Asianet Suvarna News Asianet Suvarna News

ಒಂದು ದೇಶ ಒಂದು ಚುನಾವಣೆ: ಪ್ರತಿ 15 ವರ್ಷಕ್ಕೊಮ್ಮೆ ಇವಿಎಂ ಕೊಳ್ಳಲು ಬೇಕು ₹10000 ಕೋಟಿ

ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ಬಂದು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಮತದಾನ ನಡೆಸುವುದಾದರೆ ಪ್ರತಿ 15 ವರ್ಷಕ್ಕೊಮ್ಮೆ ಹೊಸ ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ)ಗಳನ್ನು ಖರೀದಿಸಲು 10,000 ಕೋಟಿ ರು. ಬೇಕಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ.

10000 crore is needed to buy EVMs every 15 years for one country one election system Information from Election Commission to Central Govt akb
Author
First Published Jan 21, 2024, 8:26 AM IST

ನವದೆಹಲಿ: ಒಂದು ದೇಶ ಒಂದು ಚುನಾವಣೆ ವ್ಯವಸ್ಥೆ ಜಾರಿಗೆ ಬಂದು ಲೋಕಸಭೆ ಮತ್ತು ವಿಧಾನಸಭೆಗಳಿಗೆ ಏಕಕಾಲಕ್ಕೆ ಮತದಾನ ನಡೆಸುವುದಾದರೆ ಪ್ರತಿ 15 ವರ್ಷಕ್ಕೊಮ್ಮೆ ಹೊಸ ಎಲೆಕ್ಟ್ರಾನಿಕ್‌ ಮತಯಂತ್ರ (ಇವಿಎಂ)ಗಳನ್ನು ಖರೀದಿಸಲು 10,000 ಕೋಟಿ ರು. ಬೇಕಾಗುತ್ತದೆ ಎಂದು ಕೇಂದ್ರ ಚುನಾವಣಾ ಆಯೋಗ ಹೇಳಿದೆ. ಈ ಕುರಿತು ಸರ್ಕಾರಕ್ಕೆ ಮಾಹಿತಿ ನೀಡಿರುವ ಆಯೋಗ, ಇವಿಎಂಗಳು 15 ವರ್ಷ ಬಾಳಿಕೆ ಬರುತ್ತವೆ. ಏಕ ಚುನಾವಣೆ ನಡೆಸುವುದಾದರೆ ಒಂದು ಸೆಟ್‌ ಮತಯಂತ್ರಗಳನ್ನು ಮೂರು ಆವೃತ್ತಿಯಲ್ಲಿ ಚುನಾವಣೆಗೆ ಬಳಸಬಹುದು. ಬಳಿಕ ಹೊಸ ಯಂತ್ರಗಳನ್ನು ಖರೀದಿಸಬೇಕಾಗುತ್ತದೆ ಎಂದು ತಿಳಿಸಿದೆ.

ಈ ಬಾರಿಯ ಲೋಕಸಭೆ ಚುನಾವಣೆಗೆ ದೇಶದಲ್ಲಿ 11.8 ಲಕ್ಷ ಮತಗಟ್ಟೆ ಸ್ಥಾಪಿಸಬೇಕಾಗುತ್ತದೆ. ಲೋಕಸಭೆಯ ಜೊತೆಗೆ ವಿಧಾನಸಭೆಗೂ ಚುನಾವಣೆ ನಡೆಸುವುದಾದರೆ ಪ್ರತಿ ಮತಗಟ್ಟೆಯಲ್ಲಿ ಎರಡು ಸೆಟ್‌ ಮತಯಂತ್ರಗಳನ್ನು ಅಳವಡಿಸಬೇಕಾಗುತ್ತದೆ. ಕೆಲ ಕಂಟ್ರೋಲ್‌ ಯುನಿಟ್‌, ಬ್ಯಾಲೆಟ್‌ ಯುನಿಟ್‌ ಹಾಗೂ ವಿವಿಪ್ಯಾಟ್‌ ಯಂತ್ರಗಳನ್ನು ಹೆಚ್ಚುವರಿಯಾಗಿ ಮೀಸಲಿಡಬೇಕಾಗುತ್ತದೆ. ಇದನ್ನು ಪರಿಗಣಿಸಿದರೆ ಏಕಕಾಲಕ್ಕೆ ಚುನಾವಣೆ ನಡೆಸಲು 46,75,100 ಬ್ಯಾಲೆಟ್‌ ಯುನಿಟ್‌, 33,63,300 ಕಂಟ್ರೋಲ್‌ ಯುನಿಟ್‌ ಹಾಗೂ 36,62,600 ವಿವಿಪ್ಯಾಟ್‌ಗಳು ಬೇಕಾಗುತ್ತವೆ ಎಂದು ಆಯೋಗ ಮಾಹಿತಿ ನೀಡಿದೆ.

ಇದನ್ನು ಪರಿಚಯಿಸಿದ್ದೇ ಕಾಂಗ್ರೆಸ್‌: ವಿವಿಪ್ಯಾಟ್‌ ಬಗ್ಗೆ ಕಾಂಗ್ರೆಸ್‌ ಶಂಕೆಗೆ ಚುನಾವಣಾ ಆಯೋಗ ಪತ್ರ

ಸದ್ಯ ಒಂದು ಬ್ಯಾಲೆಟ್‌ ಯುನಿಟ್‌ಗೆ 7900 ರು., ಕಂಟ್ರೋಲ್‌ ಯುನಿಟ್‌ಗೆ 9800 ರು. ಹಾಗೂ ವಿವಿಪ್ಯಾಟ್‌ಗೆ 16,000 ರು. ದರವಿದೆ.

ಒಂದು ದೇಶ, ಒಂದು ಚುನಾವಣೆಗೆ ಬೇಕು 30 ಲಕ್ಷ ಇವಿಎಂ..!

Follow Us:
Download App:
  • android
  • ios