ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಅಂದ್ರೆ ಇಷ್ಟುದ್ದ ಮೀಸೆ ಬಿಡೋದ?
ಮೀಸೆ ಹೊತ್ತ ಗಂಡಸಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್ ಅನ್ನೋ ಹಾಡನ್ನು ಕೇಳಿದ್ದೀರಲ್ವಾ? ಇದ್ರು ಇರ್ಬೋದು ಹಾಗಂತ ಹೀಗೆ ಮೀಸೆ ಬಿಟ್ರೆ ಹೇಗೆ ಅಂತ ನಿಮಗೆ ಅನಿಸಬಹುದು. ತನ್ನ 18.5 ಅಡಿ ಉದ್ದದ ಮೀಸೆ ಇಂದ ಗಿನ್ನಿಸ್ ದಾಖಲೆ ಬರೆದ ವ್ಯಕ್ತಿ ಬಗ್ಗೆ ತಿಳಿಯೋಣ.
ಜನರು ಏನೇನೋ ವಿಷಯಗಳಿಗೆ ಸಂಬಂಧಿಸಿದಂತೆ ದಾಖಲೆ ಬರೆಯುತ್ತಿದ್ದಾರೆ. ಅತಿ ಉದ್ದದ ಮೀಸೆಯನ್ನು ಹೊಂದುವ ಮೂಲಕವೂ ಗಿನ್ನಿಸ್ ರೆಕಾರ್ಡ್ (Guinnies Record) ಮಾಡಿದವರು ಇದ್ದಾರೆ. ಅಂತಹ ದಾಖಲೆಯನ್ನು ನಮ್ಮ ದೇಶದವರೇ ಆದ ರಾಮ್ ಸಿಂಗ್ ಚೌಹಾಣ್ ಮಾಡಿದ್ದಾರೆ ಅನ್ನೋದು ನಿಮಗೆ ಗೊತ್ತಾ? ಇವರ ಮೀಸೆಯ ಉದ್ದ ಕೇಳಿದ್ರೆ ನೀವು ಶಾಖ್ ಆಗ್ತೀರಿ.
ಜೈಪುರದ 64 ವರ್ಷದ ರಾಮ್ ಸಿಂಗ್ ಚೌಹಾಣ್ (Ram Singh Chouhan), 1970 ರಿಂದ ಮೀಸೆ ಕತ್ತರಿಸಿಯೇ ಇಲ್ಲವಂತೆ. 2010 ರಲ್ಲಿ, ಮೀಸೆ 14 ಅಡಿ ಉದ್ದವಾಗಿದ್ದಾಗ, ಅವರ ಹೆಸರು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ನಲ್ಲಿ ದಾಖಲಾಗಿತ್ತು. ಈಗ ಅದು 18.5 ಅಡಿ ಇದೆ. ಈ ದಾಖಲೆಯನ್ನು ಇನ್ನೂ ಯಾರೂ ಮುರಿದಿಲ್ಲ ಎನ್ನಲಾಗುತ್ತೆ. ಇಟಲಿಯ ರೋಮ್ ನಲ್ಲಿ ಇಟಾಲಿಯನ್ ಟಿವಿ ಶೋ ಲೋ ಶೋ ದೇ ರೆಕಾರ್ಡ್ ಸೆಟ್ ನಲ್ಲಿ ಅಳೆಯಲಾಗಿತ್ತಂತೆ.
ದೊಡ್ಡ ಮೀಸೆಯನ್ನು ಟವೆಲ್ ನಂತೆ ಕುತ್ತಿಗೆಗೆ ಸುತ್ತಿ ಎಲ್ಲೆಡೆ ಕಾಣಿಸಿಕೊಳ್ಳುವ ರಾಮ್ ಸಿಂಗ್ ಚೌಹಾಣ್ ಅವರ ಕಥೆ , ಕಠಿಣ ಪರಿಶ್ರಮವನ್ನು ಹೇಳುತ್ತದೆ. ರಾಮ್ ಸಿಂಗ್ ರಾಜಸ್ಥಾನ ಪ್ರವಾಸೋದ್ಯಮ ಇಲಾಖೆಯಲ್ಲಿ (Tourism Department) ಕೆಲಸ ಮಾಡುತ್ತಿದ್ದರು. ಅವರಿಗೆ ಮೀಸೆ ಇಡೋದಂದ್ರೆ ತುಂಬಾ ಇಷ್ಟವಂತೆ. ಆದರೆ ಅದನ್ನು ಹೆಚ್ಚಿಸುವ ಮೂಲಕ ದಾಖಲೆ ಮಾಡಲು ಸ್ಫೂರ್ತಿ ರಾಜಸ್ಥಾನದ ಕರ್ಣ ರಾಮ್ ಭೀಲ್ ಅವರಿಂದ ಬಂದಿತಂತೆ. ಅದು ನಡೆದದ್ದು 1982ರಲ್ಲಿ. ಕರ್ಣನ 7 ಅಡಿ 10 ಇಂಚು ಉದ್ದದ ಮೀಸೆ ವಿಶ್ವ ದಾಖಲೆಯನ್ನು ನಿರ್ಮಿಸಿದಾಗ, ರಾಮ್ ಸಿಂಗ್ ತಾವು ಸಹ ಮೀಸೆಯನ್ನು ಬೆಳೆಸುವ ಬಗ್ಗೆ ತೀರ್ಮಾನಿಸಿದರಂತೆ.
