ಲಂಡನ್(ಜು.02): ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಆಟಗಾರರ ಆಯ್ಕೆ ಬೆನ್ನಲ್ಲೇ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಅಂಬಾಟಿ ರಾಯುಡು ಮಾಡಿದ ಟ್ವೀಟ್ ಈಗಲೂ ಸದ್ದು ಮಾಡುತ್ತಿದೆ. ರಾಯುಡು ಬದಲು ವಿಜಯ್ ಶಂಕರ್‌ಗೆ ಅವಕಾಶ ನೀಡಿದಾಗ, ಆಯ್ಕೆಯನ್ನು ಪಶ್ನಿಸಿ ರಾಯುಡು, 3ಡಿ  ಗ್ಲಾಸ್ ಹಾಕಿ ವಿಶ್ವಕಪ್ ಪಂದ್ಯ ನೋಡುವೆ ಎಂದು ಟ್ವೀಟ್ ಮಾಡಿದ್ದರು. ಇದೀಗ ಶಂಕರ್ ಬದಲು ಮಯಾಂಕ್ ಅಗರ್ವಾಲ್‌ಗೆ ಸ್ಥಾನ ನೀಡುತ್ತಿದ್ದಂತೆ ಮತ್ತೆ ರಾಯುಡು 3ಡಿ ಗ್ಲಾಸ್ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಟೀಂ ಇಂಡಿಯಾ ಗೆಲುವಿಗೆ ಅಡ್ಡಿಯಾಗಿದ್ದ ಭಾರತೀಯನನ್ನೇ ತವರಿಗಟ್ಟಿದ ಬುಮ್ರಾ..?

ವಿಜಯ್ ಶಂಕರ್ ಇಂಜುರಿಗೆ ತುತ್ತಾಗುತ್ತಿದ್ದಂತೆ ಅಂಬಾಟಿ ರಾಯುಡು ವಿಶ್ವಕಪ್ ಸ್ಥಾನ ನಿರೀಕ್ಷಿಸಿದ್ದರು. ಆದರೆ ಆಯ್ಕೆ ಸಮಿತಿ ಮಯಾಂಕ್ ಅಗರ್ವಾಲ್‌ಗೆ ಸ್ಥಾನ ನೀಡಿದೆ. ಹೀಗಾಗಿ ರಾಯುಡು ಮತ್ತೆ ಟ್ರೋಲ್ ಆಗಿದ್ದಾರೆ. ಇದರ ಬೆನ್ನಲ್ಲೇ ಐಸ್‌ಲೆಂಡ್ ಕ್ರಿಕೆಟ್, ರಾಯುಡುಗೆ ಪೌರತ್ವ ನೀಡಲು ಮುಂದಾಗಿದೆ. ಮಯಾಂಕ್ ತಂಡ ಸೇರಿಕೊಂಡಿದ್ದಾರೆ. ಮಯಾಂಕ್ ದಾಖಲೆ ನೋಡಿದರೆ, ರಾಯುಡು ಐಸ್‌ಲೆಂಡ್ ಪೌರತ್ವ ಸ್ವೀಕರಿಸಿ, ಐಸ್‌ಲೆಂಡ್ ತಂಡದ ಪರ ಆಡಿದರೆ ಉತ್ತಮ ಎಂದು ಟ್ವೀಟ್ ಮಾಡಿದೆ.

ಮಯಾಂಕ್ ಅಗರ್ವಾಲ್ 3 ವಿಕೆಟ್ ಕೂಡ ಕಬಳಿಸಿದ್ದಾರೆ. ಹೀಗಾಗಿ ರಾಯುಡು 3ಡಿ ಗ್ಲಾಸ್ ಬದಿಗಿರಿಸಿ, ಸಾಮಾನ್ಯ ಕನ್ನಡಕ ಬಳಸಿ ಈ ಡಾಕ್ಯುಟಮೆಂಟ್ ಓದಿ. ಬನ್ನಿ ನಮ್ನನ್ನು ಸೇರಿಕೊಳ್ಳಿ. ನಾವು 'ರಾಯುಡು' ವಿಷಯಗಳನ್ನು ಪ್ರೀತಿಸುತ್ತೇವೆ ಎಂದು ಐಸ್‌ಲೆಂಡ್ ಕ್ರಿಕೆಟ್ ಟ್ವೀಟ್ ಮಾಡಿದೆ. ಟ್ವೀಟ್ ಜೊತೆಗೆ ಐಸ್‍‌ಲೆಂಡ್‌ಗೆ ವರ್ಗಾವಣೆಯಾಗಲು ರಾಯುಡು ಯಾವ ದಾಖಲೆ ಪತ್ರಗಳನ್ನು ಸಲ್ಲಿಸಬೇಕು ಅನ್ನೋ ಡಾಕ್ಯುಮೆಂಟ್ ಕೂಡ ಪೋಸ್ಟ್ ಮಾಡಿದೆ. 

