ದೆಹಲಿಯಲ್ಲಿ ಮತ್ತೆ 10 ಹೊಸ ಒಮಿಕ್ರಾನ್‌ ಪ್ರಕರಣ ಪತ್ತೆ ಕೊರೋನಾ ಕೇಸ್‌ನಲ್ಲೂ ತೀವ್ರ ಏರಿಕೆ ಆತಂಕದಲ್ಲಿ ರಾಷ್ಟ್ರ ರಾಜಧಾನಿಯ ಜನ  

ನವದೆಹಲಿ( ಡಿ.17): ಇಂದು ಬೆಳಗ್ಗೆ ದೆಹಲಿಯಲ್ಲಿ ಹತ್ತು ಹೊಸ ಒಮಿಕ್ರಾನ್ ಪ್ರಕರಣಗಳು ದಾಖಲಾಗಿವೆ. ದೆಹಲಿಯಲ್ಲಿ ಸುಮಾರು ನಾಲ್ಕು ತಿಂಗಳಲ್ಲಿ ಕೊರೊನಾ ವೈರಸ್ ಪ್ರಕರಣಗಳಲ್ಲಿ ದಿನನಿತ್ಯವೂ ತೀವ್ರ ಏರಿಕೆಯನ್ನು ಕಂಡ ಒಂದು ದಿನದ ನಂತರ ಹೀಗೆ ರೂಪಾಂತರಿಯ ಹತ್ತು ಪ್ರಕರಣ ಬಯಲಾಗಿದ್ದು, ದೆಹಲಿ ಜನರಲ್ಲಿ ಆತಂಕ ಮೂಡಿಸಿದೆ. ಭಾರತದಾದ್ಯಂತ ಒಟ್ಟು ಕೊರೊನಾ ಹೊಸ ರೂಪಾಂತರದ ಒಮಿಕ್ರಾನ್‌ನ 90 ಕ್ಕೂ ಹೆಚ್ಚು ಪ್ರಕರಣಗಳು ಇಲ್ಲಿಯವರೆಗೆ ದಾಖಲಾಗಿವೆ. 

ಡಿಸೆಂಬರ್ 5 ರಂದು ಮೊದಲ ಪ್ರಕರಣ ದಾಖಲಿಸಿದ ನಂತರ ದೆಹಲಿಯಲ್ಲಿ ಇದುವರೆಗೆ ಒಟ್ಟು 20 ಒಮಿಕ್ರಾನ್‌ ಪ್ರಕರಣಗಳು ಇರುವ ಬಗ್ಗೆ ವರದಿಯಾಗಿದೆ. ಈ ಪೈಕಿ ಹತ್ತು ರೋಗಿಗಳು ಗುಣಮುಖರಾಗಿದ್ದು ಬಿಡುಗಡೆ ಮಾಡಲಾಗಿದೆ ಎಂದು ಆರೋಗ್ಯ ಸಚಿವ ಸತ್ಯೇಂದ್ರ ಜೈನ್(Satyendar Jain) ಇಂದು ಹೇಳಿದ್ದಾರೆ. ಈ ನಡುವೆ ವಿದೇಶ ಪ್ರಯಾಣದ ಹಿನ್ನೆಲೆ ಇರುವ ಅನೇಕರಿಗೆ ತಪಾಸಣೆ ನಡೆಸಲಾಗಿದ್ದು, ಅವರಿಗೆ ಕೋವಿಡ್‌ಗೆ ಪಾಸಿಟಿವ್ ಇರುವುದು ಗೊತ್ತಾಗಿದೆ ಎಂದು ಹೇಳಿದರು.

New Year 2022 : ಬ್ರಿಗೇಡ್‌ ರೋಡ್‌ನಲ್ಲಿ ಸೆಲಬ್ರೇಶನ್‌ಗೆ ಅವಕಾಶವಿಲ್ಲ

ಒಟ್ಟಾರೆಯಾಗಿ ಅತಿ ಹೆಚ್ಚು ಕೋವಿಡ್ ಪ್ರಕರಣಗಳನ್ನು ಹೊಂದಿರುವ ರಾಜ್ಯವಾದ ಮಹಾರಾಷ್ಟ್ರ(Maharashtra)ದಲ್ಲಿ ಇದುವರೆಗೆ 32 ಒಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಕರ್ನಾಟಕ(Karnataka), ಗುಜರಾತ್, ಕೇರಳ(Kerala), ತಮಿಳುನಾಡು, ಪಶ್ಚಿಮ ಬಂಗಾಳ (West Bengal) ಮತ್ತು ಆಂಧ್ರಪ್ರದೇಶ (Andhra Pradesh) ಒಮಿಕ್ರಾನ್‌ ಕೇಸ್‌ ಹೊಂದಿರುವ ಇತರ ರಾಜ್ಯಗಳಾಗಿವೆ. ಈ ಹೊಸ ರೂಪಾಂತರಿಯೂ ಹೆಚ್ಚು ಹರಡುತ್ತದೆ ಎಂದು ಹೇಳಲಾಗುತ್ತಿದೆ. 

