ಬರ್ಮಿಂಗ್‌ಹ್ಯಾಮ್(ಜು.03): ಟೀಂ ಇಂಡಿಯಾ ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯ ಪ್ರದರ್ಶನ ನೀಡುತ್ತಿದ್ದಾರೆ. ಅದರಲ್ಲೂ ಜೀವದಾನವನ್ನು ಸದುಪಯೋಗ ಪಡಿಸಿಕೊಳ್ಳೋ ಬ್ಯಾಟ್ಸ್‌ಮನ್‌ಗಳ ಪೈಕಿ ರೋಹಿತ್ ಶರ್ಮಾ ಮೊದಲ ಸ್ಥಾನದಲ್ಲಿದ್ದಾರೆ. ಕಾರಣ ರೋಹಿತ್ ಶರ್ಮಾ ಏಕದಿನ ಕ್ರಿಕೆಟ್‌ನಲ್ಲಿ ಜೀವದಾನ ಪಡೆದು 3 ಶತಕ ಹಾಗೂ  1 ಅರ್ಧಶತಕ ಸಿಡಿಸಿ ಮಿಂಚಿದ್ದಾರೆ. ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲೂ ರೋಹಿತ್ ಶರ್ಮಾ ಜೀವನದಾನ ಪಡೆದು ಸೆಂಚುರಿ ಸಿಡಿಸಿದ್ದಾರೆ.

ಇದನ್ನೂ ಓದಿ: 1983ರಲ್ಲಿ ಭಾರತ ವಿಶ್ವಕಪ್ ಗೆದ್ದಾಗ ಸಾಕ್ಷಿಯಾಗಿದ್ದ ಚಾರುಲತಾ,2019ರಲ್ಲೂ ಹಾಜರ್!

ವಿರುದ್ಧ ಜೀವದಾನ ಸಿಕ್ಕಾಗ ಸ್ಕೋರ್‌ ಅಂತಿಮ ಸ್ಕೋರ್‌
ದ.ಆಫ್ರಿಕಾ 01 122*
ಆಸ್ಪ್ರೇಲಿಯಾ 02 57
ಇಂಗ್ಲೆಂಡ್‌ 04 104
ಬಾಂಗ್ಲಾ 09 104

ರೋಹಿತ್ ಶರ್ಮಾ ಜೀವದಾನ ಸಿಕ್ಕರೆ ಶತಕ, ನಾನ್ ಸ್ಟ್ರೈಕ್ ಬ್ಯಾಟ್ಸ್‌ಮನ್‌ನ್ನು ರನೌಟ್ ಮಾಡಿದರೆ ದ್ವಿಶತಕ ಅನ್ನೋ ಮಾತು ಕ್ರಿಕೆಟ್ ವಲಯದಲ್ಲಿ ಕೇಳಿ ಬರುತ್ತಿದೆ. ಕಾರಣ 2 ಬಾರಿ ತಮ್ಮ ತಂಡದ ನಾನ್‌ಸ್ಟ್ರೈಕ್ ಬ್ಯಾಟ್ಸ್‌ಮನ್‌ನ್ನು ರೋಹಿತ್ ರನೌಟ್ ಮಾಡಿ ದ್ವಿಶತಕ ಸಿಡಿಸಿದ್ದಾರೆ.