ಅಯೋಧ್ಯೆ ದೇಗುಲದ ಬಗ್ಗೆ BRS ಶಾಸಕಿ ಕವಿತಾ ಪೋಸ್ಟ್‌: ಸೋತ ಮೇಲೆ ಹಿಂದೂ ದೇವರ ನೆನಪಾಯ್ತ ಅಕ್ಕ ಎಂದ ನೆಟ್ಟಿಗರು

ತೆಲಂಗಾಣದ ನಿರ್ಗಮಿತ ಸಿಎಂ ಬಿಆರ್‌ಎಸ್ ಪಕ್ಷದ ನಾಯಕ ಕೆಸಿಆರ್ ಪುತ್ರಿ, ಶಾಸಕಿ ಕಲ್ವಕುಂಟ್ಲ ಕವಿತಾ ಅವರು ಕೂಡ ಈಗ ಶ್ರೀರಾಮನ ಭವ್ಯ ಮಂದಿರದ ಉದ್ಘಾಟನೆಗೆ ದೇಗುಲ ಸರ್ವಸನ್ನದ್ಧಗೊಳ್ಳುತ್ತಿರುವ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ.  ಆದರೆ ಅದಕ್ಕೆ ಈಗ ಟೀಕೆಗಳು ವ್ಯಕ್ತವಾಗಿವೆ.

BRS MLA Kavitha posts video of Ayodhya Shri Ram Temple Netizens told After Trailing She remembered Hindu God akb

ಹೈದರಾಬಾದ್: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಗಣನೆ ಆರಂಭವಾಗಿದೆ. ಬಹುತೇಕ ದೇಗುಲ ನಿರ್ಮಾಣ ಕಾರ್ಯ ಪೂರ್ಣಗೊಂಡಿದ್ದು, ಕೊನೆ ಹಂತದ ಮುಕ್ತಾಯ (Finishing works) ಕಾರ್ಯಗಳು ಭರದಿಂದ ಸಾಗಿವೆ. ಬಹುಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಹಿಂದೂಗಳ ಆರಾಧ್ಯ ದೈವ ಶ್ರೀರಾಮನ ಮಂದಿರದ ವೀಡಿಯೋ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ತೆಲಂಗಾಣದ ನಿರ್ಗಮಿತ ಸಿಎಂ ಬಿಆರ್‌ಎಸ್ ಪಕ್ಷದ ನಾಯಕ ಕೆಸಿಆರ್ ಪುತ್ರಿ, ಶಾಸಕಿ ಕಲ್ವಕುಂಟ್ಲ ಕವಿತಾ ಅವರು ಕೂಡ ಈಗ ಶ್ರೀರಾಮನ ಭವ್ಯ ಮಂದಿರದ ಉದ್ಘಾಟನೆಗೆ ದೇಗುಲ ಸರ್ವಸನ್ನದ್ಧಗೊಳ್ಳುತ್ತಿರುವ ವೀಡಿಯೋವೊಂದನ್ನು ಪೋಸ್ಟ್ ಮಾಡಿದ್ದಾರೆ. 

ವೀಡಿಯೋ ಪೋಸ್ಟ್ ಮಾಡಿದ ಅವರು ಇದೊಂದು ಒಳ್ಳೆಯ ಬೆಳವಣಿಗೆ, ಅಯೋಧ್ಯೆಯ ಶ್ರೀ ಸೀತಾರಾಮಚಂದ್ರ ಸ್ವಾಮಿ, ಈ ಮೂಲಕ ಬಹುಕೋಟಿ ಹಿಂದೂಗಳ ಬಹುದಿನದ ಕನಸು ನನಸಾಗುವ ಸಂದರ್ಭ ಬಂದಿದೆ. ಈ ಶುಭ ಸಂದರ್ಭವನ್ನು ದೇಶದ ಜನರು ಸೇರಿದಂತೆ ತೆಲಂಗಾಣದ ಎಲ್ಲಾ ಜನರು ಖುಷಿಯಿಂದ ಸ್ವಾಗತಿಸುತ್ತಾರೆ ಎಂದು ಅವರು ಬರೆದುಕೊಂಡಿದ್ದು, ಅಯೋಧ್ಯೆಯ ಶ್ರೀರಾಮ ದೇಗುಲ (Ram Temple) ನಿರ್ಮಾಣ ಪೂರ್ಣಗೊಳ್ಳುತ್ತಾ ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. 

