’ಭಾರತ ಈಗಾಗಲೇ ವಿಶ್ವಕಪ್ ಫೈನಲ್ ಗೆ ಒಂದು ಹೆಜ್ಜೆ ಇಟ್ಟಾಗಿದೆ‘
ಭಾರತದ ಪ್ರದರ್ಶನಕ್ಕೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮೈಕಲ್ ಕ್ಲಾರ್ಕ್ ಫಿದಾ ಆಗಿದ್ದು, ಭಾರತ ಈಗಾಗಲೇ ವಿಶ್ವಕಪ್ ಟೂರ್ನಿಯಲ್ಲಿ ಫೈನಲ್’ಗೆ ಒಂದು ಹೆಜ್ಜೆ ಇಟ್ಟಾಗಿದೆ ಎಂದು ಹೇಳಿದ್ದಾರೆ. ಯಾಕೆ ಹೀಗೆ ಹೇಳಿದ್ದು ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ...
ಮ್ಯಾಂಚೆಸ್ಟರ್[ಜು.09]: ಭಾರತ ಸೆಮಿಫೈನಲ್’ನಲ್ಲಿ ನ್ಯೂಜಿಲೆಂಡ್ ತಂಡವನ್ನು ಅನಾಯಾಸವಾಗಿ ಮಣಿಸಲಿದ್ದು, ವಿಶ್ವಕಪ್ ಫೈನಲ್’ಗೆ ವಿರಾಟ್ ಪಡೆ ಈಗಾಗಲೇ ಒಂದು ಹೆಜ್ಜೆ ಇಟ್ಟಾಗಿದೆ ಎಂದು ಆಸ್ಟ್ರೇಲಿಯಾ ಮಾಜಿ ನಾಯಕ ಮೈಕಲ್ ಕ್ಲಾರ್ಕ್ ಅಭಿಪ್ರಾಯಪಟ್ಟಿದ್ದಾರೆ.
ನ್ಯೂಜಿಲೆಂಡ್ ವಿರುದ್ಧ ಟೀಂ ಇಂಡಿಯಾ ಆಯ್ಕೆಗೆ ಫ್ಯಾನ್ಸ್ ಗರಂ!
ಭಾರತ ತವರಿನಾಚೆಗೂ ಅದ್ಭುತ ಪ್ರದರ್ಶನ ತೋರುತ್ತಾ ಬಂದಿದೆ. ಪ್ರಸ್ತುತ ವಿಶ್ವಕಪ್ ಟೂರ್ನಿಯಲ್ಲಿ ಕೂಡಾ ಟೀಂ ಇಂಡಿಯಾ ಅಮೋಘ ಪ್ರದರ್ಶನ ಮುಂದುವರೆಸಿದೆ. ನನ್ನ ಪ್ರಕಾರ ಈಗಾಗಲೇ ವಿಶ್ವಕಪ್ ಫೈನಲ್’ಗೆ ಭಾರತ ಒಂದು ಹೆಜ್ಜೆ ಇಟ್ಟಾಗಿದೆ ಎಂದು ಕ್ಲಾರ್ಕ್ ಹೇಳಿದ್ದಾರೆ.
ಶಮಿಗೆ ಮತ್ತೆ ವಿಶ್ರಾಂತಿ; ಕೊಹ್ಲಿ ಕೋಪಕ್ಕೆ ತುತ್ತಾದ್ರಾ ಭಾರತದ ವೇಗಿ?
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವಕಪ್ ಟೂರ್ನಿಯ ಲೀಗ್ ಹಂತದಲ್ಲಿ ಆಡಿದ 8 ಪಂದ್ಯಗಳಲ್ಲಿ ಏಳರಲ್ಲಿ ಜಯಭೇರಿ ಬಾರಿಸಿತ್ತು. ಇಂಗ್ಲೆಂಡ್ ವಿರುದ್ಧ ಮಾತ್ರ ಸೋತಿದ್ದ ಟೀಂ ಇಂಡಿಯಾ, ನ್ಯೂಜಿಲೆಂಡ್ ಎದುರಿನ ಪಂದ್ಯ ಒಂದೂ ಎಸೆತ ಕಾಣದೇ ರದ್ದಾಗಿತ್ತು. ಹೀಗಾಗಿ ಭಾರತ ಅಂಕಪಟ್ಟಿಯಲ್ಲಿ ಅಗ್ರಸ್ಥಾನದೊಂದಿಗೆ ಸೆಮಿಫೈನಲ್ ಪ್ರವೇಶಿಸಿತ್ತು. ಭಾರತ ತಂಡವು ಬಾಂಗ್ಲಾದೇಶ, ಶ್ರೀಲಂಕಾ ವಿರುದ್ಧ ಗೆದ್ದು ಸೆಮೀಸ್ ಪ್ರವೇಶಿಸಿದ್ದರೆ, ನ್ಯೂಜಿಲೆಂಡ್ ತಂಡವು ಪಾಕಿಸ್ತಾನ, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ವಿರುದ್ಧ ಸೋತರೂ ರನ್ ರೇಟ್ ಆಧಾರದಲ್ಲಿ ನಾಲ್ಕನೇ ತಂಡವಾಗಿ ಸೆಮೀಸ್’ಗೆ ಲಗ್ಗೆಯಿಟ್ಟಿತ್ತು.