ನಾಟಿಂಗ್’ಹ್ಯಾಮ್[ಜೂ.14]: ಭಾರತ-ನ್ಯೂಜಿಲೆಂಡ್ ನಡುವಿನ ಪಂದ್ಯ ಮಳೆಗಾಹುತಿಯಾದ ಬಳಿಕ ಕ್ರಿಕೆಟ್ ಅಭಿಮಾನಗಳ ಚಿತ್ತ ಬಹುನಿರೀಕ್ಷಿತ ಭಾರತ-ಪಾಕಿಸ್ತಾನ ಪಂದ್ಯದ ಮೇಲೆ ನೆಟ್ಟಿದೆ. 

ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಟೀಂ ಇಂಡಿಯಾ ನಾಯಕ ಕೊಹ್ಲಿ, ಬದ್ಧವೈರಿಗಳ ವಿರುದ್ಧದ ಪಂದ್ಯಕ್ಕಾಗಿ ಎದುರು ನೋಡುತ್ತಿರುವುದಾಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇಷ್ಟು ವರ್ಷಗಳು ಎರಡೂ ತಂಡಗಳು ಸ್ಫರ್ದಾತ್ಮಕವಾಗಿ ಆಡಿವೆ. ವಿಶ್ವಕಪ್ ನಲ್ಲಿ ಆಡುವುದಕ್ಕೆ ಹೆಮ್ಮೆ ಇದೆ. ನಾವು ಶ್ರೇಷ್ಠ ಪ್ರದರ್ಶನ ನೀಡಲಿದ್ದೇವೆ ಎಂದು ಕೊಹ್ಲಿ ಹೇಳಿದ್ದಾರೆ. 

ವಿಶ್ವಕಪ್ 2019: ವಿಶ್ವದಾಖಲೆ ಬರೆಯಲು ಸಜ್ಜಾದ ವಿರಾಟ್ ಕೊಹ್ಲಿ

11000 ರನ್‌ ತಲುಪಲು ಇನ್ನೂ ಕಾಯಬೇಕಿದೆ ಕೊಹ್ಲಿ!

ಭಾರತ ತಂಡದ ರನ್‌ ಮಷಿನ್‌ ವಿರಾಟ್‌ ಕೊಹ್ಲಿ ಏಕದಿನ ಕ್ರಿಕೆಟ್‌ನಲ್ಲಿ ಮತ್ತೊಂದು ಮಹತ್ವದ ಮೈಲುಗಲ್ಲಿನ ಹೊಸ್ತಿಲಲ್ಲಿದ್ದಾರೆ. 11000 ರನ್‌ ಪೂರೈಸಲು ಅವರಿಗೆ ಕೇವಲ 57 ರನ್‌ಗಳ ಅಗತ್ಯವಿದೆ. 

ಗುರುವಾರ ನ್ಯೂಜಿಲೆಂಡ್‌ ವಿರುದ್ಧದ ಪಂದ್ಯದಲ್ಲಿ ವಿರಾಟ್‌ ಆ ಸಾಧನೆ ಮಾಡಲಿದ್ದಾರೆ ಎನ್ನುವ ನಿರೀಕ್ಷೆ ಇತ್ತು. ಆದರೆ ಅವರು ಮತ್ತಷ್ಟು ದಿನ ಕಾಯಬೇಕಿದೆ. ವೇಗದ 11000 ರನ್‌ ದಾಖಲೆ ಸಚಿನ್‌ ತೆಂಡುಲ್ಕರ್‌ (276 ಇನ್ನಿಂಗ್ಸ್‌) ಹೆಸರಲ್ಲಿದೆ. ಕೊಹ್ಲಿ ಸದ್ಯ 221 ಇನ್ನಿಂಗ್ಸ್‌ಗಳಲ್ಲಿ 10943 ರನ್‌ ಕಲೆಹಾಕಿದ್ದಾರೆ.
 

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...