ಬೆಂಗಳೂರು[ಜು.08] ವಿಶ್ವಕಪ್ ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಟೀಂ ಇಂಡಿಯಾ ನಿರೀಕ್ಷೆಯಂತೆಯೇ ಸೆಮಿಫೈನಲ್ ಪ್ರವೇಶಿಸಿದೆ. ಇಂಗ್ಲೆಂಡ್ ವಿರುದ್ಧ ಹೊರತುಪಡಿಸಿ ಆಡಿದ ಉಳಿದೆಲ್ಲಾ ತಂಡಗಳ ವಿರುದ್ಧ ವಿರಾಟ್ ಪಡೆ ಜಯಭೇರಿ ಬಾರಿಸಿದೆ. ನ್ಯೂಜಿಲೆಂಡ್ ವಿರುದ್ಧದ ಪಂದ್ಯ ಮಾತ್ರ ಮಳೆಯಿಂದ ರದ್ದಾಗಿತ್ತು.

ವಿಶ್ವಕಪ್ ಫೈನಲ್ ಭವಿಷ್ಯ ನುಡಿದ ಜಾಂಟಿ ರೋಡ್ಸ್

ರೋಹಿತ್ ಶರ್ಮಾ ವಿಶ್ವಕಪ್ ಟೂರ್ನಿಯಲ್ಲಿ ದಾಖಲೆಯ 5 ಶತಕ ಸಿಡಿಸಿದರೆ, ಮೊಹಮ್ಮದ್ ಶಮಿ ಆಫ್ಘಾನಿಸ್ತಾನ ವಿರುದ್ಧ ಹ್ಯಾಟ್ರಿಕ್ ವಿಕೆಟ್ ಕಬಳಿಸಿ ಮಿಂಚಿದ್ದರು. ಇನ್ನು ಜಸ್ಪ್ರೀತ್ ಬುಮ್ರಾ ಬೌಲಿಂಗ್’ನಲ್ಲಿ ಎದುರಾಳಿ ಬ್ಯಾಟ್ಸ್’ಮನ್ ಗಳ ನಿದ್ದೆಗೆಡಿಸುವಲ್ಲಿ ಯಶಸ್ವಿಯಾದರೆ, ನಾಯಕ ವಿರಾಟ್ ಕೊಹ್ಲಿ ಕೂಡಾ ಶತಕ ಸಿಡಿಸದಿದ್ದರೂ ಸ್ಥಿರ ಪ್ರದರ್ಶನ ತೋರುವಲ್ಲಿ ಯಶಸ್ಸು ಕಂಡಿದ್ದಾರೆ. ಇನ್ನು ಶ್ರೀಲಂಕಾ ವಿರುದ್ಧ ಶತಕ ಸಿಡಿಸುವ ಮೂಲಕ ಕನ್ನಡಿಗ ಕೆ.ಎಲ್ ರಾಹುಲ್ ಕೂಡಾ ಫಾರ್ಮ್ ಕಂಡುಕೊಂಡಿರುವುದು ಸೆಮಿಫೈನಲ್’ಗೂ ಮುನ್ನ ಭಾರತ ನಿರಾಳವಾಗಿ ಉಸಿರಾಡುವಂತೆ ಮಾಡಿದೆ.

ಮಳೆಗೆ ವಿಶ್ವಕಪ್ ಸೆಮಿಫೈನಲ್ ಪಂದ್ಯ ರದ್ದಾದರೆ, ಯಾರು ಫೈನಲ್‌ಗೆ?

ಹೀಗಂದ ಮಾತ್ರಕ್ಕೆ ಭಾರತ ಸಂಪೂರ್ಣವಾದ ಬಲಿಷ್ಠ ತಂಡವನ್ನೇ ಹೊಂದಿದೆ ಎಂದು ಹೇಳಲಾಗದು. ಈಗಲೂ ಟೀಂ ಇಂಡಿಯಾದ ನಾಲ್ಕನೇ ಕ್ರಮಾಂಕದ ಸಮಸ್ಯೆ ಸಂಪೂರ್ಣ ಬಗೆಹರಿದಿಲ್ಲ. ಧೋನಿಯಿಂದ ಸ್ಫೋಟಕ ಬ್ಯಾಟಿಂಗ್ ಇನ್ನೂ ಮೂಡಿಬಂದಿಲ್ಲ. ಕೇದಾರ್ ಜಾಧವ್, ದಿನೇಶ್ ಕಾರ್ತಿಕ್ ಹಾಗೂ ರವೀಂದ್ರ ಜಡೇಜಾ ಇವರಲ್ಲಿ ಯಾರು ಸೆಮೀಸ್ ತಂಡದಲ್ಲಿ ಸ್ಥಾನ ಪಡೆಯಬಹುದು ಎನ್ನುವ ಕುತೂಹಲಕ್ಕೆ ಈವರೆಗೂ ಉತ್ತರ ಸಿಕ್ಕಿಲ್ಲ. ಮಣಿಕಟ್ಟು ಸ್ಪಿನ್ನರ್’ಗಳಾದ ಕುಲ್ದೀಪ್ ಯಾದವ್ ಹಾಗೂ ಯುಜುವೇಂದ್ರ ಚಹಲ್ ಅವರಿಂದ ಹೇಳಿಕೊಳ್ಳುವಂತ ಪ್ರದರ್ಶನ ತೋರಿಲ್ಲ. 

ಇಂಡೋ-ಕಿವೀಸ್ ಪಂದ್ಯಕ್ಕೆ ಇಂಗ್ಲೆಂಡ್ ತೀರ್ಪುಗಾರರು

ಟೀಂ ಇಂಡಿಯಾದ ಅಗ್ರ ಕ್ರಮಾಂಕ ಹಾಗೂ ವೇಗಿಗಳ ಪ್ರದರ್ಶನದ ಮೇಲೆ ಲೀಗ್ ಹಂತದ ಫಲಿತಾಂಶಗಳು ನಿರ್ಣಯವಾಗಿವೆ ಎಂದರೆ ಅತಿಶಯೋಕ್ತಿಯಲ್ಲ. ಹೀಗಿರುವಾಗ ಸೆಮಿಫೈನಲ್’ಗೂ ಮುನ್ನ ಟೀಂ ಇಂಡಿಯಾ ಆಟಗಾರರ ವೈಯುಕ್ತಿಕ ಪ್ರದರ್ಶನ ಹೇಗಿದೆ ಎನ್ನುವುದನ್ನು ಸುವರ್ಣನ್ಯೂಸ್.ಕಾಂ ಅಂಕಿ-ಅಂಶಗಳು ಮೂಲಕ ಓದುಗರ ಮುಂದಿಡುತ್ತಿದೆ. ಸೆಮೀಸ್’ನಲ್ಲಿ ಈ 15 ಆಟಗಾರರ ಫೈಕಿ ಆಡುವ ಹನ್ನೊಂದರ ಬಳಗದಲ್ಲಿ ಯಾರಿರಬೇಕು ಎನ್ನುವುದನ್ನು ಕಮೆಂಟ್ ಮಾಡಿ...