Omicron Variant: ಬ್ರಿಟನ್‌ನಲ್ಲಿ ಮೊದಲ ಸಾವು, ಬೂಸ್ಟರ್ ಡೋಸ್ ಕೆಲಸ ಮಾಡಲ್ಲ, ಜಗತ್ತಿನಾದ್ಯಂತ ಭೀತಿ

ಕರ್ನಾಟಕ(Karnataka)ದಲ್ಲಿ, ಗುರುವಾರ ಇನ್ನೂ ಐದು ಪ್ರಕರಣಗಳು ದಾಖಲಾಗಿವೆ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ (Dr K. Sudhakar )ಹೇಳಿದ್ದಾರೆ. ಇದರಿಂದ ದಕ್ಷಿಣ ರಾಜ್ಯದಲ್ಲಿ ಒಟ್ಟು ಪ್ರಕರಣಗಳ ಸಂಖ್ಯೆ ಎಂಟಕ್ಕೆ ಏರಿಕೆಯಾಗಿದೆ. 'ಕರ್ನಾಟಕದಲ್ಲಿ ಇಂದು ಇನ್ನೂ ಐದು ಓಮಿಕ್ರಾನ್ ಪ್ರಕರಣಗಳು ಪತ್ತೆಯಾಗಿವೆ. ಯುಕೆಯಿಂದ ಹಿಂದಿರುಗಿದ 19 ವರ್ಷದ ಪುರುಷ, ದೆಹಲಿಯಿಂದ ಹಿಂದಿರುಗಿದ 36 ವರ್ಷದ ಪುರುಷ, ದೆಹಲಿಯಿಂದ ಹಿಂದಿರುಗಿದ 70 ವರ್ಷದ ಮಹಿಳೆ ಹಾಗೂ ನೈಜೀರಿಯಾದಿಂದ ಹಿಂದಿರುಗಿದ 52 ವರ್ಷದ ಪುರುಷ ಮತ್ತು ದಕ್ಷಿಣ ಆಫ್ರಿಕಾದಿಂದ ಹಿಂದಿರುಗಿದ 33 ವರ್ಷದ ಪುರುಷ' ಇಷ್ಟು ಜನರಿಗೆ ಒಮಿಕ್ರಾನ್‌ ಇರುವುದಾಗಿ ಸುಧಾಕರ್‌ ಅವರು ಟ್ವಿಟ್‌ ಮಾಡಿದ್ದಾರೆ. ಒಮಿಕ್ರಾನ್‌ ವ್ಯಾಪಕವಾಗಿ ಹರಡದಂತೆ ತಡೆಯಲು ಹೊಸ ಪ್ರಯಾಣ ನಿಯಮಗಳೊಂದಿಗೆ, ವಿಮಾನ ನಿಲ್ದಾಣಗಳಲ್ಲಿ ಬಿಗಿಯಾದ ನಿರ್ಬಂಧಗಳನ್ನು ಜಾರಿಗೆ ತರಲಾಗಿದೆ. ಈ ಬಗ್ಗೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. 

Scroll to load tweet…

11,708 ಒಮಿಕ್ರಾನ್‌ ಪ್ರಕರಣಗಳೊಂದಿಗೆ, ಇಂಗ್ಲೆಂಡ್‌( United Kindom)ಜಗತ್ತಿನ ದೇಶಗಳ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ, ನಂತರ 9,009 ಪ್ರಕರಣ ಹೊಂದಿರುವ ಡೆನ್ಮಾರ್ಕ್(Denmark) ಇದ್ದು, 1,792 ಪ್ರಕರಣ ಪತ್ತೆಯಾಗುವ ಮೂಲಕ ನಾರ್ವೆ( Norway) ಮೂರನೇ ಅತಿ ಹೆಚ್ಚು ಪ್ರಕರಣಗಳನ್ನು ಹೊಂದಿರುವ ರಾಷ್ಟ್ರಗಳ ಪಟ್ಟಿಯಲ್ಲಿದೆ. ನಂತರ ದಕ್ಷಿಣ ಆಫ್ರಿಕಾ (South Africa) 1,134 ಪ್ರಕರಣ ಹೊಂದಿದ್ದು ನಾಲ್ಕನೇ ಸ್ಥಾನದಲ್ಲಿದೆ. ಹೊಸ ರೂಪಾಂತರಿ ಒಮಿಕ್ರಾನ್‌ ಹರಡುತ್ತಿದ್ದಂತೆ COVID-19 ಲಸಿಕೆ ಹಾಕದಿದ್ದರೆ ಅಂಥವರಿಗೆ ಇದು 'ತೀವ್ರ ಅನಾರೋಗ್ಯ ಮತ್ತು ಸಾವಿನ ಚಳಿಗಾಲವಾಗಲಿದೆ ಎಂದು ಅಮೆರಿಕಾ ಅಧ್ಯಕ್ಷ ಜೋ ಬೈಡೆನ್(Joe Biden) ಗುರುವಾರ ಎಚ್ಚರಿಸಿದ್ದಾರೆ.

ಒಮಿಕ್ರಾನ್ ತೀವ್ರವಾಗಿ ಹರಡುತ್ತಿದೆ ಎಂದು ಎಚ್ಚರಿಸಿದ ವಿಶ್ವ ಆರೋಗ್ಯ ಸಂಸ್ಥೆ ಮಂಗಳವಾರ ಇದು ಹೆಚ್ಚಿನ ರಾಷ್ಟ್ರಗಳಿಗೆ ಬಹುಶಃ ಹರಡಿದೆ ಎಂದು ಹೇಳಿದೆ.