ನವದೆಹಲಿ(ಜೂ.15): ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ನಡುವಿನ ವಿಶ್ವಕಪ್‌ ಸಮರ ಭಾನುವಾರ ನಡೆಯಲಿದ್ದು, ಪಂದ್ಯದ ಕಾವು ಹೆಚ್ಚುತ್ತಿದೆ. ಸಾಮಾಜಿಕ ತಾಣಗಳಲ್ಲಿ ಎರಡೂ ದೇಶದ ವಾಹಿನಿಗಳ ಜಾಹೀರಾತುಗಳ ಮೂಲಕ ಪರಸ್ಪರ ಕಾಲೆಳೆದುಕೊಳ್ಳುತ್ತಿವೆ. 

ಪೈಲೆಟ್ ಅಭಿನಂದನ್ ಬಳಸಿ ಪಾಕಿಸ್ತಾನ ಚೀಪ್ ಗಿಮಿಕ್ - ವಿಶ್ವಕಪ್ ಫ್ಯಾನ್ಸ್ ಗರಂ!

ಇತ್ತೀಚೆಗಷ್ಟೇ ಪಾಕಿಸ್ತಾನದ ವಾಹಿನಿಯೊಂದು ವಿಶ್ವಕಪ್‌ ಪಂದ್ಯದ ಜಾಹೀರಾತಿಗೆ ಭಾರತದ ವಿಂಗ್‌ ಕಮಾಂಡರ್‌ ಅಭಿನಂದನ್‌ರನ್ನು ವಶಕ್ಕೆ ಪಡೆದಿದ್ದ ಸನ್ನಿವೇಶಕ್ಕೆ ಹೋಲುವಂತಹ ಪ್ರಸಂಗವನ್ನು ಸೃಷ್ಟಿಸಿತ್ತು. ಆ ಜಾಹೀರಾತಿಗೆ ಭಾರಿ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಭಾರತೀಯ ಅಭಿಮಾನಿಗಳು ಪಾಕಿಗಳ ಕಾಲೆಳೆದಿದ್ದಾರೆ. ವಿ ಸೆವೆನ್‌ ಪಿಕ್ಚ​ರ್ಸ್ ಎನ್ನುವ ಸಂಸ್ಥೆಯೊಂದು ವಿಡಿಯೋವೊಂದನ್ನು ಸಿದ್ಧಪಡಿಸಿ, ಯೂಟ್ಯೂಬ್‌ಗೆ ಹಾಕಿದೆ.

ಆ ವಿಡಿಯೋದಲ್ಲಿ ಪಾಕಿಸ್ತಾನದ ಅಭಿಮಾನಿಯೊಬ್ಬ ಸಲೂನ್‌ಗೆ ಬಂದು ಭಾರತೀಯ ಅಭಿಮಾನಿಗೆ ಕರವಸ್ತ್ರವೊಂದನ್ನು ಉಡುಗೊರೆಯಾಗಿ ನೀಡುತ್ತಾನೆ. ನಮ್ಮ ಮೇಲೆ ಸೋತ ಬಳಿಕ ಮುಖ ಮುಚ್ಚಿಕೊಳ್ಳಲು ಎಂದು ಪಾಕಿಸ್ತಾನಿ ಅಭಿಮಾನಿ ಕಿಚಾಯಿಸುತ್ತಾನೆ. ಬಳಿಕ ಸುಂದರವಾಗಿ ಕಾಣುವಂತೆ ಶೇವ್‌ ಮಾಡು ಎಂದು ಹೇಳಿದ ಪಾಕಿಸ್ತಾನಿಗೆ ಅಭಿನಂದನ್‌ರಂತೆ ಮೀಸೆ ಬಿಟ್ಟು, ನಿಮ್ಮ ತಂಡದ ಬೆಂಬಲಿಗರು ನೋಡದಂತೆ ಮುಖ ಮುಚ್ಚಿಕೊಂಡು ಹೋಗು ಎಂದು ಕರವಸ್ತ್ರವನ್ನು ವಾಪಸ್‌ ನೀಡಲಾಗುತ್ತದೆ. ವಿಡಿಯೋ ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗಿದೆ.

ಹೀಗಿದೆ ನೋಡಿ ಆ ವಿಡಿಯೋ...

ವಿಶ್ವಕಪ್ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಕದನ ಜೂನ್ 16 ರಂದು ನಡೆಯಲಿದ್ದು, ಮ್ಯಾಂಚೆಸ್ಟರ್’ನ ಓಲ್ಡ್ ಟ್ರಾಫೋರ್ಡ್ ಮೈದಾನ ಸಾಕ್ಷಿಯಾಗಲಿದೆ. 

ವಿಶ್ವಕಪ್ ಟೂರ್ನಿಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ ನೋಡಿ...