Selfie: ಸೆಲ್ಫಿ ಮೂಲಕವೇ ಗಿನ್ನೆಸ್​ ದಾಖಲೆ ಬರೆದ ಅಕ್ಷಯ್​ ಕುಮಾರ್​

ಸೆಲ್ಫಿ ಚಿತ್ರದ ಪ್ರಮೋಷನ್​ ಸಮಯದಲ್ಲಿ ಸೆಲ್ಫಿ ಕ್ಲಿಕ್ಕಿಸುವ ಮೂಲಕ ನಟ ಅಕ್ಷಯ್​ ಕುಮಾರ್​ ಗಿನ್ನೆಸ್​ ದಾಖಲೆ ಸೃಷ್ಟಿಸಿದ್ದಾರೆ. ಅವರು ಮಾಡಿದ್ದೇನು?
 

Akshay Kumar breaks Guinness World Record for clicking 184 selfies in 3 minutes

ಬಾಲಿವುಡ್ ನಟ ಅಕ್ಷಯ್ ಕುಮಾರ್  (Akshay Kumar) ಮುಂಬೈನಲ್ಲಿ ತಮ್ಮ ಅಭಿಮಾನಿಗಳೊಂದಿಗೆ ಮೂರು ನಿಮಿಷಗಳಲ್ಲಿ ಅತಿ ಹೆಚ್ಚು ಸೆಲ್ಫಿಗಳನ್ನು ತೆಗೆದುಕೊಂಡು ಗಿನ್ನೆಸ್ ವಿಶ್ವ ದಾಖಲೆಯನ್ನು ಬರೆದಿದ್ದಾರೆ. ಈ ಮೂಲಕ,  ಜನವರಿ 22, 2018 ರಂದು ಕಾರ್ನಿವಲ್ ಡ್ರೀಮ್ ಕ್ರೂಸ್ ಹಡಗಿನಲ್ಲಿ ಜೇಮ್ಸ್ ಸ್ಮಿತ್ (James Smith) ಮೂರು ನಿಮಿಷಗಳಲ್ಲಿ 168 ಸೆಲ್ಫಿಗಳನ್ನು ತೆಗೆದು ನಿರ್ಮಿಸಿದ್ದ ವಿಶ್ವ ದಾಖಲೆಯನ್ನು ಅಕ್ಷಯ್‌ ಮುರಿದಿದ್ದಾರೆ. ಇಮ್ರಾನ್‌ ಖಾನ್‌ ಸಹನಟರಾಗಿ ಅಭಿನಯಿಸಿರುವ ತಮ್ಮ ಮುಂಬರುವ 'ಸೆಲ್ಫಿ'  (Selfie) ಚಿತ್ರದ ಪ್ರಚಾರದಲ್ಲಿ ನಿರತರಾಗಿರುವ ಅಕ್ಷಯ್, 3 ನಿಮಿಷಗಳಲ್ಲಿ 184 ಸೆಲ್ಫಿಗಳನ್ನು ತೆಗೆದು ದಾಖಲೆ ನಿರ್ಮಿಸಿದ್ದಾರೆ. ಕಾರ್ನಿವಲ್​ ಡ್ರೀಮ್​ ಅವರಿಗಿಂತಲೂ ಮುಂಚೆ   2015 ರಲ್ಲಿ ಹಾಲಿವುಡ್ ನಟ ಡ್ವೇನ್ ಜಾನ್ಸನ್ ಮೂರು ನಿಮಿಷಗಳಲ್ಲಿ 105 ಸೆಲ್ಫಿಗಳೊಂದಿಗೆ ಈ ದಾಖಲೆಯನ್ನು (Record) ನಿರ್ಮಿಸಿದ್ದರು. ಎಲ್ಲವನ್ನೂ ಈಗ ಅಕ್ಷಯ್​ ಕುಮಾರ್ ಧೂಳಿಪಟ ಮಾಡಿದ್ದಾರೆ. ಹಾಸ್ಯ ಸಿನಿಮಾ ಸೆಲ್ಫಿಯ ಪ್ರಚಾರದ ಸಂದರ್ಭದಲ್ಲಿ ಈಗ ಸೆಲ್ಫಿ ಮೂಲಕವೇ ದಾಖಲೆ ಬರೆದಿದ್ದಾರೆ.  

