Asianet Suvarna News Asianet Suvarna News

ಈ 3 ರ ಪೋರನಿಗಿದೆ ಸೂಪರ್‌ ಮೆಮೋರಿ ಪವರ್: 4.40 ನಿಮಿಷದಲ್ಲಿ 197 ರಾಷ್ಟ್ರಧ್ವಜ ಗುರುತು ಹಿಡಿದ ಬಾಲಕ..!

ಇದಕ್ಕೂ ಮೊದಲು ಭಾರತ ದೇಶದವನೇ ಆಗಿರುವ 4 ವರ್ಷದ ಪೋರ ಈ ದಾಖಲೆಯನ್ನು ಮಾಡಿದ್ದ. ಇದೀಗ 3 ವರ್ಷದ ದರ್ಶನ್‌ ಆ ದಾಖಲೆಯನ್ನು ಮುರಿದಿದ್ದಾನೆ. ದೆಹಲಿಯಲ್ಲಿರುವ ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ಸ್ ಸಂಸ್ಥೆಯು ಬಾಲಕನಿಗೆ ಪ್ರಮಾಣಪತ್ರ ಮತ್ತು ಪದಕವನ್ನು ವಿತರಿಸಿದೆ.

3 year old breaks world record identifies flags of 197 countries in 4 minutes ash
Author
First Published Mar 5, 2023, 12:59 PM IST

ವಿಲ್ಲುಪುರಂ (ಮಾರ್ಚ್‌ 5, 2023): ಪ್ರತಿಯೊಬ್ಬರೂ ಪ್ರತಿಭೆಯೊಂದಿಗೆ ಹುಟ್ಟಿಲ್ಲವಾದರೂ, ಎಲ್ಲದಕ್ಕೂ ಕೆಲವು ಅಪವಾದ ಎಂಬಂತೆ ಕೆಲವರು ಜನ್ಮ ತಾಳಿದಂದಿನಿಂದಲೇ ಪ್ರತಿಭಾವಂತರಾಗಿರುತ್ತಾರೆ. ಇದಕ್ಕೆ ಉದಾಹರಣೆಯೆಂಬಂತೆ ಈ 3 ವರ್ಷದ ಬಾಲಕ  ಚಿಕ್ಕ ವಯಸ್ಸಿನಲ್ಲಿ ವಿಶ್ವದಾಖಲೆಯೊಮದನ್ನು ಬ್ರೇಕ್‌ ಮಾಡಿದ್ದು, ತನ್ನ ಹೆತ್ತವರಿಗೆ ಹೆಮ್ಮೆ ತಂದಿದ್ದಾನೆ. ದರ್ಶನ್‌ ಎಂಬ ಈತ ತಮಿಳುನಾಡಿನ ಪುಟ್ಟ ಬಾಲಕ ಶಶಿರೇಖಾ ಮತ್ತು ಭರತ್ ದಂಪತಿಯ ಪುತ್ರ. ಇತ್ತೀಚೆಗಷ್ಟೇ ದರ್ಶನ್‌ ದಾಖಲೆಯೊಂದನ್ನು ಮುರಿದು ಇಂಟರ್‌ನ್ಯಾಶನಲ್ ಬುಕ್ ಆಫ್ ರೆಕಾರ್ಡ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ. 3 ವರ್ಷದ ಮಗುವಿನ ಸಾಮರ್ಥ್ಯ ಎಂತದ್ದು ಅಂತೀರಾ..? 

