ಇದನ್ನು ಪರಿಚಯಿಸಿದ್ದೇ ಕಾಂಗ್ರೆಸ್: ವಿವಿಪ್ಯಾಟ್ ಬಗ್ಗೆ ಕಾಂಗ್ರೆಸ್ ಶಂಕೆಗೆ ಚುನಾವಣಾ ಆಯೋಗ ಪತ್ರ
ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ದಲ್ಲಿ ಮತದಾನ ಮಾಡಿದ ಬಳಿಕ ಯಾರಿಗೆ ಮತ ಚಲಾವಣೆಯಾಗಿದೆ ಎಂಬುದರ ಚೀಟಿಯನ್ನು ತೋರಿಸುವ ವಿವಿಪ್ಯಾಟ್ ಯಂತ್ರದ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ವ್ಯಕ್ತಪಡಿಸಿದ್ದ ಅನುಮಾನಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ನವದೆಹಲಿ: ಎಲೆಕ್ಟ್ರಾನಿಕ್ ಮತಯಂತ್ರ (ಇವಿಎಂ)ದಲ್ಲಿ ಮತದಾನ ಮಾಡಿದ ಬಳಿಕ ಯಾರಿಗೆ ಮತ ಚಲಾವಣೆಯಾಗಿದೆ ಎಂಬುದರ ಚೀಟಿಯನ್ನು ತೋರಿಸುವ ವಿವಿಪ್ಯಾಟ್ ಯಂತ್ರದ ಬಗ್ಗೆ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ವ್ಯಕ್ತಪಡಿಸಿದ್ದ ಅನುಮಾನಗಳನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ಈ ಕುರಿತು ಜೈರಾಂ ರಮೇಶ್ ಅವರಿಗೆ ಪತ್ರ ಬರೆದಿರುವ ಚುನಾವಣಾ ಆಯೋಗದ ಪ್ರಧಾನ ಕಾರ್ಯದರ್ಶಿ, ನಿಮ್ಮ ಅನುಮಾನದಲ್ಲಿ ಹುರುಳಿಲ್ಲ. ವಿವಿಪ್ಯಾಟ್ ವ್ಯವಸ್ಥೆಯನ್ನು 2013ರಲ್ಲಿ ಕಾಂಗ್ರೆಸ್ ನೇತೃತ್ವದ ಸರ್ಕಾರವೇ ಜಾರಿಗೆ ತಂದಿದೆ. ಚುನಾವಣೆಯಲ್ಲಿ ಬಳಸುವ ಇವಿಎಂಗಳ ಬಗ್ಗೆ ನಮಗೆ ಸಂಪೂರ್ಣ ನಂಬಿಕೆಯಿದೆ. ಇದರ ವಿಶ್ವಾಸಾರ್ಹತೆ ಹಾಗೂ ಕಾನೂನುಬದ್ಧತೆ ಬಗ್ಗೆ ನಮ್ಮ ವೆಬ್‌ಸೈಟಿನಲ್ಲಿ ಉಲ್ಲೇಖಿಸಲಾಗಿದೆ. ಚುನಾವಣಾ ನಿಯಮಾವಳಿಯ 49ಎ ಮತ್ತು 49ಎಂ ನಲ್ಲಿ ವಿವಿಪ್ಯಾಟ್‌ಗಳ ಬಗ್ಗೆ ಹೇಳಲಾಗಿದೆ ಎಂದು ಸ್ಪಷ್ಟನೆ ನೀಡಿದೆ.
ಒಂದು ದೇಶ, ಒಂದು ಚುನಾವಣೆಗೆ ಬೇಕು 30 ಲಕ್ಷ ಇವಿಎಂ..!
ಕಳೆದ ತಿಂಗಳು ನಡೆದ ‘ಇಂಡಿಯಾ’ ಕೂಟದ ಸಭೆಯಲ್ಲಿ ವಿರೋಧ ಪಕ್ಷಗಳು ಇವಿಎಂ ಹಾಗೂ ವಿವಿಪ್ಯಾಟ್‌ಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿ, ವಿವಿಪ್ಯಾಟ್ ಸ್ಲಿಪ್‌ಗಳನ್ನು ಮತದಾರರ ಕೈಗೆ ನೀಡಬೇಕು ಮತ್ತು ಅವರೇ ಅದನ್ನು ಪ್ರತ್ಯೇಕ ಬಾಕ್ಸ್‌ಗೆ ಹಾಕುವಂತೆ ಮಾಡಬೇಕು ಎಂದು ಹೇಳಿದ್ದವು. ಈ ಬಗ್ಗೆ ಡಿ.30ರಂದು ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಜೈರಾಂ ರಮೇಶ್, ‘ಇಂಡಿಯಾ’ ಕೂಟದ ಕಳವಳಗಳನ್ನು ಆಯೋಗ ಆಲಿಸಬೇಕು ಎಂದು ಕೋರಿದ್ದರು.
ಈ ಕುರಿತು ಪತ್ರದಲ್ಲಿ ಸುದೀರ್ಘ ಸ್ಪಷ್ಟನೆ ನೀಡಿ, ಜೈರಾಂ ಅವರ ಬೇಡಿಕೆಯನ್ನು ಚುನಾವಣಾ ಆಯೋಗ ತಿರಸ್ಕರಿಸಿದೆ.
ಪ್ರತಿ ವಿವಿಪ್ಯಾಟ್ ಸ್ಲಿಪ್ ಎಣಿಕೆಗೆ ಚುನಾವಣಾ ಆಯೋಗ ವಿರೋಧ: ಸುಪ್ರೀಂ ಕೋರ್ಟ್‌ಗೆ ಅಫಿಡವಿಟ್