ಅಕ್ಷಯ್ ಕುಮಾರ್ ಅಭಿಮಾನಿಗಳಿಗೆ ಇನ್​ಸ್ಟಾಗ್ರಾಮ್​ (Instagram) ಮೂಲಕ ಅದರ ಒಂದು ಲುಕ್ ಕೂಡಾ ತೋರಿಸಿದ್ದಾರೆ. 'ನಮಸ್ತೆ' ಎಂದು ಬರೆಯುವ ಮೂಲಕ  ಅಭಿಮಾನಿಗಳನ್ನು ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಸ್ವಾಗತಿಸಿದ ನಟ ಅಕ್ಷಯ್​ ಕುಮಾರ್​, ಇವೆಂಟ್‌ನ ವಿಡಿಯೋವನ್ನು ತೋರಿಸಿದ್ದಾರೆ. ಅವರು ಅನೇಕ ಸೆಲ್ಫಿಗಳನ್ನು ಕ್ಲಿಕ್ ಮಾಡುವುದನ್ನು ಅದರಲ್ಲಿ ನೋಡಬಹುದು. ಫೋಟೋಗಳು (Photo) ಮತ್ತು ವೀಡಿಯೊಗಳಲ್ಲಿ,  ಅಕ್ಷಯ್​ ಕುಮಾರ್​ ಅವರು ತಮ್ಮ  ಅಭಿಮಾನಿಗಳು ಮತ್ತು ಗಿನ್ನೆಸ್ ಸಿಬ್ಬಂದಿಯಿಂದ ಸುತ್ತುವರೆದಿರುವ ವೇದಿಕೆಯಲ್ಲಿ ದಾಖಲೆ ತೋರಿಸುವುದನ್ನು ಕಾಣಬಹುದು. ನನ್ನ ಅಭಿಮಾನಿಗಳ (Fans) ಸಹಾಯದಿಂದ ನಾವು 3 ನಿಮಿಷಗಳಲ್ಲಿ ಹೆಚ್ಚು ಸೆಲ್ಫಿಗಾಗಿ ಗಿನ್ನೆಸ್ ವಿಶ್ವ ದಾಖಲೆಯನ್ನು ಮಾಡಿದ್ದೇವೆ. ಎಲ್ಲರಿಗೂ ಧನ್ಯವಾದಗಳು. ಇದು ತುಂಬಾ ವಿಶೇಷವಾಗಿತ್ತು. ನಾನು ಇದನ್ನು ಶಾಶ್ವತವಾಗಿ ನೆನಪಿಸಿಕೊಳ್ಳುತ್ತೇನೆ. ಸೆಲ್ಫಿ ಚಿತ್ರದಲ್ಲಿ  ನಾವೆಲ್ಲರೂ ಚಿತ್ರಮಂದಿರಗಳಲ್ಲಿ ಸಿಗೋಣ, ಎಲ್ಲರೂ ಚಿತ್ರವನ್ನು ಪ್ರೋತ್ಸಾಹಿಸಿ ಎಂದು ಬರೆದಿದ್ದಾರೆ. 

 184 ಫೋಟೋಗಳನ್ನು ಕ್ಲಿಕ್ಕಿಸಿ ಗಿನ್ನೆಸ್ ( Guinness World Record) ವಿಶ್ವ ದಾಖಲೆಯ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.  ಇವೆಂಟ್‌ನ ಲುಕ್ ಜೊತೆಗೆ, ನಟ  ಅಭಿಮಾನಿಗಳಿಗೆ ಕೃತಜ್ಞತೆ ಹೇಳಿ ಪೋಸ್ಟ್ ಬರೆದಿದ್ದಾರೆ.  ಅಭಿಮಾನಿಗಳ ಪ್ರೀತಿಯಿಂದಾಗಿ ಇದು ಸಾಧ್ಯವಾಗಿದೆ. ಅಭಿಮಾನಿಗಳು ನನ್ನ ವೃತ್ತಿಜೀವನದುದ್ದಕ್ಕೂ ನನ್ನೊಂದಿಗೆ ಜೊತೆಯಾಗಿ ನಿಂತಿದ್ದಾರೆ ಎಂದು ಅವರು ಬರೆದಿದ್ದಾರೆ.

