ಅಯೋಧ್ಯಾ ಶ್ರೀರಾಮನಿಗೆ ಬೆಳಗಲು ಭಕ್ತನಿಂದ ಸಿದ್ಧವಾಯ್ತು 108 ಅಡಿ ಉದ್ದದ ಅಗರಬತ್ತಿ
ಜ.22 ರಂದು ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಮನಿಗೆಂದು ದೇಶದ ವಿವಿಧೆಡೆಯಿಂದ ವಿವಿಧ ವಿಶೇಷ ಉಡುಗೊರೆಗಳು ಹರಿದು ಬರುತ್ತಿವೆ
ವಡೋದರಾ: ಜ.22 ರಂದು ಅಯೋಧ್ಯೆ ಶ್ರೀರಾಮಮಂದಿರದಲ್ಲಿ ಪ್ರಾಣ ಪ್ರತಿಷ್ಠಾಪನೆ ಸಮಾರಂಭ ನಡೆಯುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ರಾಮನಿಗೆಂದು ದೇಶದ ವಿವಿಧೆಡೆಯಿಂದ ವಿವಿಧ ವಿಶೇಷ ಉಡುಗೊರೆಗಳು ಹರಿದು ಬರುತ್ತಿವೆ. ಈ ನಡುವೆ ಗುಜರಾತ್‌ನ ವಡೋದರಾದಲ್ಲಿ ಬರೋಬ್ಬರಿ ದಾಖಲೆಯ 108 ಅಡಿ ಉದ್ದದ ಹಾಗೂ 3.5 ಅಡಿ ಅಗಲವಿರುವ ಅಗರಬತ್ತಿಯನ್ನು ಭಕ್ತರು ತಯಾರಿಸಿದ್ದಾರೆ. ಈ ಅಗರಬತ್ತಿಯು ಬರೋಬ್ಬರಿ 3,500 ಕೇಜಿ ತೂಕವಿದ್ದು ಶೀಘ್ರದಲ್ಲೇ ಇದನ್ನು ಅಯೋಧ್ಯೆಗೆ ಕಳುಹಿಸಲಾಗುತ್ತದೆ. ವಡೋದರದ ತರ್ಸಾಲಿ ಪ್ರದೇಶದ ನಿವಾಸಿ ವಿಹಾಭಾಯಿ ಭಾರವಾಡ್ ಅವರು ತಮ್ಮ ಮನೆಯ ಹೊರಗೆ ಕಳೆದ ಆರು ತಿಂಗಳಿಂದ ಏಕಾಂಗಿಯಾಗಿ ಈ ಅಗರಬತ್ತಿಯನ್ನು ತಯಾರಿಸುತ್ತಿದ್ದಾರೆ.
30ಕ್ಕೆ ಅಯೋಧ್ಯೆ ಏರ್‌ಪೋರ್ಟ್ ಉದ್ಘಾಟನೆ?
ಅಯೋಧ್ಯೆ: ಅಯೋಧ್ಯೆಯ ನೂತನ 'ಮರ್ಯಾದಾ ಪುರುಷೋತ್ತಮ ಶ್ರೀರಾಮ' ವಿಮಾನ ನಿಲ್ದಾಣವು ಡಿ.30ರಂದು ಪ್ರಧಾನಿ ನರೇಂದ್ರ ಮೋದಿ ಅವರ ಹಸ್ತದಿಂದ ಉದ್ಘಾಟನೆ ಆಗಲಿದೆ ತಿಳಿದು ಬಂದಿದೆ. ಎಂದು ಅಂದು ದೆಹಲಿಯಿಂದ ಅಯೋಧ್ಯೆಗೆ ಬರುವ ಏರ್ ಇಂಡಿಯಾ ವಿಮಾನವು ಮೊದಲ ಬಾರಿಗೆ ಅಯೋಧ್ಯೆ ನಿಲ್ದಾಣದಲ್ಲಿ ಭೂಸ್ಪರ್ಶ ಮಾಡಲಿದೆ. ಈ ಮೂಲಕ ನಿಲ್ದಾಣದ ಉದ್ಘಾಟನೆ ನಡೆಯಲಿದೆ. ಬಳಿಕ ಜ.16ರಿಂದ ತನ್ನ ದೈನಂದಿನ ಸೇವೆಯನ್ನು ವಿಮಾನ ಪ್ರಾರಂಭಿಸುತ್ತದೆ ಎಂದು ಏರ್ ಇಂಡಿಯಾ ಘೋಷಿಸಿದೆ.
ವಂದೇ ಭಾರತ್ ಕೂಡ:
ಇದೇ ವೇಳೆ ಡಿ.30ರಂದು ಪ್ರಧಾನಿ ಮೋದಿ, ಅಯೋಧ್ಯೆ ರೈಲು ನಿಲ್ದಾಣದಿಂದ ವಂದೇ ಭಾರತ ಎಕ್ಸ್‌ಪ್ರೆಸ್ ರೈಲಿಗೂ ಚಾಲನೆ ನೀಡಲಿದ್ದಾರೆ ಎನ್ನಲಾಗಿದೆ.
ಅಯೋಧ್ಯೆ ದೇಗುಲದ ಬಗ್ಗೆ BRS ಶಾಸಕಿ ಕವಿತಾ ಪೋಸ್ಟ್: ಸೋತ ಮೇಲೆ ಹಿಂದೂ ದೇವರ ನೆನಪಾಯ್ತ ಅಕ್ಕ ಎಂದ ನೆಟ್ಟಿಗರು
ರಾಮನನ್ನು ಕಂಡರೆ ಕಾಂಗ್ರೆಸ್‌ಗೆ ದ್ವೇಷ, ಸ್ವಪಕ್ಷದ ನಾಯಕನಿಂದಲೇ ಆಕ್ರೋಶದ ಮಾತು!