ಅಬ್ಬಬ್ಬಾ..ಎಷ್ಟುದ್ದದ ನಾಲಿಗೆ, ಬ್ರಷ್‌ನಂತೆ ಬಳಸ್ಕೊಂಡು ಪೇಂಟಿಂಗ್ ಮಾಡ್ತಾನೆ!
ನಾವೆಲ್ಲರೂ ನಾಲಿಗೆಯನ್ನು ಆಹಾರವನ್ನು ಟೇಸ್ಟ್ ಮಾಡೋಕೆ ಬಯಸ್ತೇವೆ. ಆದ್ರೆ ಇಲ್ಲೊಬ್ಬಾತ ಮಾತ್ರ ನಾಲಿಗೆಯನ್ನು ಬಳಸ್ತಿರೋದು ಚಿತ್ರ ಬಿಡಿಸ್ತಾನೆ. ಇಷ್ಟಕ್ಕೂ ಆತನಿಗಿರೋದು ಅಂತಿಂಥಾ ನಾಲಿಗೆಯಲ್ಲ. ವಿಶ್ವದ ಅತಿ ಉದ್ದದ ನಾಲಿಗೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ.
ನಾಲಿಗೆಯಿಂದಲೇ ನಾವು ಸಿಹಿ, ಹುಳಿ, ಖಾರ, ಹೀಗೆ ಯಾವುದೇ ರುಚಿಯನ್ನು ಸರಿಯಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತದೆ. ಜ್ವರ ಬಂದು ನಾಲಿಗೆಗೆ ರುಚಿಯನ್ನು ಗ್ರಹಿಸಲು ಸಾಧ್ಯವಾಗದಿದ್ದರೆ ಒದ್ದಾಡುವಂತಾಗುತ್ತದೆ. ನಾಲಿಗೆಯನ್ನು ಬಳಸಿಕೊಂಡು ಕೆಲವೊಬ್ಬರು ಕೆಲವೊಂದು ಚಮತ್ಕಾರವನ್ನೂ ಮಾಡುತ್ತಾರೆ. ನಾಲಿಗೆಯನ್ನು ಮಡಚುವುದು, ಮೂಗಿಗಿ ತಾಗಿಸುವುದು ಮಾಡುತ್ತಾರೆ. ಆದ್ರೆ ಇಲ್ಲೊಬ್ಬ ವ್ಯಕ್ತಿ ನಾಲಿಗೆಯನ್ನು ಬಳಸಿ ಅದ್ಭುತ ಪೇಂಟಿಂಗ್‌ನ್ನೇ ಬಿಡಿಸ್ತಾನೆ. ಅರೆ, ನಾಲಿಗೆ ಬಳಸಿಕೊಂಡು ಪೇಂಟಿಂಗಾ ? ಅದು ಹೇಗೆ ಸಾಧ್ಯ ಅನ್ಬೇಡಿ. ಆತನಿಗಿರೋದು ಅಷ್ಟು ಉದ್ದದ ನಾಲಿಗೆ
ಜಗತ್ತಿನ ಅತೀ ಉದ್ದದ ನಾಲಿಗೆ ಹೊಂದಿದ ವ್ಯಕ್ತಿ
ಅಮೆರಿಕದ ನಿಕ್ ಸ್ಟೋಬಲ್‌ರ್ ಎಂಬ ವ್ಯಕ್ತಿ 10.1 ಸೆ.ಮೀ ಉದ್ದದ ನಾಲಿಗೆ (Tongue)ಯನ್ನು ಹೊಂದಿರುವ ಮೂಲಕ 2012ರಿಂದಲೂ ಜಗತ್ತಿನ ಅತೀ ಉದ್ದದ ನಾಲಿಗೆ ಹೊಂದಿದ ವ್ಯಕ್ತಿ ಎಂಬ ಗಿನ್ನೆಸ್ ವಿಶ್ವ ದಾಖಲೆ (Guiness world record) ಹೊಂದಿದ್ದಾನೆ. ಆದರೆ ಸುದ್ದಿ ಇಷ್ಟೇ ಅಲ್ಲ. ಆ ನಾಲಿಗೆಯಿಂದಲೇ ನಿಕ್ಕಿ ಪೇಂಟಿಂಗ್ ಮಾಡುವ ವಿಶಿಷ್ಟ ಹವ್ಯಾಸ ಬೆಳೆಸಿಕೊಂಡಿದ್ದಾನೆ. ನಿಕ್ಕಿ ತನ್ನ ನಾಲಿಗೆಯಿಂದ ಪೇಂಟಿಂಗ್ ಮಾಡುತ್ತಿರುವ ವೀಡಿಯೋ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದ್ದು ನೆಟ್ಟಿಗರು ಬಾಯಿ ಮೇಲೆ ಬೆರಳಿಟ್ಟಿದ್ದಾರೆ. ಕೆಲವರು ವಿಶಿಷ್ಟಪ್ರತಿಭೆ ಎಂದು ಕೊಂಡಾಡಿದ್ದಾರೆ. 9.75 ಸೆ.ಮೀ ಉದ್ದದ ನಾಲಿಗೆ ಮೂಲಕ ಶನೆಲ್ ಟ್ಯಾಪರ್ ವಿಶ್ವದ ಅತೀ ಉದ್ದದ ನಾಲಿಗೆ ಇರುವವರು ಎಂಬ ಗಿನ್ನೆಸ್ ದಾಖಲೆ ಹೊಂದಿದ್ದಾರೆ.
