ಮ್ಯಾಂಚೆಸ್ಟರ್(ಜೂ.16): ಭಾರತ ನೀಡಿದ 337 ರನ್ ಟಾರ್ಗೆಟ್ ಚೇಸ್ ಮಾಡಲು ಕಣಕ್ಕಿಳಿದಿರುವ ಪಾಕಿಸ್ತಾನ ದಿಟ್ಟ ಹೋರಾಟ ನೀಡುತ್ತಿದೆ. ಫಕಾರ್ ಜಮಾನ್ ಹಾಗೂ ಬಾಬರ್ ಅಜಂ ಬ್ಯಾಟಿಂಗ್ ಪ್ರದರ್ಶನ ಟೀಂ ಇಂಡಿಯಾ ಒತ್ತಡ ಹೆಚ್ಚಿಸುತ್ತಿದೆ. ಇದರ ಬೆನ್ನಲ್ಲೇ ಭಾರತಕ್ಕೆ ಶಾಕ್ ಎದುರಾಗಿದೆ. ಬೌಲಿಂಗ್ ವೇಳೆ ಗಾಯಗೊಂಡ ಭುವನೇಶ್ವರ್ ಕುಮಾರ್ ಪಂದ್ಯದಿಂದ ಹೊರಬಿದ್ದಿದ್ದಾರೆ.

ಇದನ್ನೂ ಓದಿ: ಪಾಕ್ ವಿರುದ್ಧ ಸಚಿನ್, ಕೊಹ್ಲಿಗೂ ಆಗದ ದಾಖಲೆ ಇದೀಗ ರೋಹಿತ್ ಹೆಸರಿಗೆ..!

ಪಂದ್ಯ ಆರಂಭಗೊಂಡ ಕೆಲ ಹೊತ್ತಲ್ಲೇ ಭುವಿ ಗಾಯಕ್ಕೆ ತುತ್ತಾಗಿದ್ದಾರೆ. ಭುವನೇಶ್ವರ್ 2.4 ಓವರ್ ಬೌಲಿಂಗ್ ಮಾಡಿ ಗಾಯದ ಸಮಸ್ಯೆಗೆ ತುತ್ತಾದರು. ಹೀಗಾಗಿ ಭುವಿ 3ನೇ ಓವರ್‌ನ 2 ಎಸೆತಗಳನ್ನು ವಿಜಯ್ ಶಂಕರ್ ಮುಗಿಸಿದರು. ವಿಜಯ್ ಶಂಕರ್ ಮೊದಲ ಎಸೆತದಲ್ಲಿ ಇಮಾಮ್ ಉಲ್ ಹಕ್ ವಿಕೆಟ್ ಕಬಳಿಸಿ ಮಿಂಚಿದರು.

ಇದನ್ನೂ ಓದಿ: ವಿಶ್ವಕಪ್ 2019: ಪಾಕ್ ವಿರುದ್ದ ದಾಖಲೆ ಬರೆದ ರೋಹಿತ್-ರಾಹುಲ್ ಜೋಡಿ!

ಗಾಯಗೊಂಡು ಹೊರಬಿದ್ದ ಭುವನೇಶ್ವರ್ ಕುಮಾರ್ ಪಾಕಿಸ್ತಾನ ವಿರುದ್ಧದ ಪಂದ್ಯದಿಂದ ಹೊರಬಿದ್ದಿದ್ದಾರೆ. ಭುವಿ ಅನುಪಸ್ಥಿತಿ ಟೀಂ ಇಂಡಿಯಾಗೆ ತೀವ್ರ ಹಿನ್ನಡೆ ತಂದಿದೆ. ವಿಕೆಟ್‌ಗಾಗಿ ಭಾರತ ಕಠಿಣ ಹೋರಾಟ ನೀಡುತ್ತಿದೆ. ಆದರೆ ಪಾಕಿಸ್ತಾನ ಎಚ್ಚರಿಕೆಯಿಂದ ಬ್ಯಾಟ್ ಬೀಸುತ್ತಿದೆ.