Asianet Suvarna News Asianet Suvarna News

ರಾಮನನ್ನು ಕಂಡರೆ ಕಾಂಗ್ರೆಸ್‌ಗೆ ದ್ವೇಷ, ಸ್ವಪಕ್ಷದ ನಾಯಕನಿಂದಲೇ ಆಕ್ರೋಶದ ಮಾತು!

ರಾಮನ ಬಗ್ಗೆ ಕಾಂಗ್ರೆಸ್‌ಗೆ ಅಲರ್ಜಿ ಇದೆ ಮತ್ತು ಶ್ರೀರಾಮ ಜನ್ಮಭೂಮಿಗೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳೋದನ್ನೇ ನೋಡುತ್ತಿರುತ್ತದೆ ಎಂದು ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

Congress leader Acharya Pramod Krishnam says party hates Ram san
Author
First Published Nov 15, 2023, 8:40 PM IST

ಮುಂಬೈ (ನ.15):  ಕಾಂಗ್ರೆಸ್ ನಾಯಕ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಕಾಂಗ್ರೆಸ್ ನಾಯಕತ್ವದ ವಿರುದ್ಧ ವಾಗ್ದಾಳಿ ನಡೆದಿದ್ದಾರೆ. ನಮ್ಮ ಪಕ್ಷದ ಸದಸ್ಯರು ರಾಮನನ್ನು ದ್ವೇಷಿಸುತ್ತಾರೆ ಎಂದು ಹೇಳಿಕೆ ನೀಡಿದ್ದಾರೆ. 2014 ಮತ್ತು 2019 ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಆಚಾರ್ಯ ಪ್ರಮೋದ್ ಕೃಷ್ಣಂ ಅವರು ಮಧ್ಯಪ್ರದೇಶದಲ್ಲಿ ಪಕ್ಷದ ಪ್ರಚಾರಕ್ಕೆ ತಮ್ಮನ್ನು ಸೇರಿಸಿಕೊಳ್ಳದೇ ಇರಲು ಹಿಂದೂ ವಿರೋಧಿ ಹೇಳಿಕೆಯೂ ಒಂದು ಕಾರಣ ಎಂದು ತಿಳಿಸಿದ್ದಾರೆ. ಭಗವಾನ್ ರಾಮನನ್ನು ದ್ವೇಷಿಸುವವನು ಹಿಂದೂ ಆಗಲು ಸಾಧ್ಯವಿಲ್ಲ. ರಾಮ ಮಂದಿರ ನಿರ್ಮಾಣವನ್ನು ತಡೆಯುವ ಪ್ರಯತ್ನಗಳ ಬಗ್ಗೆ ಇಡೀ ಜಗತ್ತಿಗೆ ತಿಳಿದಿದೆ, ಯಾರು ರಾಮನನ್ನು ದ್ವೇಷಿಸುತ್ತಾರೆ ಮತ್ತು ಯಾರು ದೇವರಿಗೆ ನಿಷ್ಠರು ಎನ್ನುವುದು ಈಗೇನೂ ನಿಗೂಢವಾಗಿಲ್ಲ. ಕಾಂಗ್ರೆಸ್ ಸದಸ್ಯನಾಗಿರುವುದು ಸತ್ಯವನ್ನು ಹೇಳುವುದಿಲ್ಲ ಎಂದಲ್ಲ.ರಾಮ ಮತ್ತು ರಾಮಮಂದಿರ ಎರಡನ್ನೂ ದ್ವೇಷಿಸುವ ಕೆಲವು ಕಾಂಗ್ರೆಸ್ ನಾಯಕರು ಇದ್ದಾರೆ ಎನ್ನುವುದು ನನಗೆ ಗೊತ್ತಿದೆ ಎಂದು ತಿಳಿಸಿದ್ದಾರೆ.

ಈ ನಡುವೆ, ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್ ಪಕ್ಷವನ್ನು ಕಟುವಾಗಿ ಟೀಕಿಸಿದರು ಮತ್ತು "ಕಾಂಗ್ರೆಸ್ ಹಿಂದೂಗಳ ಬೆಂಬಲವನ್ನು ಬಯಸುವುದಿಲ್ಲ" ಎನ್ನುವ ಕಾಂಗ್ರೆಸ್‌ ಪಕ್ಷದ ನಾಯಕನ ಮಾತನ್ನು ಅವರು ಉಲ್ಲೇಖಿಸಿದ್ದಾರೆ.