ಜಗತ್ತಿನ 197 ರಾಷ್ಟ್ರಗಳ ಧ್ವಜಗಳನ್ನು (Country Flag) ಕೇವಲ 4 ನಿಮಿಷ 40 ಸೆಕೆಂಡುಗಳಲ್ಲಿ ಗುರುತು ಹಿಡಿಯುವ ಮೂಲಕ ತಮಿಳುನಾಡಿನ (Tamil Nadu) 3 ವರ್ಷದ ಬಾಲಕನೊಬ್ಬ ಅಂತಾರಾಷ್ಟ್ರೀಯ ದಾಖಲೆಯನ್ನು (International Record) ಮಾಡಿದ್ದಾನೆ. ತಮಿಳುನಾಡಿನ ವಿಲ್ಲುಪುರಂ (Villupuram) ಜಿಲ್ಲೆಯ ಜೇವನಗರ್‌ನ ಶಶಿರೇಖಾ ಮತ್ತು ಭರತ್‌ ದಂಪತಿಯ ಪುತ್ರ ದರ್ಶನ್‌ (Darshan) ಎಂಬಾತನೇ ‘ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ಸ್’ನಲ್ಲಿ (International Book of Records) ಹೆಸರು ದಾಖಲಿಸಿರುವ ಪೋರ. ದರ್ಶನ್ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ನಿವಾಸಿಯಾಗಿದ್ದು, ಪ್ರಸ್ತುತ ಖಾಸಗಿ ಶಾಲೆಯೊಂದರಲ್ಲಿ ಎಲ್‌ಕೆಜಿ ಓದುತ್ತಿದ್ದಾನೆ.

ಇದನ್ನು ಓದಿ: ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಅಂದ್ರೆ ಇಷ್ಟುದ್ದ ಮೀಸೆ ಬಿಡೋದ?

ಇದಕ್ಕೂ ಮೊದಲು ಭಾರತ (India) ದೇಶದವನೇ ಆಗಿರುವ 4 ವರ್ಷದ ಪೋರ ಈ ದಾಖಲೆಯನ್ನು ಮಾಡಿದ್ದ. ಇದೀಗ 3 ವರ್ಷದ ದರ್ಶನ್‌ ಆ ದಾಖಲೆಯನ್ನು ಮುರಿದಿದ್ದಾನೆ. ದೆಹಲಿಯಲ್ಲಿರುವ ಇಂಟರ್‌ನ್ಯಾಷನಲ್‌ ಬುಕ್‌ ಆಫ್‌ ರೆಕಾರ್ಡ್ಸ್ ಸಂಸ್ಥೆಯು ಬಾಲಕನಿಗೆ ಪ್ರಮಾಣಪತ್ರ ಮತ್ತು ಪದಕವನ್ನು ವಿತರಿಸಿದೆ. ಈ ಮೂಲಕ ಅತಿ ಕಿರಿಯ ವಯಸ್ಸಿಗೆ ಅಂತಾರಾಷ್ಟ್ರೀಯ ದಾಖಲೆಯ ಸಾಧನೆ ಮಾಡಿದವರ ಸಾಲಿಗೆ ದರ್ಶನ್‌ ಸೇರ್ಪಡೆಯಾಗಿದ್ದಾನೆ. ಅಂತಾರಾಷ್ಟ್ರೀಯ ದಾಖಲೆ ಮುರಿದ ಬಾಲಕನಿಗೆ ವಿಲ್ಲುಪುರಂ ಜಿಲ್ಲಾಧಿಕಾರಿಗಳು ವೈಯಕ್ತಿಕವಾಗಿ ಅಭಿನಂದಿಸಿದ್ದಾರೆ.

ಇನ್ನು, ತಮ್ಮ ಮಗನ ಸಾಧನೆ ಬಗ್ಗೆ ತಾಯಿ ಪ್ರತಿಕ್ರಿಯೆ ನೀಡಿರುವುದು ಹೀಗೆ..  "ಶಿಕ್ಷಣವನ್ನು ಮೀರಿ, ಪೋಷಕರು ತಮ್ಮ ಮಕ್ಕಳಿಗೆ ವಿವಿಧ ಜೀವನ ಕೌಶಲ್ಯಗಳನ್ನು ಕಲಿಸುವತ್ತ ಗಮನಹರಿಸಬೇಕು. ನಾನು ದರ್ಶನ್ ಸಾಮರ್ಥ್ಯಗಳ ಮೇಲೆ ನಿಗಾ ಇಡಲು ಹಾಗೆ ಮಾಡಿದ್ದೇನೆ. ನಂತರ, ಎರಡು ವಾರಗಳ ಕಾಲ, ಅವನು ನೋಡುವ ಆಟವನ್ನು ಆಡಲು ಮತ್ತು ನಂತರ ಕಾಮೆಂಟ್ ಮಾಡುವ ಪ್ರಯತ್ನದಲ್ಲಿ ಪ್ರಪಂಚದ ಪ್ರತಿಯೊಂದು ದೇಶದ ಧ್ವಜಗಳನ್ನು ಹೆಸರಿಸಲು ನಾನು ಅವನನ್ನು ಕೇಳಿದೆ. ಅವನೂ ನನ್ನೊಂದಿಗೆ ಚೆನ್ನಾಗಿ ಪ್ರೋತ್ಸಾಹ ನೀಡಿದ’’ ಎಂದು ತಾಯಿ ಮಾಧ್ಯಮವೊಂದಕ್ಕೆ ಹೇಳಿದ್ದಾರೆ.

