 ಕೋಟಿ ರೂಪಾಯಿ ಮೊತ್ತದ ವಸ್ತುಗಳು, 270 ಕೋಟಿ ರೂ. ಮೊತ್ತದ ಬೆಲೆಬಾಳುವ ಚಿನ್ನಾಭರಗಳು ಹೀಗೆ ಬರೋಬ್ಬರಿ 1001.44 ಕೋಟಿ ಮೊತ್ತದ ಅಕ್ರಮವನ್ನು ಪತ್ತೆ ಹಚ್ಚಲಾಗಿದೆ ಅಂಥ ಕೇಂದ್ರ ಚುನಾವಣಾ ಆಯೋಗ ಹೇಳಿದೆ.

ಯಾವ್ಯಾವರಾಜ್ಯದಲ್ಲಿ ಎಷ್ಟು ಸಿಕ್ಕಿದೆ ?
ಅಸ್ಸಾಂ :
27 ಕೋಟಿ ನಗದು, 41.97 ಕೋಟಿ ಮೊತ್ತದ ಲಿಕ್ಕರ್, 34 ಕೋಟಿ ಮೊತ್ತದ ಡ್ರಗ್ಸ್ ಸೇರಿ ಒಟ್ಟು 122.35 ಕೋಟಿ ರೂ. ಮೊತ್ತದ ಮಾಲ್ ಸೀಜ್
ಪುದುಚೆರಿ : 5.52 ಕೋಟಿ ನಗದು, 27 ಕೋಟಿ ಮೊತ್ತದ ಚಿನ್ನಾಭರಗಳು ಸೇರಿ ಒಟ್ಟು 36.95 ಕೋಟಿ ರೂ. ಮೊತ್ತದ ಮಾಲ್ ಸೀಜ್
ತಮಿಳುನಾಡು : 236.69 ಕೋಟಿ ನಗದು, 176 ಕೋಟಿ ಮೊತ್ತದ ಚಿನ್ನಾಭರಗಳು ಸೇರಿ ಒಟ್ಟು 446.28 ಕೋಟಿ ರೂ. ಮೊತ್ತದ ಮಾಲ್ ಸೀಜ್
ಕೇರಳ : 22.88 ಕೋಟಿ ನಗದು, 50.86 ಕೋಟಿ ರೂ ಮೊತ್ತದ ಚಿನ್ನಾಭರಗಳು ಸೇರಿ ಒಟ್ಟು 84.91 ಕೋಟಿ ರೂ. ಮೊತ್ತದ ಮಾಲ್ ಸೀಜ್
ಪಶ್ಚಿಮ ಬಂಗಾಳ : 50.71 ಕೋಟಿ ನಗದು, 118.83 ಕೋಟಿ ರೂ ಮೊತ್ತದ ಡ್ರಗ್ಸ್, 30 ಕೋಟಿ ಲಿಕ್ಕರ್, ಪುಕ್ಕಟೆ ಹಂಚಲು ತಂದಿದ್ದ 88 ಕೋಟಿ ರೂ ಮೊತ್ತದ ವಸ್ತುಗಳು ಸೇರಿ ಒಟ್ಟು 300.11 ಕೋಟಿ ರೂ ಮೊತ್ತದ ( ಪಶ್ಚಿಮ ಬಂಗಾಳದಲ್ಲಿ ಇನ್ನು ನಾಲ್ಕು ಹಂತಗಳ ಚುನಾವಣೆ ನಡೆಯಬೇಕಿದೆ)