ಮ್ಯಾಂಚೆಸ್ಟರ್(ಜು.07): ವಿಶ್ವಕಪ್ ಟೂರ್ನಿ ಸೆಮಿಫೈನಲ್ ಹೋರಾಟದ ಕುತೂಹಲ ಹೆಚ್ಚಾಗಿದೆ. ಜುಲೈ 9 ರಂದು ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಭಾರತ-ನ್ಯೂಜಿಲೆಂಡ್ ಹೋರಾಟ ನಡೆಸಲಿದೆ. ಬರೋಬ್ಬರಿ 11 ವರ್ಷಗಳ ಬಳಿಕ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಐಸಿಸಿ ಸೆಮಿಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುತ್ತಿದ್ದಾರೆ.

ಇದನ್ನೂ ಓದಿ: ವಿಶ್ವಕಪ್ ಪಂದ್ಯದಲ್ಲಿ ಕಾಶ್ಮೀರ ಕೂಗು; ICCಗೆ ದೂರು ನೀಡಿದ BCCI!

2008ರಲ್ಲಿ ನಡೆದ ಅಂಡರ್ 19 ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಮುಖಾಮುಖಿಯಾಗಿತ್ತು. 11 ವರ್ಷಗಳ ಹಿಂದೆ ತಂಡವನ್ನು ಮುನ್ನಡೆಸಿದ ಕೊಹ್ಲಿ ಹಾಗೂ ವಿಲಿಯಮ್ಸನ್ ಇದೀಗ ಸೀನಿಯರ್ ತಂಡವನ್ನು ಮುನ್ನಡೆಸುತ್ತಿದ್ದಾರೆ. 2008ರ ಸೆಮಿಫೈನಲ್ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು ಮಣಿಸಿದ ವಿರಾಟ್ ಕೊಹ್ಲಿ ನೇತೃತ್ವದ ಅಂಡರ್ 19 ತಂಡ ಫೈನಲ್ ಪ್ರವೇಶಿಸಿತ್ತು.

ಇದನ್ನೂ ಓದಿ: ಸೌತ್ ಆಫ್ರಿಕಾ ವಿರುದ್ಧ ಆಸೀಸ್‌ಗೆ ಸೋಲು; ಸೆಮೀಸ್ ಎದುರಾಳಿ ಅದಲು-ಬದಲು!

ಫೈನಲ್ ಪಂದ್ಯದಲ್ಲಿ ಸೌತ್ ಆಫ್ರಿಕಾ ತಂಡವನ್ನು ಮಣಿಸಿದ ಟೀಂ ಇಂಡಿಯಾ ಪ್ರಶಸ್ತಿ ಗೆದ್ದಿತ್ತು. 2008ರ ಅಂಡರ್ 19 ವಿಶ್ವಕಪ್ ಟೂರ್ನಿ ಸೆಮಿಫೈನಲ್ ಪಂದ್ಯದ ಬಳಿಕ ಇದೇ ಮೊದಲ ಬಾರಿಗೆ ಐಸಿಸಿ ಟೂರ್ನಿ ಸೆಮಿಫೈನಲ್ ಪಂದ್ಯದಲ್ಲಿ ಕೊಹ್ಲಿ ಹಾಗೂ ವಿಲಿಯಮ್ಸನ್ ಹೋರಾಟ ನಡೆಸಲಿದ್ದಾರೆ. 2008 ರೀತಿಯಲ್ಲೇ ನ್ಯೂಜಿಲೆಂಡ್ ಬಗ್ಗು ಬಡಿದು, ಫೈನಲ್ ಪಂದ್ಯದದಲ್ಲಿ ಗೆಲುವು ಸಾಧಿಸಲಿ ಎಂದು ಅಭಿಮಾನಿಗಳ ಪ್ರಾರ್ಥಿಸುತ್ತಿದ್ದಾರೆ.  ಹೀಗಾಗಿ ಪಂದ್ಯ ತೀವ್ರ ಕುತೂಹಲ ಕೆರಳಿಸಿದೆ.