ಇದನ್ನೂ ಓದಿ: ಅಬ್ಬಬ್ಬಾ..ಎಷ್ಟುದ್ದದ ನಾಲಿಗೆ, ಬ್ರಷ್‌ನಂತೆ ಬಳಸ್ಕೊಂಡು ಪೇಂಟಿಂಗ್ ಮಾಡ್ತಾನೆ!

ಅಲ್ಲದೆ,  "ಅವನು ಈಗ ಅಂತಾರಾಷ್ಟ್ರೀಯ ದಾಖಲೆಯನ್ನು ಮುರಿದಿರುವುದು ಒಂದು ಸಂಭ್ರಮದ ಕ್ಷಣವಾಗಿದೆ. ನಾವು ನಂಬಲಾಗದಷ್ಟು ಹೆಮ್ಮೆಪಡುತ್ತೇವೆ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಪ್ರತಿಭೆಯನ್ನು ಗಮನಿಸಬೇಕು ಮತ್ತು ಬೆಂಬಲಿಸಬೇಕು’’ ಎಂದು ತನ್ನ ಪುಟ್ಟ ಮಗ ದರ್ಶನ್‌ ಬಗ್ಗೆ ತಾಯಿ ಹರ್ಷ ವ್ಯಕ್ತಪಡಿಸಿದ್ದಾರೆ.

ದರ್ಶನ್ ಈಗ ಕೆಲವು ಅದ್ಭುತ ಪ್ರತಿಭಾವಂತ ಅಂಬೆಗಾಲಿಡುವ ಬಾಲಕ / ಬಾಲಕಿಯರ ಸಾಲಿನಲ್ಲಿದ್ದಾನೆ. ಉದಾಹರಣೆಗೆ, 2021 ರಲ್ಲಿ, ಆಗ ಕೇವಲ 2 ವರ್ಷ ವಯಸ್ಸಿನ, ತಮಿಳುನಾಡಿನ ಅಂಬೆಗಾಲಿಡುವ ಮಗು ಮಾಯನ್ ಎಂಬುವನು ದಾಖಲೆಗಳನ್ನು ನಿರ್ಮಿಸಿದ್ದನು.. ಅವನ ನೆನಪಿನ ಶಕ್ತಿಯು ಯಾವುದೇ ಹೆಸರನ್ನು ಸೂಚಿಸುವಷ್ಟು ಪ್ರಬಲವಾಗಿದ್ದು, ಚಿತ್ರಗಳನ್ನು ಗುರುತಿಸಿ ಮತ್ತು ದೀರ್ಘಕಾಲ ಅದನ್ನು ನೆನಪಿನಲ್ಲಿಟ್ಟುಕೊಳ್ಳುತ್ತಾನೆ. ಅಲ್ಲದೆ, ಹಿಂದೆ ನಡೆದ ಘಟನೆಯ ಬಗ್ಗೆ ಎಷ್ಟು ದಿನಗಳ ನಂತರ ಪ್ರಶ್ನಿಸಿದರೂ ಆತ ಸ್ಥಿರವಾಗಿ ಉತ್ತರಿಸಬಲ್ಲ.

ಇದನ್ನೂ ಓದಿ: Selfie: ಸೆಲ್ಫಿ ಮೂಲಕವೇ ಗಿನ್ನೆಸ್​ ದಾಖಲೆ ಬರೆದ ಅಕ್ಷಯ್​ ಕುಮಾರ್

Latest Videos
Follow Us:
Download App:
  • android
  • ios