ಮ್ಯಾಂಚೆಸ್ಟರ್(ಜೂ.15): ವಿಶ್ವಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ನಡುವಿನ ಹೋರಾಟಕ್ಕೆ ಕೌಂಟ್‌ಡೌನ್ ಆರಂಭವಾಗಿದೆ. ಜೂನ್ 16ರಂದು ಇಂಡೋ-ಪಾಕ್ ಮುಖಾಮುಖಿಯಾಗುತ್ತಿದೆ. ರೋಚಕ ಹೋರಾಟಕ್ಕೆ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಸಜ್ಜಾಗಿದೆ. ಪಾಕಿಸ್ತಾನ ವಿರುದ್ಧ ನಾಯಕ ಕೊಹ್ಲಿ ದಿಟ್ಟ ಹೋರಾಟ ನೀಡಿದ್ದಾರೆ. 

ಇದನ್ನೂ ಓದಿ: ಪಾಕಿಸ್ತಾನದ ಈ ಕ್ರಿಕೆಟಿಗನಿಗೆ ಬಾರಿಸಲು ರೆಡಿಯಾಗಿದ್ರಂತೆ ಭಜ್ಜಿ..!

ಏಕದಿನ ಕ್ರಿಕೆಟ್‌ನಲ್ಲಿ ವಿರಾಟ್ ಕೊಹ್ಲಿ ಗರಿಷ್ಠ ಸ್ಕೋರ್ ಸಿಡಿಸಿರುವುದು ಪಾಕಿಸ್ತಾನ ವಿರುದ್ದ ಅನ್ನೋದು ವಿಶೇಷ. ಕೊಹ್ಲಿ ಪಾಕ್ ವಿರುದ್ಧ 183 ರನ್ ಸಿಡಿಸಿದ್ದಾರೆ.  2012ರಲ್ಲಿ ಶೇರ್ ಬಾಂಗ್ಲಾ ಕ್ರೀಡಾಂಗಣದಲ್ಲಿ ಕೊಹ್ಲಿ ಗರಿಷ್ಠ ಮೊತ್ತ ಸಾಧನೆ ಮಾಡಿದ್ದಾರೆ. ಪಾಕಿಸ್ತಾನ ವಿರುದ್ದ 2 ಶತಕ ಹಾಗೂ 1 ಅರ್ಧಶತಕ ಸಿಡಿಸಿರುವ ಕೊಹ್ಲಿ, ಒಟ್ಟು 459 ರನ್ ಸಿಡಿಸಿದ್ದಾರೆ. 

ಇದನ್ನೂ ಓದಿ: ಪಾಕ್‌ ಅಭಿಮಾನಿಗೆ ಅಭಿನಂದನ್ ಮೀಸೆ: #UltimatePunch

ಪಾಕಿಸ್ತಾನ ವಿರುದ್ಧ ಕೊಹ್ಲಿ ಬ್ಯಾಟಿಂಗ್ ಸರಾಸರಿ 45.90. ಇನ್ನು ಸ್ಟ್ರೈಕ್ ರೇಟ್ 93.29 . ಪಾಕಿಸ್ತಾನ ವಿರುದ್ದ ಕೊಹ್ಲಿ ಒಟ್ಟು 12 ಏಕದಿನ ಪಂದ್ಯ ಆಡಿದ್ದಾರೆ. ಪಾಕಿಸ್ತಾನ ವಿರುದ್ಧ ಕೊಹ್ಲಿ ಫೀಲ್ಡಿಂಗ್‌ನಲ್ಲೂ ಉತ್ತಮ ನಿರ್ವಹಣೆ ನೀಡಿದ್ದಾರೆ. ಪಾಕ್ ವಿರುದ್ದ ಕೊಹ್ಲಿ ಒಟ್ಟು 7 ಕ್ಯಾಚ್ ಹಿಡಿದಿದ್ದಾರೆ.