ನಾಟಿಂಗ್‌ಹ್ಯಾಮ್(ಜೂ.13): ನ್ಯೂಜಿಲೆಂಡ್ ವಿರುದ್ದದ ಸರಣಿಗೆ ಟೀಂ ಇಂಡಿಯಾ ಸಜ್ಜಾಗಿದೆ. ಈ ಪಂದ್ಯದಲ್ಲಿ ಐತಿಹಾಸಿಕ ದಾಖಲೆ ಬರೆಯಲು ನಾಯಕ ವಿರಾಟ್ ಕೊಹ್ಲಿ ಸಜ್ಜಾಗಿದ್ದಾರೆ.  ಸದ್ಯ 229 ಏಕದಿನ ಪಂದ್ಯದಿಂದ ವಿರಾಟ್ ಕೊಹ್ಲಿ 10943 ರನ್ ಸಿಡಿಸಿದ್ದಾರೆ. ಇದೀಗ ಅತೀ ವೇಗದಲ್ಲಿ 11,000 ರನ್ ದಾಖಲೆ ಬರೆಯಲು ಕೊಹ್ಲಿಗಿನ್ನು 57 ರನ್ ಅವಶ್ಯಕತೆ ಇದೆ.

ಇದನ್ನೂ ಓದಿ: ಟೀಂ ಇಂಡಿಯಾ ವಿಂಡೀಸ್‌ ಪ್ರವಾಸ: ವೇಳಾಪಟ್ಟಿ ಪ್ರಕಟ

ವಿರಾಟ್ ಕೊಹ್ಲಿ ಈಗಾಗಲೇ ಅತೀ ವೇಗದಲ್ಲಿ 10,000 ರನ್ ಸಿಡಿಸಿದ ದಾಖಲೆ ಬರೆದಿದ್ದಾರೆ. ಇದೀಗ 11,000 ರನ್ ಹೊಸ್ತಿಲಲ್ಲಿರುವ ಕೊಹ್ಲಿ ವಿಶ್ವದಾಖಲೆ ಬರೆಯಲು ರೆಡಿಯಾಗಿದ್ದಾರೆ. 11,000 ರನ್ ಪೂರೈಸಿದರೆ ಭಾರತದ 3ನೇ ಹಾಗೂ ವಿಶ್ವದ 9ನೇ ಕ್ರಿಕೆಟಿಗ ಅನ್ನೋ ಹೆಗ್ಗಳಿಕೆಗೆ ಪಾತ್ರರಾಗಲಿದ್ದಾರೆ.