ಅಕ್ಷಯ್​ಗೆ ಲಕ್ಕಿಮ್ಯಾನ್​ ಆಗುವರೇ ಸಲ್ಲು ಭಾಯ್​? ಮದುವೆಯಲ್ಲಿ ಇಬ್ಬರ ಭರ್ಜರಿ ಸ್ಟೆಪ್​

2022 ರಲ್ಲಿ ವರ್ಷದಲ್ಲಿ ನಟನ ಸಿನಿಮಾಗಳು ಸತತ ಫ್ಲಾಪ್ ಆಗಿತ್ತು. ಬಚ್ಚನ್ ಪಾಂಡೆ, ಸಾಮ್ರಾಟ್ ಪೃಥ್ವಿರಾಜ್, ರಕ್ಷಾ ಬಂಧನ, ರಾಮ್ ಸೇತು (Ram Setu) ಸಿನಿಮಾ ಹಿಟ್ ಆಗಲಿಲ್ಲ. ಈಗ, ಅವರ ಆಕ್ಷನ್-ಕಾಮಿಡಿ ಸಿನಿಮಾ ಸೆಲ್ಫಿ ಬಿಡುಗಡೆಯಾಗಲಿದೆ. ಕುತೂಹಲಕಾರಿಯಾಗಿ, ಸೆಲ್ಫಿ ಸಿನಿಮಾ ಕೊರೋನಾ (Corona) ನಂತರದ ಅಕ್ಷಯ್ ಕುಮಾರ್ ಅವರ ಏಳನೇ ಸಿನಿಮಾ. ಸೆಲ್ಫಿ ಚಿತ್ರವು ಮಲಯಾಳಂನಲ್ಲಿ ಪೃಥ್ವಿರಾಜ್‌ ಸುಕುಮಾರನ್‌ (Pratwhiraj Sukumaran) ಹಾಗೂ ಸುರಾಜ್‌ ವೆಂಜಾರಮೂಡು ಅಭಿನಯದ ‘ಡ್ರೈವಿಂಗ್ ಲೈಸೆನ್ಸ್’ ಚಿತ್ರದ ಅಧಿಕೃತ ರಿಮೇಕ್ ಆಗಿದೆ. ಇದರಲ್ಲಿ ಅಕ್ಷಯ್ ಕುಮಾರ್‌ ಪೃಥ್ವಿರಾಜ್‌ ಪಾತ್ರವನ್ನು ಮಾಡಲಿದ್ದು, ಸೂಪರ್ ಸ್ಟಾರ್ ಆಗಿ ಕಾಣಿಸಿಕೊಳ್ಳಲಿದ್ದಾರೆ. ಇಮ್ರಾನ್ ಖಾನ್‌ (Imran Khan) ಟ್ರಾಫಿಕ್ ಪೋಲೀಸ್ ಪಾತ್ರವನ್ನು ಕಾಣಿಸಲಿದ್ದಾರೆ. ಮಳೆಯಾಳಂನಲ್ಲಿ (Malayalam) ಈ ಪಾತ್ರವನ್ನು ಸುರಾಜ್‌ ಮಾಡಿದ್ದರು. ಚಿತ್ರ ನಾಳೆ (ಫೆ.24) ಬಿಡುಗಡೆಯಾಗಲಿದೆ.

ನೋರಾ ಜೊತೆ ಅಕ್ಷಯ್ ಕುಮಾರ್ ರೊಮ್ಯಾಂಟಿಕ್ ಡಾನ್ಸ್; ಟ್ವಿಂಕಲ್‌ ಖನ್ನಾಗೆ ಟ್ಯಾಗ್ ಮಾಡಿ ಕಾಲೆಳೆದ ಫ್ಯಾನ್ಸ್

 

 

Latest Videos
Follow Us:
Download App:
  • android
  • ios