ಕೋಲ್ಕತಾ(ಏ.12):  ಪಶ್ಚಿಮ ಬಂಗಾಳ ಚುನಾವಣೆ ಪ್ರತಿ ಹಂತ ಕೂಡ ಅತ್ಯಂತ ಸವಾಲಿನಿಂದ ಕೂಡಿದೆ. ಕಾರಣ ಒಟ್ಟು 8 ಹಂತದ ಮತದಾನದಲ್ಲಿ ನಾಲ್ಕು ಹಂತದ ಮತದಾನ ಪೂರ್ಣಗೊಂಡಿದೆ. 2 ಮತ್ತು ನಾಲ್ಕನೇ ಹಂತದ ಮತದಾನದಲ್ಲಿ ವ್ಯಾಪಕ ಹಿಂಸಾಚರ ನಡೆದಿದೆ. ಸಿತಾಲ್‌ಕುಚಿಯಲ್ಲಿನ ಹಿಂಸಾಚಾರದಲ್ಲಿ ಐವರು ಬಲಿಯಾಗಿದ್ದಾರೆ.  ಇದೀಗ ಪಶ್ಚಿಮ ಬಂಗಾಳದ ಬರ್ದಮಾನ್‌ನಲ್ಲಿ ಆಯೋಜಿಸಿದ ರ‍್ಯಾಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಬಂಗಾಳದ ಮನೆ, ಮನೆಯಲ್ಲಿ, ಪುಟಾಣಿಗಳ ಬಾಯಲ್ಲಿ ದೀದಿ..ಓ..ದೀದಿ ಎಂಬ ಪ್ರಶ್ನೆ ಕೇಳಿಬರುತ್ತಿದೆ ಎಂದಿದ್ದಾರೆ. 

"

'ಪಲ್ಟಿ ಮಾಡಿ'  ಜನರಿಗೆ ಮೋದಿ ಕರೆ,  ಬದಲಾಗಲಿದೆ ಬಂಗಾಳ

5ನೇ ಹಂತದ ಚುನಾವಣೆ ಪ್ರಯುಕ್ತ ಆಯೋಜಿಸಿದ ರ‍್ಯಾಲಿಯಲ್ಲಿ ಮಾತಮಾಡಿದ ಮೋದಿ, ಬಂಗಾಳ 4 ಹಂತದ ಮತದಾನದಲ್ಲಿ ಮತದಾರರು ಬೌಂಡರಿ ಸಿಕ್ಸರ್ ಬಾರಿಸಿದ್ದಾರೆ. ಹೀಗಾಗಿ ಬಿಜೆಪಿ ಸೆಂಚುರಿ ಬಾರಿಸಿದೆ. ಇದು ಮಮತಾ ಬ್ಯಾನರ್ಜಿ ಹಾಗೂ ಟಿಎಂಸಿ ಆಕ್ರೋಶಕ್ಕೆ ಕಾರಣವಾಗಿದೆ. ಬಂಗಾಳ ಜನತೆ ಆಶೋಲ್ ಪರಿಬೊರ್ಚನ್(ಅಮೂಲಾಗ್ರ ಬದಲಾವಣೆ) ಬಯಸಿದ್ದಾರೆ. ನನಗೆ ವ್ಯಾಟ್ಸ್‌ಆ್ಯಪ್ ವಿಡಿಯೋ ಬಂದಿತ್ತು. 3,4,5 ವರ್ಷ ಪುಟಾಣಿ ಮಕ್ಕಳು ಕೂಡ ದೀದಿ...ಓ.ದೀದಿ ಎಂದು ಕೂಗುತ್ತಿರುವ ವಿಡಿಯೋ ಆದಾಗಿತ್ತು. ಬಂಗಾಳದ ಮನೆ.,ಮನೆಗಳಲ್ಲಿ, ಪ್ರತಿಯೊಬ್ಬರು ದೀದಿಯನ್ನು ಪ್ರಶ್ನಿಸುತ್ತಿದ್ದಾರೆ ಎಂದು ಮೋದಿ ಹೇಳಿದ್ದಾರೆ.

