ತಮಿಳುನಾಡಿನ 13 ಮೀನುಗಾರರ ಜಾಮೀನಿಗೆ 13 ಕೋಟಿ ನೀಡಿ ಎಂದ ಶ್ರೀಲಂಕಾ ಕೋರ್ಟ್!

ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಓ ಪನ್ನೀರಸೆಲ್ವಂ ಅವರು ಶ್ರೀಲಂಕಾದಿಂದ ಭಾರತೀಯ ಮೀನುಗಾರರ ಬಿಡುಗಡೆಗೆ ಸಹಾಯ ಕೋರಿ ವಿದೇಶಾಂಗ ಸಚಿವ ಡಾ ಎಸ್ ಜೈಶಂಕರ್ ಅವರಿಗೆ ಪತ್ರ ಬರೆದಿದ್ದಾರೆ. ಶ್ರೀಲಂಕಾ ನ್ಯಾಯಾಲಯವು 13 ಮೀನುಗಾರರಿಗೆ ಜಾಮೀನು ಮೊತ್ತವಾಗಿ 13 ಕೋಟಿ ರೂಪಾಯಿ ನೀಡುವಂತೆ ಆದೇಶ ನೀಡಿದೆ.

13 Indian fishermen to pay Rs 1 crore each for bail orders Sri Lankan court O Panneerselvam seeks help from EAM Jaishankar san

ನವದೆಹಲಿ (ಏ.13): ಶ್ರೀಲಂಕಾದಲ್ಲಿ ( Sri Lanka ) ಬಂಧಿಯಾಗಿರುವ ತಮಿಳುನಾಡಿನ ( Tamil Nadu ) 13 ಮೀನುಗಾರರ ( Fishermen )ಬಿಡುಗಡೆಗೆ ಅಲ್ಲಿನ ಕೋರ್ಟ್ 13 ಕೋಟಿ ರೂಪಾಯಿಯನ್ನು ಜಾಮೀನು ಮೊತ್ತವಾಗಿ ನೀಡುವಂತೆ ಅದೇಶ ನೀಡಿದ ಬೆನ್ನಲ್ಲಿಯೇ,  ತಮಿಳುನಾಡಿನ ಮಾಜಿ ಉಪಮುಖ್ಯಮಂತ್ರಿ ಓ ಪನ್ನೀರಸೆಲ್ವಂ ( Former Tamil Nadu Deputy Chief Minister O Panneerselvam ) ಅವರು ಶ್ರೀಲಂಕಾದಿಂದ ಭಾರತೀಯ ಮೀನುಗಾರರ ಬಿಡುಗಡೆಗೆ ಸಹಾಯ ಕೋರಿ ವಿದೇಶಾಂಗ ಸಚಿವ ಡಾ.ಎಸ್. ಜೈಶಂಕರ್ ( External Affairs Minister Dr S. Jaishankar ) ಅವರಿಗೆ ಪತ್ರ ಬರೆದಿದ್ದಾರೆ.

 ಮಾರ್ಚ್ 23 ರಂದು ತಮಿಳುನಾಡಿನ 13 ಮೀನುಗಾರರನ್ನು ಶ್ರೀಲಂಕಾ ನೌಕಾಪಡೆ ( Sri Lanka Navy ) ಬಂಧಿಸಿ ಬಂಧಿಸಿತ್ತು. ಪನ್ನೀರಸೆಲ್ವಂ ಅವರು ಇಎಎಂಗೆ ಬರೆದ ಪತ್ರದಲ್ಲಿ ಮೀನುಗಾರರನ್ನು ಅಮಾಯಕರು ಎಂದು ಹೇಳಿದ್ದಾರೆ. ಆಳ ಸಮುದ್ರದಲ್ಲಿ ತಮ್ಮ ಜೀವನೋಪಾಯಕ್ಕಾಗಿ ಮೀನುಗಾರಿಕೆ ಮಾಡುತ್ತಿದ್ದ ತಮಿಳುನಾಡಿನ 13 ಅಮಾಯಕ ಮೀನುಗಾರರನ್ನು ಸೆರೆಹಿಡಿದು ಬಂಧಿಸಿದ ಮತ್ತೊಂದು ಅತಿರೇಕದ ಘಟನೆಯ ಬಗ್ಗೆ ನಿಮ್ಮ ಗಮನವನ್ನು ಸೆಳೆಯಲು ನಾನು ಬಯಸುತ್ತೇನೆ ಎಂದು ಒಪಿಎಸ್ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ. ಅವರನ್ನು ಬಿಡುಗಡೆ ಮಾಡಲು ಶ್ರೀಲಂಕಾ ನ್ಯಾಯಾಲಯವು ( Sri Lanka Court ) ಜಾಮೀನು ಮೊತ್ತವಾಗಿ ತಲಾ 1 ಕೋಟಿ ರೂಪಾಯಿ ದಂಡ ವಿಧಿಸಿದೆ.

''ನ್ಯಾಯಾಲಯದ ಈ ಕಾಯ್ದೆ ತಮಿಳುನಾಡಿನ ಮೀನುಗಾರರಿಗೆ ದೊಡ್ಡ ಮಟ್ಟದ ಶಿಕ್ಷೆಯ ರೂಪವಾಗಿ ಕಾಣುತ್ತಿದೆ.  ಶ್ರೀಲಂಕಾ ನೌಕಾಪಡೆಯ ನಿರಂತರ ಭಯದಿಂದ ಮೀನುಗಾರರು ಮೀನುಗಾರಿಕೆಗೆ ಸಮುದ್ರಕ್ಕೆ ಇಳಿಯುತ್ತಿದ್ದಾರೆ. ಎಲ್ಲಾ ಮೀನುಗಾರರು ಮತ್ತು ಅವರ ಮೀನುಗಾರಿಕಾ ದೋಣಿಗಳನ್ನು ಬಿಡುಗಡೆ ಮಾಡಲು ನಿಮ್ಮ ತಕ್ಷಣದ ಮಧ್ಯಸ್ಥಿಕೆಗೆ ನಾನು ವಿನಂತಿಸುತ್ತೇನೆ ಎಂದು ತಮಿಳುನಾಡು ಮಾಜಿ ಉಪ ಮುಖ್ಯಮಂತ್ರಿ ಹೇಳಿದ್ದಾರೆ.

ತವರಿಗೆ ಹಣ ಕಳಿಸಿಕೊಡಿ, ವಿದೇಶದಲ್ಲಿರುವ ಲಂಕಾ ಪ್ರಜೆಗಳಿಗೆ ಶ್ರೀಲಂಕಾ ಸರ್ಕಾರದ ಮನವಿ!

ಶ್ರೀಲಂಕಾ ತನ್ನ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿರುವ ಸಮಯದಲ್ಲಿ ಈ ಬೆಳವಣಿಗೆಯಾಗಿದೆ. ಈ ಬಿಕ್ಕಟ್ಟಿನ ಮಧ್ಯೆ, ಭಾರತವು ದ್ವೀಪ ರಾಷ್ಟ್ರಕ್ಕೆ ಹಲವಾರು ಬಾರಿ ಸಹಾಯ ಮಾಡಿದೆ. 1 ಶತಕೋಟಿ ಅಮೆರಿಕನ್ ಡಾಲರ್ ಸಾಲವನ್ನು ನೀಡುವುದರ ಜೊತೆಗೆ, ಭಾರತವು ಶ್ರೀಲಂಕಾ ಸರ್ಕಾರಕ್ಕೆ ಆಹಾರ, ಔಷಧಗಳು ಮತ್ತು ಇತರ ಅಗತ್ಯ ಸರಕುಗಳನ್ನು ಒದಗಿಸಿದೆ.
ವರದಿಯ ಪ್ರಕಾರ, ಭಾರತವು ಶ್ರೀಲಂಕಾಕ್ಕೆ ಇನ್ನೂ 2 ಬಿಲಿಯನ್ ಅಮೆರಿಕನ್ ಡಾಲರ್ ಆರ್ಥಿಕ ಸಹಾಯವನ್ನು ನೀಡಲು ಸಿದ್ಧವಾಗಿದೆ ಮತ್ತು ಆಹಾರ ಮತ್ತು ಇಂಧನವನ್ನು ಸಹ ನೀಡಲಿದೆ.  1948 ರಲ್ಲಿ ಸ್ವಾತಂತ್ರ್ಯದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ಬಳಲುತ್ತಿರುವ ಶ್ರೀಲಂಕಾ, ಭಾರತ ಮತ್ತು ಚೀನಾ ಸೇರಿದಂತೆ ಸ್ನೇಹಪರ ರಾಷ್ಟ್ರಗಳಿಗೆ ಸಾಲ, ಆಹಾರ ಮತ್ತು ಇಂಧನದ ಸಹಾಯವನ್ನು ಕೇಳುತ್ತಿದೆ.

Economic Crisis ಚೀನಾ ಸಂಗ ಬೆಳೆಸಿದ ರಾಷ್ಟ್ರಗಳಲ್ಲಿ ಆರ್ಥಿಕ ಬಿಕ್ಕಟ್ಟು, ಶ್ರೀಲಂಕಾ ಬಳಿಕ ಇದೀಗ ನೇಪಾಳ!

ಗುರುವಾರ ಸಿಂಹಳ ಮತ್ತು ತಮಿಳು ಹೊಸ ವರ್ಷಕ್ಕೆ ಮುಂಚಿತವಾಗಿ, ಭಾರತವು ಈಗಾಗಲೇ ಸಕ್ಕರೆ, ಅಕ್ಕಿ ಮತ್ತು ಗೋಧಿಯನ್ನು ಹೊತ್ತ ಹಡಗುಗಳನ್ನು ಶ್ರೀಲಂಕಾಗೆ ರವಾನಿಸಿದೆ. ಈ ನಡುವೆ, ಶ್ರೀಲಂಕಾ ಸೋಮವಾರದಿಂದ ಅಂತರರಾಷ್ಟ್ರೀಯ ಹಣಕಾಸು ನಿಧಿಯೊಂದಿಗೆ ಸಾಲದ ಮಾತುಕತೆಗಳನ್ನು ಔಪಚಾರಿಕವಾಗಿ ಪ್ರಾರಂಭಿಸಲು ಸಿದ್ಧವಾಗಿದೆ. ಅದರೊಂದಿಗೆ ವಿದೇಶದಲ್ಲಿರುವ ತನ್ನ ನಾಗರೀಕರಿಗೆ, ತವರಿಗೆ ಹಣ ಕಳಿಸಿ ಸಹಾಯ ಮಾಡುವಂತೆಯೂ ಕೇಳಿಕೊಂಡಿದೆ. ಶ್ರೀಲಂಕಾದ ಸೆಂಟ್ರಲ್ ಬ್ಯಾಂಕ್ ಗರ್ವನರ್ ಅವರಿಂದಲೇ ಅಧಿಕೃತವಾಗಿ ಈ ಹೇಳಿಕೆ ಬಿಡುಗಡೆಯಾಗಿದೆ. ಆದರೆ, ವಿದೇಶದಲ್ಲಿರುವ ಶ್ರೀಲಂಕಾದ ಪ್ರಜೆಗಳು ತಾವ ಕಳಿಸುವ ಹಣ ಬಡ ಜನರಿಗೆ ತಲುಪುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ.

Latest Videos
Follow Us:
Download App:
  • android
  • ios