 

ಇದನ್ನೂ ಓದಿ: ಬಾಂಗ್ಲಾ ವಿರುದ್ಧ ಸೆಂಚುರಿ; ದಿಗ್ಗಜನ ದಾಖಲೆ ಸರಿಗಟ್ಟಿದ ರೋಹಿತ್!

ರಾಯುಡು 3ಡಿ ಗ್ಲಾಸ್ ವಿವಾದ:
ವಿಶ್ವಕಪ್ ಟೂರ್ನಿಗೆ ಟೀಂ ಇಂಡಿಯಾ ಆಯ್ಕೆ ಪ್ರಕಟವಾದ ಬೆನ್ನಲ್ಲೇ ರಾಯುಡುಗೆ ನಿರಾಸೆಯಾಗಿತ್ತು. ಅಂಬಾಟಿ ರಾಯುಡು ಬದಲು ವಿಜಯ್ ಶಂಕರ್‌ಗೆ ಸ್ಥಾನ ನೀಡಲಾಗಿತ್ತು. 4ನೇ ಸ್ಥಾನಕ್ಕೆ ತ್ರಿ ಡೈಮೆನ್ಶನ್ ಪ್ಲೇಯರ್ ಅಗತ್ಯವಿತ್ತು. ಹೀಗಾಗಿ ರಾಯುಡು ಬದಲು ಶಂಕರ್‌ಗೆ ಮಣೆಹಾಕಲಾಗಿತ್ತು ಎಂದು ಸುದ್ದಿಗೋಷ್ಢಿ ವೇಳೆ ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್.ಕೆ ಪ್ರಸಾದ್ ಹೇಳಿದ್ದರು.

ಪ್ರಸಾದ್ ಹೇಳಿಕೆ ರಾಯುಡುವನ್ನು ಮತ್ತಷ್ಟು ಕೆರಳಿಸಿತ್ತು. ಹೀಗಾಗಿ ರಾಯುಡು 3ಡಿ ಗ್ಲಾಸ್(ತ್ರಿ ಡೈಮೆನ್ಶನ್) ಖರೀದಿಸಿ ವಿಶ್ವಕಪ್ ಪಂದ್ಯ ನೋಡುವುದಾಗಿ ಟ್ವೀಟ್ ಮಾಡಿದ್ದರು. ಈ ಮೂಲಕ ತಿರುಗೇಟು ನೀಡಿದ್ದರು. ರಾಯುಡು ಟ್ವೀಟ್ ಸಖತ್ ಟ್ರೋಲ್ ಆಗಿತ್ತು. ಟೂರ್ನಿ ನಡುವೆ ವಿಜಯ್ ಶಂಕರ್ ಇಂಜುರಿಯಾದಾಗ, ರಾಯುಡು ಬದಲು ಮಯಾಂಕ್ ಅಗರ್ವಾಲ್‌ಗೆ ಅವಕಾಶ ನೀಡಲಾಯಿತು.  ಈ ವೇಳೆ ಮತ್ತೆ ರಾಯುಡು 3ಡಿ ಗ್ಲಾಸ್ ವಿಚಾರ್ ಟ್ರೋಲ್ ಆಗಿದೆ. ಇದೀಗ ರಾಯುಡು 3ಡಿ ಟ್ವೀಟ್ ಮೂಲವಾಗಿಟ್ಟುಕೊಂಡು ಐಸ್‌ಲೆಂಡ್ ಕ್ರಿಕೆಟ್ ಪರೋಕ್ಷವಾಗಿ ರಾಯುಡು ಕುಟುಕಿದೆ.