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಕುಟುಂಬದ ನಿಷ್ಠಾವಂತ, ಆಚಾರ್ಯ ಪ್ರಮೋದ್ ಜೀ ಅವರು ನಾನು ಹೇಳುತ್ತಿರುವುದನ್ನು ದೃಢಪಡಿಸಿದ್ದಾರೆ. ನಿರ್ದಿಷ್ಟ ಮತ ಬ್ಯಾಂಕ್‌ಗೆ ಹೆದರಿ, ಕಾಂಗ್ರೆಸ್‌ಗೆ ಪ್ರಭು ಶ್ರೀರಾಮ್‌ನ ವಿಚಾರದಲ್ಲಿ "ಅಲರ್ಜಿ" ಎನ್ನುವುದಕ್ಕೆ ಇದು ಪುರಾವೆ. ಅವರ ನಾಯಕರು, ಹನುಮಂತನ ಭಕ್ತರು ಎಲ್ಲಾ ದೇವಸ್ಥಾನಗಳಿಗೆ ಭೇಟಿ ನೀಡೋದನ್ನು ನೀವು ಕಾಣುತ್ತೀರಿ. ಆದರೆ, ಶ್ರೀರಾಮ ಜನ್ಮಭೂಮಿಗೆ ಮಾತ್ರ ಅವರು ಭೇಟಿ ನೀಡೋದಿಲ್ಲ. ಅವರಿಗೆ ನನ್ನ ಚಾಲೆಂಜ್‌ ಇಷ್ಟೇ, ಯಾವಾಗ ನೀವು ರಾಮ ಲಲ್ಲಾ ವೃಜ್‌ಮಾನ್‌ಗೆ ಭೇಟಿ ನೀಡುತ್ತೀರಿ? ಎಂದು ಅಸ್ಸಾಂ ಮುಖ್ಯಮಂತ್ರಿ ಪ್ರಶ್ನೆ ಮಾಡಿದ್ದಾರೆ.

"ಆಚಾರ್ಯ ಜೀ ಅವರ ಬಗ್ಗೆ ನನ್ನ ಸಹಾನುಭೂತಿ ಇದೆ. ಪ್ರಭು ಶ್ರೀರಾಮನ ಪರವಾಗಿ ಮಾತನಾಡಿದ್ದಕ್ಕಾಗಿ ಕಾಂಗ್ರೆಸ್ಸಿಗರು ಅವರನ್ನು ನಿಂದಿಸುತ್ತಾರೆ" ಎಂದು ಅವರು ಹೇಳಿದರು. ಆಚಾರ್ಯ ಕೃಷ್ಣಂ ಅವರು ಪ್ರತಿಪಕ್ಷದ ಇಂಡಿ ಮೈತ್ರಿಯ ಬಗ್ಗೆ ಗಂಭೀರವಾದ ಪ್ರಶ್ನೆಗಳನ್ನು ಎತ್ತಿದ್ದರು ಮತ್ತು "ಇಂಡಿಯಾ ಬ್ಲಾಕ್ ಅನ್ನು ಬಿಟ್ಟುಬಿಡುವಂಥದ್ದೇನೂ ಇಲ್ಲ ಎಂದು ನಾನು ಭಾವಿಸುತ್ತೇನೆ" ಎಂದು ಹೇಳಿದರು.

ಅಯ್ಯರ್ ಸೆಂಚುರಿ ಸೆಲೆಬ್ರೇಷನ್ ಇಮಿಟೇಟ್ ಮಾಡಿದ ರೋಹಿತ್, ವಿಡಿಯೋ ವೈರಲ್!

"ಇಂಡಿಯಾ ಬ್ಲಾಕ್‌ನ ಮುಖ್ಯ ಗುರಿ ಪ್ರಧಾನಿ ಮೋದಿಯನ್ನು ಸೋಲಿಸಿ ಬಿಜೆಪಿ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸುವುದಾಗಿತ್ತು. ಆದರೆ ದುಃಖದ ವಿಷಯವೆಂದರೆ ಪ್ರತಿಪಕ್ಷಗಳು ಮೋದಿಯನ್ನು ತುಂಬಾ ದ್ವೇಷ ಮಾಡುತ್ತಲೇ ಭಾರತವನ್ನು ದ್ವೇಷಿಸಲು ಪ್ರಾರಂಭಿಸಿದ್ದಾರೆ ಎಂಬುದನ್ನು ಅವರು ಮರೆತುಬಿಟ್ಟಿದ್ದಾರೆ. ಪ್ರಧಾನಿ ಮೋದಿ ಹೊಸ ಸಂಸತ್ತನ್ನು ಉದ್ಘಾಟಿಸಿದರೆ ಆಗ ಅವರು ಅದನ್ನು ವಿರೋಧಿಸುತ್ತಾರೆ, ರೈಲಿಗೆ ‘ವಂದೇ ಭಾರತ್’ ಎಂದು ಹೆಸರಿಟ್ಟರೆ ಅವರು ಅದನ್ನು ವಿರೋಧಿಸುತ್ತಾರೆ, ಯಾರೂ ಪ್ರಧಾನಿಯನ್ನು ಟೀಕಿಸುವುದನ್ನು ತಡೆಯುವುದಿಲ್ಲ, ಆದರೆ ಅವರನ್ನು ದ್ವೇಷಿಸುವುದು ಸರಿಯಲ್ಲ. ವಿರೋಧ ಪಕ್ಷವು ಎಲ್ಲವನ್ನೂ ಮರೆತು ಗೊಂದಲಕ್ಕೊಳಗಾಗಿದೆ” ಆಚಾರ್ಯ ಕೃಷ್ಣಂ ಹೇಳಿದರು.

ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್‌ಗೆ ವಡಾ ಪಾವ್ ಎಂದ ಬೋಗ್ಲೆ, ಸಿಡಿದೆದ್ದ ಫ್ಯಾನ್ಸ್!

Latest Videos
Follow Us:
Download App:
  • android
  • ios