ಸೌಥಾಂಪ್ಟನ್(ಜೂ.23): ವಿಶ್ವಕಪ್ ಟೂರ್ನಿಯಲ್ಲಿ ಬಲಿಷ್ಠ ತಂಡಗಳ ವಿರುದ್ಧ ಅಬ್ಬರಿಸಿದ್ದ ಟೀಂ ಇಂಡಿಯಾ ಆಫ್ಘಾನಿಸ್ತಾನ ವಿರುದ್ದ ತಿಣುಕಾಡಿ ಗೆಲುವು ಸಾಧಿಸಿತ್ತು. ಬ್ಯಾಟ್ಸ್‌ಮನ್ ಪರದಾಡಿದರೆ, ಬೌಲರ್‌ಗಳ ಅದ್ಭುತ ಪ್ರದರ್ಶನದಿಂದ ಟೀಂ ಇಂಡಿಯಾ ಗೆಲುವಿನ ನಗೆ ಬೀರಿತು. ಕೊನೆಯ ಓವರ್ ವರೆಗೆ ಸಾಗಿದ ಪಂದ್ಯದಲ್ಲಿ ಟೀಂ ಇಂಡಿಯಾ ತಿಣುಕಾಡಿ ಗೆಲುವು ಸಾಧಿಸಿತ್ತು. ಈ ಗೆಲುವಿನ ಬೆನ್ನಲ್ಲೇ ನಾಯಕ ವಿರಾಟ್ ಕೊಹ್ಲಿಗೆ  ಸಂಕಷ್ಠ ಎದುರಾಗಿದೆ.

ಇದನ್ನೂ ಓದಿ: ಅಫ್ಘಾನ್ ವಿರುದ್ಧ ಬ್ಯಾಟ್ಸ್‌ಮನ್ ಪರದಾಟ, ಬೌಲರ್ಸ್ ಆರ್ಭಟ- ತಿಣುಕಾಡಿ ಗೆದ್ದ ಭಾರತ!

ಆಫ್ಘಾನ್ ವಿರುದ್ಧ ಗೆಲುವಿಗಾಗಿ ಟೀಂ ಇಂಡಿಯಾ ಹರಸಾಹಸ ಪಟ್ಟಿತು. 29ನೇ ಓವರ್‌ನಲ್ಲಿ ನಾಯಕ ಕೊಹ್ಲಿ LBW ಮನವಿ ತಿರಸ್ಕರಿಸಿದ ಅಂಪೈರ್‌ಗೆ ಕೊಹ್ಲಿ ಸವಾಲು ಹಾಕಿ ರಿವ್ಯೂವ್ ಪಡೆದಿದ್ದರು.  ಅಂಪೈರ್ ಮತ್ತೆ ನಾಟೌಟ್ ತೀರ್ಪು  ನೀಡಿದರು. ಇದರಿಂದ ಕೆರಳಿದ ಕೊಹ್ಲಿ, ಅಂಪೈರ್ ಅಲೀಂ ದಾರ್ ಜೊತೆ ವಾಗ್ವಾದ ನಡೆಸಿದ್ದರು. ಇದೀಗ ಅನುಚಿತ  ವರ್ತನೆ ತೋರಿದ ಕೊಹ್ಲಿಗೆ ಐಸಿಸಿ ದಂಡ ಹಾಕಿದೆ.

ಇದನ್ನೂ ಓದಿ:ಇಂಡೋ-ಆಫ್ಘಾನ್ ಪಂದ್ಯ- ಅಜರುದ್ದೀನ್ ದಾಖಲೆ ಸರಿಗಟ್ಟಿದ ಕೊಹ್ಲಿ!

ವಿರಾಟ್ ಕೊಹ್ಲಿ ಐಸಿಸಿ ನಿಯಮ ಲೆವೆಲ್ 1 ಉಲ್ಲಂಘಿಸಿದ್ದಾರೆ. ಐಸಿಸಿ ನಿಯಮ 2.1 ಕಲಂ ಪ್ರಕಾರ ಕೊಹ್ಲಿಗೆ ಪಂದ್ಯದ ಸಂಭಾವನೆಯ ಶೇಕಡಾ 25 ರಷ್ಟು ಮೊತ್ತವನ್ನು ದಂಡವಾಗಿ ಐಸಿಸಿಗೆ ಕಟ್ಟುವಂತೆ ಸೂಚಿಸಿದೆ. ಈ ಪ್ರಕರಣದ ಬಳಿಕ ಕೊಹ್ಲಿ 2 ಡಿಮೆರಿಟ್ ಪಾಯಿಂಟ್ ಹೊಂದಿದ್ದಾರೆ.