ರೇವಂತ್‌ ರೆಡ್ಡಿ ಸಂಪುಟದಲ್ಲಿ ಒಬ್ಬ ಮುಸ್ಲಿಂ ಸಚಿವನೂ ಇಲ್ಲ: ಬಂದೂಕು ಹಿಡಿದಿದ್ದ ನಕ್ಸಲ್‌ ಸೀತಕ್ಕ ಈಗ ತೆಲಂಗಾಣ ಸಚಿವೆ

ಇವರು ಶೇರ್ ಮಾಡಿರುವ ವೀಡಿಯೋದಲ್ಲಿ ಅಯೋಧ್ಯೆಯ ಭವ್ಯ ದೇಗುಲದ ನಿರ್ಮಾಣ ಕಾರ್ಯದ ಕೆಲ ತುಣುಕುಗಳು ಹಾಗೂ ಉದ್ಘಾಟನೆಗೆ ದೇಗುಲ ವೈಭವೋಪೇತವಾಗಿ ಸಿದ್ಧವಾಗುತ್ತಿರುವುದು ಅನೇಕ ಕೆಲಸಗಾರರು ದೇಗುಲದ ಆವರಣದಲ್ಲಿ ಸಿದ್ಧತಾ ಕಾರ್ಯದಲ್ಲಿ ತೊಡಗಿರುವುದನ್ನು ಕಾಣಬಹುದಾಗಿದೆ.  ಆದರೆ ಇವರ ಈ ಪೋಸ್ಟ್‌ಗೆ ಅನೇಕ ನೆಟ್ಟಿಗರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಏಕೆಂದರೆ ಅಧಿಕಾರದಲ್ಲಿ ಇದ್ದ ಸಂದರ್ಭದಲ್ಲೆಲ್ಲಾ ಕೆಸಿಆರ್ (KCR) ಮುಸ್ಲಿಂ ಓಲೈಕೆಯಲ್ಲಿ ತೊಡಗಿದವರು. 

ಈ ಓಲೈಕೆಯ ನಂತರವೂ ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ ತೆಲಂಗಾಣದಲ್ಲಿ ಕೆಸಿಆರ್ ಪಕ್ಷ ಹೀನಾಯವಾಗಿ ಸೋಲು ಕಂಡಿದೆ.  (ಚುನಾವಣೆಯಲ್ಲಿ ಸೋಲಿನ ನಂತರ ಕೆಸಿಆರ್ ಆರೋಗ್ಯವೂ ಹದಗೆಟ್ಟಿದ್ದು, ಇತ್ತೀಚೆಗೆ ಬಾತ್‌ರೂಮ್‌ನಲ್ಲಿ ಬಿದ್ದು, ಸೊಂಟ ಮುರಿದುಕೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ) ಇದೇ ಕಾರಣಕ್ಕೆ ಈಗ ನೆಟ್ಟಿಗರು  ಅಯೋಧ್ಯೆಯ ಶ್ರೀರಾಮನ ದೇಗುಲ ನಿರ್ಮಾಣದ ವೀಡಿಯೋ ಪೋಸ್ಟ್‌ ಮಾಡಿ ಹೀಗೆ ಬರೆದುಕೊಂಡ ಶಾಸಕಿ ಕವಿತಾ ರಾವ್‌ಗೆ ಕ್ಲಾಸ್‌ ತೆಗೆದುಕೊಳ್ಳುತ್ತಿದ್ದಾರೆ. ಸೋತ ಬಳಿಕ ನಿಮಗೆ ಹಿಂದೂಗಳ ನೆನಪಾಯ್ತೆ ಎಂದು ಪ್ರಶ್ನೆ ಮಾಡುತ್ತಿದ್ದಾರೆ.