ಮಕ್ಕಳು ಹೇಳಿದ ದೀದಿ..ಓ..ದೀದಿ ಸದ್ಯ ಭಾರಿ ಟ್ರೆಂಡ್ ಆಗಿದೆ. ಪ್ರಧಾನಿ ನರೇಂದ್ರ ಮೋದಿ ಹಾಗೂ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪ-ಪ್ರತ್ಯಾರೋಪಗಳುಸಾಮಾಜಿಕ ಜಾಲತಾಣದಲ್ಲಿ ಹೊಸ ಟ್ರೆಂಡ್ ಹುಟ್ಟುಹಾಕುತ್ತಿದೆ. ಹೀಗೆ ಟ್ರೆಂಡ್ ಆದ ಭಾಷಣದ ತುಣುಕಿನಲ್ಲಿ ಇದೀಗ ಮೋದಿ ಕೂಗಿದ ದೀದಿ...ಓ..ದೀದಿ ಮೊದಲ ಸ್ಥಾನದಲ್ಲಿದೆ. ಇದೇ ಮೋದಿಯ ಮಾತನ್ನು ಇದೀಗ ಮಕ್ಕಳು ಆಡಿ ವೈರಲ್ ಆಗಿದೆ.

 

ಬಂಗಾಳದ ಕಲ್ಯಾಣಿಯಲ್ಲಿ ಆಯೋಜಿಸಿದ ಪ್ರಚಾರ ಸಭೆಯಲ್ಲಿ ಪ್ರಧಾನಿ ಮೋದಿ, ಮಮತಾ ಬ್ಯಾನರ್ಜಿ ನಡೆಯನ್ನು ವ್ಯಂಗ್ಯವಾಡಿದ್ದರು. ಮಮತಾ ಹಾಗೂ ಟಿಎಂಸಿ ನಾಯಕರು ಎಲ್ಲೆ ಮೀರುತ್ತಿದ್ದಾರೆ. ದೀದಿ..ಓ..ದೀದಿ ನಂದೀಗ್ರಾಮದಲ್ಲಿ ಕ್ಲೀನ್ ಬೋಲ್ಡ್ ಆಗುವುದು ಯಾರು? ಮೇ.02ರಂದು ಮಮತಾ ಗಂಟು ಮೂಟೆ ಕಟ್ಟಬೇಕು ಎಂದಿದ್ದರು.

ಜೈ ಶ್ರೀರಾಮ್‌ಗೆ ಉರಿದುಬೀಳುವ ದೀದಿಗೆ ವಾರಣಾಸಿ ಕನಸು ಹೇಗೆ ಎಂದ ಮೋದಿ?

ಮೋದಿ ಮಾತಿಗೆ ಕೆರಳಿ ಕೆಂಡವಾದ ಮಮತಾ ಬ್ಯಾನರ್ಜಿ ದೀದಿ..ಓ..ದೀದಿ ಅನ್ನೋ ವಾಕ್ಯವನ್ನು ತಮ್ಮದೆ ಶೈಲಿಯಲ್ಲಿ ಉಚ್ಚರಿಸಿ ಮೋದಿಗೆ ತಿರುಗೇಟು ನೀಡಿದ್ದರು. ಬಳಿಕ ಈ ಮಾತು ಟ್ರೆಂಡ್ ಆಗಿತ್ತು. ಇದೀಗ ಮಕ್ಕಳ ವಿಡಿಯೋ ಬಾರಿ ವೈರಲ್ ಆಗಿದೆ. 

ರ‍್ಯಾಲಿಯಲ್ಲಿ ಕುಸಿದ ಕಾರ್ಯಕರ್ತನ ನೆರವಿಗೆ ತಮ್ಮ ವೈದ್ಯರ ತಂಡ ಕಳುಹಿಸಿದ ಮೋದಿ!.

ಪಶ್ಚಿಮ ಬಂಗಾಳದ 5ನೇ ಹಂತದ ಮತದಾನ ಏಪ್ರಿಲ್ 17ರಂದು ನಡೆಯಲಿದೆ.  ಮಾರ್ಚ್ 27 ರಂದು ಬಂಗಾಳದಲಲ್ಲಿ ಮೊದಲ ಹಂತದ ಮತದಾನವಾಗಿತ್ತು. ಈಗಾಗಲೇ ನಾಲ್ಕು ಹಂತದ ಮತದಾನ ಪೂರ್ಣಗೊಂಡಿದೆ. ಇನ್ನು ಎಪ್ರಿಲ್ 22, ಎಪ್ರಿಲ್ 26 ಹಾಗೂ ಏಪ್ರಿಲ್ 29 ರಂದು 6, 7 ಹಾಗೂ 8ನೇ ಹಂತದ ಮತದಾನ ನಡೆಯಲಿದೆ. ಮೇ.02 ರಂದು ಮತ ಎಣಿಕೆ ಕಾರ್ಯ ನಡೆಯಲಿದೆ.