ಒಂದು ದೇಶ, ಒಂದು ಚುನಾವಣೆಗೆ ಬೇಕು 30 ಲಕ್ಷ ಇವಿಎಂ..!
ಬಹುಚರ್ಚಿತ ‘ಒಂದು ದೇಶ ಒಂದು ಚುನಾವಣೆ’ ಯೋಜನೆ ಕಾರ್ಯರೂಪಕ್ಕೆ ತರಬೇಕಾದರೆ, 30 ಲಕ್ಷ ಇವಿಎಂಗಳು ಬೇಕು ಮತ್ತು ಅದಕ್ಕೆ ಅಗತ್ಯ ಸಿದ್ಧತೆ ನಡೆಸಲು ಕನಿಷ್ಠ ಒಂದೂವರೆ ವರ್ಷ ಅವಧಿ ಬೇಕು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ನವದೆಹಲಿ: ಬಹುಚರ್ಚಿತ ‘ಒಂದು ದೇಶ ಒಂದು ಚುನಾವಣೆ’ ಯೋಜನೆಯನ್ನು ಕಾರ್ಯರೂಪಕ್ಕೆ ತರಬೇಕಾದರೆ, 30 ಲಕ್ಷ ಇವಿಎಂಗಳು ಬೇಕು ಮತ್ತು ಅದಕ್ಕೆ ಅಗತ್ಯ ಸಿದ್ಧತೆ ನಡೆಸಲು ಕನಿಷ್ಠ ಒಂದೂವರೆ ವರ್ಷ ಅವಧಿ ಬೇಕು ಎಂದು ಚುನಾವಣಾ ಆಯೋಗದ ಮೂಲಗಳು ತಿಳಿಸಿವೆ.
ಒಂದು ಮತಯಂತ್ರವು 1 ಕಂಟ್ರೋಲ್ ಯೂನಿಟ್, ಒಂದು ಬ್ಯಾಲೆಟ್ ಯೂನಿಟ್ (Ballet Unit) ಮತ್ತು ಒಂದು ಮತ ತಾಳೆ ಯಂತ್ರ ಒಳಗೊಂಡಿರುತ್ತದೆ. ಈ ಲೆಕ್ಕಾಚಾರದಲ್ಲಿ ಲೋಕಸಭೆ ಮತ್ತು ವಿಧಾನಸಭೆಗೆ ಏಕಕಾಲಕ್ಕೆ ಚುನಾವಣೆ ನಡೆಸಲು ಚುನಾವಣಾ ಆಯೋಗಕ್ಕೆ ಸುಮಾರು 30 ಲಕ್ಷ ಕಂಟ್ರೋಲ್ ಯೂನಿಟ್, 43 ಲಕ್ಷ ಬ್ಯಾಲೆಟ್ ಯೂನಿಟ್ ಮತ್ತು 32 ಲಕ್ಷ ವಿವಿಪ್ಯಾಟ್‌ಗಳು ಬೇಕಾಗುತ್ತವೆ.
ಡಿಬಿಟಿಗಾಗಿ ಸರ್ಕಾರಿ ಶಾಲೆಗೆ ಸೇರಿ ಖಾಸಗಿಯಲ್ಲಿ ಓದುತ್ತಿರುವ ಅನುಮಾನ: 20 ಲಕ್ಷ ವಿದ್ಯಾರ್ಥಿಗಳ ವಜಾ
ಒಂದೇ ಬಾರಿ ಲೋಕಸಭಾ (Loksabha) ಮತ್ತು ವಿಧಾನಸಭಾ ಚುನಾವಣೆ (Assembly Election) ನಡೆದರೆ ಮತದಾದರು ಒಮ್ಮೆಯೇ ಎರಡು ಮತಯಂತ್ರಗಳಲ್ಲಿ ಮತ ಚಲಾಯಿಸಬೇಕಾಗುತ್ತದೆ. ಹೀಗಾಗಿ ಒಮ್ಮೆಲೇ ದುಪ್ಪಟ್ಟು ಮತಯಂತ್ರಗಳ ಅವಶ್ಯವಿದ್ದು, ಸುಮಾರು 35 ಲಕ್ಷ ಮತದಾನದ ಘಟಕಗಳ (ತುರ್ತು ಸಂದರ್ಭದಲ್ಲಿ ಇರಿಸಲಾದ ಹೆಚ್ಚುವರಿ ಘಟಕ ಸೇರಿ) ಕೊರತೆಯಿದೆ ಎನ್ನಲಾಗಿದೆ. ಇವುಗಳ ಅಂದಾಜು ತಯಾರು ವೆಚ್ಚ ಸುಮಾರು 15000 ಕೋಟಿ ರು. ಆಗಬಹುದು ಎನ್ನಲಾಗಿದೆ.
ದೇಶದಲ್ಲಿ ಒಂದೇ ಚುನಾವಣೆ ಜಾರಿಗೆ ವರದಿ ಸಲ್ಲಿಸುವಂತೆ ಸರ್ಕಾರವು ಸಮಿತಿ ರಚಿಸಿದ್ದು, ಈಗಾಗಲೇ ಸಮಿತಿಯು 2 ಸಭೆ ನಡೆಸಿದೆ. ಅಲ್ಲದೇ ಇದಕ್ಕಾಗಿ ಕಾನೂನು ಆಯೋಗ ಸೇರಿದಂತೆ ರಾಜಕೀಯ ಪಕ್ಷಗಳ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಿದೆ. ಇದೇ ವೇಳೆ ಏಕಕಾಲದಲ್ಲಿ ಚುನಾವಣೆ ನಡೆದರೆ ಚುನಾವಣಾ ಆಯೋಗದ (Election Commission) ತಯಾರಿ ಹೇಗಿರಬೇಕು ಮತ್ತು ಅದರ ಅವಶ್ಯಕತೆಗಳೇನು ಎಂಬ ಕುರಿತು ಮಾಹಿತಿ ಹೊರಬಿದ್ದಿದೆ.