ಮೀಸೆ ಬೆಳೆಸುವುದು ಆಟವಲ್ಲ ಎನ್ನುವ ರಾಮ್ ಸಿಂಗ್ ಅವರಿಗೆ ಸ್ನಾನ ಮಾಡಲು 2 ಗಂಟೆಗಳ ಸಮಯ ತೆಗೆದುಕೊಳ್ಳುತ್ತದೆ. ಮೀಸೆಯನ್ನು ಯಾವಾಗಲೂ ಬಟ್ಟೆಯಲ್ಲಿ ಸುತ್ತಿ ಇಟ್ಟುಕೊಳ್ಳುವ ಇವರು. ಎಲ್ಲಾದರೂ ತೆರೆದರೆ, ಈ ಮೀಸೆಗಳಿಗೆ ತೊಂದರೆ ಉಂಟಾಗುತ್ತೆ ಎನ್ನುತ್ತಾರೆ. ಅವುಗಳನ್ನು ಬಾಚಲು ಮತ್ತು ಮಸಾಜ್ ಮಾಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎನ್ನುತ್ತಾರೆ.
ಇನ್ನು ಮೀಸೆ ಬಗ್ಗೆ ಹೆಚ್ಚಿನ ಕೇರ್ ತೆಗೆದುಕೊಳ್ಳುವ ಇವರು ಅದಕ್ಕೆ ಆಗಾಗ ಮಸಾಜ್ (massage) ಮಾಡುತ್ತಾರಂತೆ ಮತ್ತು ನಿಯಮಿತವಾಗಿ ಸಾಸಿವೆ ಎಣ್ಣೆ ಹಾಕುತ್ತಾರಂತೆ ಮತ್ತು ಪ್ರತಿ 10 ದಿನಗಳಿಗೊಮ್ಮೆ ಮೀಸೆಯನ್ನು ಮುಲ್ತಾನಿ ಮಿಟ್ಟಿ ಬಳಸಿ ತೊಳೆಯುತ್ತಾರಂತೆ.ಇದುವರೆಗೆ ಶ್ಯಾಂಪೂ ಕೂಡ ಹಾಕಿಲ್ವಂತೆ. ಇದು ಬಹಳ ಸಮಯ ತೆಗೆದುಕೊಳ್ಳುತ್ತದೆ. ಆದರೆ ಹೆಂಡತಿ ನನಗೆ ಸಹಾಯ ಮಾಡುತ್ತಾರೆ ಎನ್ನುತ್ತಾರೆ ರಾಮ್ ಸಿಂಗ್.
ರಾಮ್ ತನ್ನ ಉದ್ದವಾದ ಮೀಸೆಯನ್ನು ಎಂದಿಗೂ ಕತ್ತರಿಸಿಲ್ಲವಂತೆ, ಕೇವಲ"ತುಟಿಯ ಪ್ರದೇಶದ ಸುತ್ತಲೂ ಇರುವ ಮೀಸೆಯನ್ನು ಮಾತ್ರ ಕತ್ತರಿಸಿದ್ದಾರಂತೆ. ಕೆನಡಾದಲ್ಲಿ ನಡೆದ ದಾಖಲೆಯಲ್ಲಿ ಇವರು ಅತಿ ಉದ್ದದ ಗಡ್ಡದ ದಾಖಲೆಯನ್ನು ಹೊಂದಿರುವ ಸರ್ವಾನ್ ಸಿಂಗ್ (Sarvan Singh) ಅವರೊಂದಿಗೆ ಕ್ಲಿಕ್ ಮಾಡಿರೋ ಫೋಟೋ ಇದು. ನಿಮಗೂ ಅವರ ಹಾಗೆ ಸಾಧನೆ ಮಾಡಬೇಡಿ… ಇವತ್ತಿಂದಲೇ ಮೀಸೆ ಬೆಳೆಸೋದನ್ನು ರೂಢಿ ಮಾಡಿ.