ಬರ್ಮಿಂಗ್‌ಹ್ಯಾಮ್(ಜು.02): ಭಾರತ ಹಾಗೂ ಬಾಂಗ್ಲಾದೇಶ ನಡುವಿನ ವಿಶ್ವಕಪ್ ಲೀಗ್ ಪಂದ್ಯದಲ್ಲೂ ಅಂಪೈರ್ ಮರುಪರಿಶೀಲನೆ  ಟ್ರೋಲ್ ಆಗಿದೆ. ಭಾರತದ ನೀಡಿದ 315 ರನ್ ಗುರಿ ಬೆನ್ನಟ್ಟಲು ಕಣಕ್ಕಿಳಿದ ಬಾಂಗ್ಲಾದೇಶ ದಿಟ್ಟ ಹೋರಾಟವನ್ನೇ ನೀಡಿತು. ಈ ವೇಳೆ ಸೌಮ್ಯ ಸರ್ಕಾರ LB ಬಲೆಗೆ ಬಿದ್ದರು. ಆದರೆ ಫೀಲ್ಡ್ ಅಂಪೈರ್  ನಾಟೌಟ್ ತೀರ್ಪು ನೀಡಿದ್ದರು. ಇದನ್ನು ಪ್ರಶ್ನಿಸಿ ನಾಯಕ ವಿರಾಟ್ ಕೊಹ್ಲಿ ಅಂಪೈರ್ ಮರುಪರಿಶೀಲನೆ(DRS) ಮೊರೆ ಹೋಗಿದ್ದಾರೆ.

ಇದನ್ನೂ ಓದಿ: 3ಡಿ ಗ್ಲಾಸ್ ಬದಿಗಿಟ್ಟು ಓದಿ- ಅಂಬಾಟಿಗೆ ಐಸ್‌ಲೆಂಡ್ ಕ್ರಿಕೆಟ್ ಮನವಿ !

ಸೌಮ್ಯ ಸರ್ಕಾರ್ ಇನ್‌ಸೈಡ್ ಎಡ್ಜ್‌ ಆಗಿರುವುದು ಸ್ಪಷ್ಟವಾಗಿಲ್ಲ. ಆದರೂ 3ನೇ ಅಂಪೈರ್ ನಾಟೌಟ್ ಎಂದು ತೀರ್ಪು ನೀಡಿದರು. ಇದು ನಾಯಕ ಕೊಹ್ಲಿ ಆಕ್ರೋಶಕ್ಕೆ ಕಾರಣವಾಯಿತು. ಕೊಹ್ಲಿ ಫೀಲ್ಡ್ ಅಂಪೈರ್ ಜೊತೆ ವಾದ ಕೂಡ ಮಾಡಿದರು. ಇದೀಗ DRS ತಪ್ಪು ಭಾರತೀಯ  ಅಭಿಮಾನಿಗಳನ್ನು ಕೆರಳಿಸಿದೆ. ಟ್ವಿಟರ್ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.