ತೆಲಂಗಾಣದಲ್ಲಿ ಹಾಲಿ ಸಿಎಂ ಹಾಗೂ ಕಾಂಗ್ರೆಸ್ ಸಿಎಂ ಅಭ್ಯರ್ಥಿಯನ್ನೇ ಸೋಲಿಸಿದ ಬಿಜೆಪಿಗ

ಮತ್ತೆ ಕೆಲವರು ನಿಮ್ಮ ಈ ಪೋಸ್ಟನ್ನು ಹಿಂಪಡೆಯಿರಿ, ಇದು ಪ್ರಧಾನಿಯವರ ಮೇಲುಸ್ತುವಾರಿ ಮುತುವರ್ಜಿಯಿಂದ ನಡೆಯುತ್ತಿರುವ ಕಾರ್ಯ, ಇದಕ್ಕೆ ನಿಮ್ಮ ಕೊಡುಗೆ ಶೂನ್ಯ ಎಂದು ಕಿಡಿಕಾರಿದ್ದಾರೆ.  ಆದರ ಮುಸ್ಲಿಂ ವ್ಯಕ್ತಿಯೊಬ್ಬರೂ ಕೂಡ ಈ ಟ್ವಿಟ್‌ಗೆ ಕಾಮೆಂಟ್ ಮಾಡಿದ್ದು, ಇವರ ಒಳಗೆ ಅಡಗಿದ್ದ ಹಿಂದುತ್ವ ಚುನಾವಣೆಯಲ್ಲಿ ಸೋಲಿನ ಬಳಿಕ ಹೊರಬರುತ್ತಿದೆ ಎಂದು ಕಾಮೆಂಟ್  ಮಾಡಿದ್ದಾರೆ. ನೀವು ಮಾಡಿದ ತಪ್ಪುಗಳೆಲ್ಲವನ್ನೂ ಆ ದೇವರು ಕ್ಷಮಿಸಿ ನಿಮಗೆ ಬುದ್ದಿ ಕೊಡಲಿ ಎಂದು ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ. 

ಇತ್ತ ಅಯೋಧ್ಯೆಯ ರಾಮಮಂದಿರ ಮುಂದಿನ ವರ್ಷ ಅಂದರೆ ಮುಂದಿನ ತಿಂಗಳು ಜನವರಿ 22ರಂದು ಉದ್ಘಾಟನೆಗೊಳ್ಳಲಿದ್ದು, ದೇಶದ ಕೋಟ್ಯಾಂತರ ಭಕ್ತರಿಗೆ ಶ್ರೀರಾಮನ ದರ್ಶನಕ್ಕೆ ತೆರೆದುಕೊಳ್ಳಲಿದೆ. ಜನವರಿ 22 ರಂದು ಮಧ್ಯಾಹ್ನ 12.45ರ ಶುಭ ಮುಹೂರ್ತದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮನ ಮಂದಿರ ಗರ್ಭಗುಡಿಯಲ್ಲಿ ಶ್ರೀರಾಮನ ಮೂರ್ತಿಯ ಪ್ರತಿಷ್ಠಾಪನೆಯಾಗಲಿದೆ.  4 ಸಾವಿರ ಸಂತರಿಗೆ ಈ ದೇಗುಲ ಉದ್ಘಾಟನಾ ಕಾರ್ಯಕ್ಕೆ ಆಹ್ವಾನಿಸಲಾಗಿದೆ. ಅಲ್ಲದೇ ರಾಮಜನ್ಮಭೂಮಿ ಹೋರಾಟದಲ್ಲಿ ಭಾಗಿಯಾಗಿ ಪ್ರಾಣ ಕಳೆದುಕೊಂಡ ಕೆಲ ಕರಸೇವಕರ ಕುಟುಂಬಗಳಿಗೂ ವಿಶೇಷ ಆಹ್ವಾನ ನೀಡಲಾಗಿದೆ. 

 

Latest Videos
Follow Us:
Download App:
  • android
  • ios