ಕನಸಲ್ಲಿ ದೇವರು ಹೇಳಿದ್ದಕ್ಕೆ ನಾಲಗೆ ಕತ್ತರಿಸಿಕೊಂಡ ಬಳ್ಳಾರಿ ಯುವಕ!
ನಾಲಿಗೆಯನ್ನು ಬಳಸಿ ಕಲಾಕೃತಿ ಸಿದ್ಧಪಡಿಸುವ ನಿಕ್
ನಿಕ್ ಯುಕೆಗೆ ತನ್ನ ಮೊದಲ ಭೇಟಿಯ ಸಮಯದಲ್ಲಿ ದಿಸ್ ಮಾರ್ನಿಂಗ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡರು ಮತ್ತು ಚಿತ್ರಕಲೆ (Painting) ಕೌಶಲ್ಯವನ್ನು ಪ್ರದರ್ಶಿಸಲು ಅವರ ನಾಲಿಗೆಯನ್ನು ಬಳಸಿದರು. ಆತಿಥೇಯರಾದ ಫಿಲಿಪ್ ಸ್ಕೋಫೀಲ್ಡ್ ಮತ್ತು ಹಾಲಿ ವಿಲ್ಲೋಬಿ ಅವರ ಭಾವಚಿತ್ರವನ್ನು ಚಿತ್ರಿಸಲು ನಿಕ್ ತನ್ನ ನಾಲಿಗೆಯನ್ನು ಬಳಸಿ ಚಿತ್ರಿಸಿದರು. ಅವರ ಕಲಾಕೃತಿಯನ್ನು ಬಹಿರಂಗಪಡಿಸುವಾಗ, ನಿಕ್, 'ನಿಮ್ಮಿಬ್ಬರ ಸೌಂದರ್ಯವನ್ನು ಸೆರೆಹಿಡಿಯುವುದು ಕಷ್ಟ, ಆದರೆ ನಾನು ನನ್ನ ಕೈಲಾದಷ್ಟು ಮಾಡಿದ್ದೇನೆ' ಎಂದು ಹೇಳಿದರು.
ಪುರುಷ ನಾಲಿಗೆಯು ಸರಾಸರಿ ಉದ್ದ 8.5 ಸೆಂ.ಮೀ ಅಳತೆಯನ್ನು ಹೊಂದಿದೆ. ಆದರೆ ಪುರುಷರಿಗೆ ಹೋಲಿಸಿದರೆ ಮಹಿಳೆಯರ ನಾಲಿಗೆ ಚಿಕ್ಕದಾಗಿದೆ. ನಿಕ್‌ನ ನಾಲಿಗೆಯು ತುಂಬಾ ಉದ್ದವಾಗಿದೆ. ಅವನು ತನ್ನ ನಾಲಿಗೆಯನ್ನು ಬಳಸಿಕೊಂಡು ಮೊಣಕೈಯನ್ನು ನೆಕ್ಕಬಹುದು. ಇದು ಸಾಮಾನ್ಯ ವ್ಯಕ್ತಿಗೆ ಮಾಡಲು ಅಸಾಧ್ಯವಾಗಿದೆ. ನಿಕ್ ಇಲ್ಲಿಯ ವರೆಗೆ ತಾನು ನಾಲಿಗೆಯನ್ನು ಬಳಸಿಕೊಂಡು ಮಾಡಿರುವ ಪೇಂಟಿಂಗ್‌ಗಳನ್ನು ಮಾರಾಟ ಮಾಡುವ ಮೂಲಕ 99,000 ರೂ. ಗಳಿಸಿದ್ದಾನೆ.
ನಾಲಿಗೆ ಬಣ್ಣ ರಟ್ಟು ಮಾಡುತ್ತೆ ಅನಾರೋಗ್ಯದ ಗುಟ್ಟು!
ವ್ಯಕ್ತಿ ನಾಲಿಗೆ ಬಳಸಿ ಪೇಂಟಿಂಗ್ ಮಾಡ್ತಿರೋ ವೀಡಿಯೋಗೆ ನೆಟ್ಟಿಗರು ನಾನಾ ರೀತಿ ಕಾಮೆಂಟ್ ಮಾಡಿದ್ದಾರೆ. ಕೆಲವೊಬ್ಬರು ಇದೆಂಥಾ ಅಚ್ಚರಿ ಎಂದರೆ, ಇನ್ನು ಕೆಲವರು ಅಸಹ್ಯವಾಗಿ ಕಾಣುತ್ತದೆ ಎಂದು ತಿಳಿಸಿದ್ದಾರೆ. ಮತ್ತೆ ಹಲವರು ಇಷ್ಟುದ್ದದ ನಾಲಿಗೆ ಕೂಡಾ ಇದೆಯಾ ಎಂದು ನಿಬ್ಬೆರಗಾಗಿದ್ದಾರೆ.
ವೈರಲ್ ವೀಡಿಯೊವನ್ನು ಇಲ್ಲಿ ನೋಡಿ: