Asianet Suvarna News Asianet Suvarna News

ತವರಿಗೆ ಹಣ ಕಳಿಸಿಕೊಡಿ, ವಿದೇಶದಲ್ಲಿರುವ ಲಂಕಾ ಪ್ರಜೆಗಳಿಗೆ ಶ್ರೀಲಂಕಾ ಸರ್ಕಾರದ ಮನವಿ!

ಎಲ್ಲಾ ಬಾಹ್ಯ ಸಾಲಗಳ ಮರುಪಾವತಿಯನ್ನು ಸ್ಥಗಿತಗೊಳಿಸುವುದಾಗಿ ಸರ್ಕಾರ ಘೋಷಿಸಿದ ನಂತರ ಈ ಮನವಿಯನ್ನು ಮಾಡಲಾಗಿದೆ
 

Bankrupt Sri Lanka urged its citizens overseas to send home money san
Author
Bengaluru, First Published Apr 13, 2022, 6:16 PM IST

ಕೊಲಂಬೊ (ಏ.13): ಸಂಪೂರ್ಣ ದಿವಾಳಿಯಾಗಿ (Bankrupt ) ತುತ್ತು ಅನ್ನಕ್ಕೂ ಪರದಾಟ ನಡೆಸುತ್ತಿರುವ ಶ್ರೀಲಂಕಾ (Sri Lanka), ಈಗಾಗಲೇ 51 ಬಿಲಿಯನ್ ಅಮೆರಿಕನ್ ಡಾಲರ್ ವಿದೇಶಿ ಸಾಲವನ್ನು (foreign debt) ಬಾಕಿ ಮಾಡುವುದಾಗಿ ಪ್ರಕಟಿಸಿದೆ. ಇದರ ನಡುವೆ ದೇಶದಲ್ಲಿ ತೀರಾ ಅಗತ್ಯವಿರುವ, ಬಡಜನರಿಗೆ ಆಹಾರ ಹಾಗೂ ಇಂಧನ ಪೂರೈಕೆ ಮಾಡಲು ಸರ್ಕಾರದ ಬಳಿ ಹಣವಿಲ್ಲ, ವಿದೇಶದಲ್ಲಿರುವ ಶ್ರೀಲಂಕಾದ ಪ್ರಜೆಗಳು ತವರಿಗೆ ಹಣ ಕಳುಹಿಸಿದರೆ ಈ ವ್ಯವಸ್ಥೆ ಮಾಡುವುದಾಗಿ ಶ್ರೀಲಂಕಾ ಘೋಷಿಸಿದೆ.

ದ್ವೀಪ ರಾಷ್ಟ್ರವು 1948 ರಲ್ಲಿ ಸ್ವಾತಂತ್ರ್ಯದ ನಂತರದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಹಿಡಿತದಲ್ಲಿದೆ, ಅಗತ್ಯ ವಸ್ತುಗಳ ತೀವ್ರ ಕೊರತೆ ಮತ್ತು ನಿಯಮಿತವಾಗಿ ವಿದ್ಯುತ್ ಕಡಿತಗಳು ವ್ಯಾಪಕ ಸಂಕಷ್ಟಕ್ಕೆ ಕಾರಣವಾಗಿವೆ. ಸರ್ಕಾರಿ ಅಧಿಕಾರಿಗಳು ಸಾರ್ವಜನಿಕರಿಂದ ತೀವ್ರ ಕೋಪವನ್ನು ಎದುರಿಸುತ್ತಿದ್ದಾರೆ ಮತ್ತು ಅಂತರರಾಷ್ಟ್ರೀಯ ಹಣಕಾಸು ನಿಧಿಯ ಬೇಲ್‌ಔಟ್‌ಗೆ ( International Monetary Fund bailout) ಮಾತುಕತೆಗೆ ಮುಂಚಿತವಾಗಿ ಸರ್ಕಾರದ ರಾಜೀನಾಮೆಗೆ ಒತ್ತಾಯಿಸುವ ಕಿಚ್ಚಿನ ಪ್ರತಿಭಟನೆಗಳನ್ನು ಎದುರಿಸುತ್ತಿದ್ದಾರೆ.

ಸೆಂಟ್ರಲ್ ಬ್ಯಾಂಕ್ ಗವರ್ನರ್ ನಂದಲಾಲ್ ವೀರಸಿಂಗ್ (Central bank governor Nandalal Weerasinghe) ಅವರು "ಅಗತ್ಯವಿರುವ ವಿದೇಶಿ ವಿನಿಮಯವನ್ನು (foreign exchange) ದೇಣಿಗೆ ನೀಡುವ ಮೂಲಕ ಈ ನಿರ್ಣಾಯಕ ಘಟ್ಟದಲ್ಲಿ ದೇಶವನ್ನು ಬೆಂಬಲಿಸಲು" ವಿದೇಶದಲ್ಲಿರುವ ಶ್ರೀಲಂಕಾದ ಪ್ರಜೆಗಳು ಮುಂದೆ ಬರಬೇಕಾದ ಅಗತ್ಯವಿದೆ ಎಂದು ಹೇಳಿದ್ದಾರೆ. ಎಲ್ಲಾ ಬಾಹ್ಯ ಸಾಲಗಳ ಮರುಪಾವತಿಯನ್ನು ಸ್ಥಗಿತಗೊಳಿಸುವುದಾಗಿ ಸರ್ಕಾರ ಘೋಷಿಸಿದ ಒಂದು ದಿನದ ನಂತರ ಅವರ ಮನವಿಯು ಬಂದಿದೆ. ಇದು ಪೆಟ್ರೋಲ್ (Petrol), ಔಷಧೀಯ (pharmaceuticals) ಮತ್ತು ಇತರ ಅಗತ್ಯಗಳ (necessities) ಅಲ್ಪ ಪೂರೈಕೆಯನ್ನು ಮರುಪೂರಣಗೊಳಿಸಲು ಸಹಾಯ ಮಾಡುತ್ತದೆ.

ಇಂತಹ ವಿದೇಶಿ ಕರೆನ್ಸಿ ವರ್ಗಾವಣೆಯನ್ನು ಆಹಾರ, ಇಂಧನ ಮತ್ತು ಔಷಧಗಳು ಸೇರಿದಂತೆ ಅಗತ್ಯ ವಸ್ತುಗಳ ಆಮದು ಮಾಡಿಕೊಳ್ಳಲು ಮಾತ್ರ ಬಳಸಿಕೊಳ್ಳಲಾಗುವುದು ಎಂದು ಬ್ಯಾಂಕ್ ಭರವಸೆ ನೀಡಿದೆ ಎಂದು ವೀರಸಿಂಗ್ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಮಂಗಳವಾರದ ಡೀಫಾಲ್ಟ್ ಪ್ರಕಟಣೆಯು ಸೋಮವಾರದಂದು ಬೀಳುವ ಬಡ್ಡಿ ಪಾವತಿಗಳಲ್ಲಿ ಸುಮಾರು 200 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಶ್ರೀಲಂಕಾ ಉಳಿಸುತ್ತದೆ, ಹಣವನ್ನು ಅಗತ್ಯ ಆಮದುಗಳಿಗೆ ಪಾವತಿಸಲು ತಿರುಗಿಸಲಾಗುವುದು ಎಂದು ಅವರು ಹೇಳಿದರು.

ಲಂಕೆಯ ಬೆಂಕಿಗೂ, ಪಾಕ್ ಪತನದ ಹಿಂದೆಯೂ ಚೀನೀ ಹಣದ ಕೈವಾಡ!

ವೀರಸಿಂಗ್ ಮನವಿಯನ್ನು ಇದುವರೆಗೆ ವಿದೇಶದಲ್ಲಿರುವ ಶ್ರೀಲಂಕಾದವರಿಂದ ಸಂದೇಹದಿಂದ ಸ್ವಾಗತಿಸಲಾಗಿದೆ. "ನಮಗೆ ಸಹಾಯ ಮಾಡೋಕೆ ಮನಸ್ಸಿಲ್ಲ ಅಂತೇನಿಲ್ಲ. ಆದರೆ ನಮ್ಮ ಹಣ ಸರ್ಕಾರವನ್ನು ಸರಿಯಾಗಿ ಬಳಸುತ್ತದೆ ಅನ್ನೋದನ್ನ ನಂಬಲು ಸಾಧ್ಯವಿಲ್ಲ' ಆಸ್ಟ್ರೇಲಿಯಾದಲ್ಲಿರುವ ಶ್ರೀಲಂಕಾದ ವೈದ್ಯರೊಬ್ಬರು ತಿಳಿಸಿದ್ದಾರೆ. ಕೆನಡಾದಲ್ಲಿರುವ ಶ್ರೀಲಂಕಾದ ಸಾಫ್ಟ್‌ವೇರ್ ಇಂಜಿನಿಯರ್ ಅವರು ಹಣವನ್ನು ಶ್ರೀಲಂಕಾ ಸರ್ಕಾರ ಅಗತ್ಯವಿರುವವರಿಗೆ ಖರ್ಚು ಮಾಡುತ್ತದೆ ಎಂಬ ವಿಶ್ವಾಸವಿಲ್ಲ ಎಂದು ಹೇಳಿದರು.

ಹಣ, ಡೀಸೆಲ್ ಇಲ್ಲದೇ ಲಂಕಾ ಚಿಂತಾಜನಕ, ಔಷಧಕ್ಕೂ ಕಾಸಿಲ್ಲ: ಮಾಸಾಂತ್ಯಕ್ಕೆ ಎಲ್ಲವೂ ಖಾಲಿ!

"ಇದು ಸುನಾಮಿ ನಿಧಿಯ (tsunami funds) ರೀತಿಯಲ್ಲಿಯೇ ಪೋಲಾಗಬಹುದು' ಎಂದು ಅವರು ಹೇಳಿದ್ದಾರೆ. 2004ರಲ್ಲಿ ಶ್ರೀಲಂಕಾದಲ್ಲಿ ಸಂಭವಿಸಿದ ಭೀಕರ ಸುನಾಮಿ ದುರಂತದಲ್ಲಿ 31 ಸಾವಿರ ಮಂದಿ ಸಾವಿಗೀಡಾಗಿದ್ದರು. ಈ ವೇಳೆ ಶ್ರೀಲಂಕಾಕ್ಕೆ ದೊಡ್ಡ ಮಟ್ಟದಲ್ಲಿ ಹಣಕಾಸು ನೆರವು ಬಂದಿತ್ತಾದರೂ ಅದರಲ್ಲಿ ಬಹುತೇಕ ಭ್ರಷ್ಟಾಚಾರ ಮಾಡಲಾಗಿತ್ತು. ಬದುಕುಳಿದವರಿಗೆ ಮೀಸಲಾದ ಹೆಚ್ಚಿನ ವಿದೇಶಿ ನಗದು ದೇಣಿಗೆಗಳು ರಾಜಕಾರಣಿಗಳ ಜೇಬಿಗೆ ಹೋಗಿತ್ತು. ಪ್ರಸ್ತುತ ಪ್ರಧಾನಿ ಮಹಿಂದಾ ರಾಜಪಕ್ಸೆ (Prime Minister Mahinda Rajapaksa) ಅವರು ತಮ್ಮ ವೈಯಕ್ತಿಕ ಖಾತೆಗೆ ಜಮಾ ಮಾಡಿದ ಸುನಾಮಿ ಸಹಾಯ ನಿಧಿಯನ್ನು ಹಿಂದಿರುಗಿಸಬೇಕು ಎಂದು ದೊಡ್ಡ ಮಟ್ಟದ ಪ್ರತಿಭಟನೆಗಳೂ ಆಗಿದ್ದವು.

Follow Us:
Download App:
  • android
  • ios