ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯಕ್ಕೆ ಮೊಹಮ್ಮದ್ ಶಮಿಗೆ ವಿಶ್ರಾಂತಿ ನೀಡಲಾಗಿದೆ. ಶಮಿಗೆ ವಿಶ್ರಾಂತಿ ಹಿಂದೆ ನಾಯಕ ವಿರಾಟ್ ಕೊಹ್ಲಿ ಕೋಪವೇ ಕಾರಣ ಅನ್ನೋ ಮಾತು ಕೇಳಿಬಂದಿದೆ.
ಮ್ಯಾಂಚೆಸ್ಟರ್(ಜು.09): ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಸೆಮಿಫೈನಲ್ ಪಂದ್ಯದ ಆರಂಭದಲ್ಲೇ ಟೀಂ ಇಂಡಿಯಾ ಅಭಿಮಾನಿಗಳಿಗೆ ನಿರಾಸೆಯಾಗಿದೆ. ಟಾಸ್ ಸೋತ ನಿರಾಸೆ ಬೆನ್ನಲ್ಲೇ ತಂಡದ ಬದಲಾವಣೆ ಕೂಡ ಅಭಿಮಾನಿಗಳ ಬೇಸರಕ್ಕೆ ಕಾರಣವಾಗಿದೆ. ಕಾರಣ ತಂಡದಲ್ಲಿ ಕುಲ್ದೀಪ್ ಯಾದವ್ ಬದಲು ಯಜುವೇಂದ್ರ ಚಹಾಲ್‌ಗೆ ಅವಕಾಶ ನೀಡಲಾಗಿತ್ತು. ಆದರೆ ಮೊಹಮ್ಮದ್ ಶಮಿಗೆ ಅವಕಾಶ ನೀಡಿಲ್ಲ. ಇದು ಹಲವು ಅನುಮಾನಗಳಿಗೂ ಕಾರಣವಾಗಿದೆ.
ಇದನ್ನೂ ಓದಿ: ಸಚಿನ್ ಅಪರೂಪದ ದಾಖಲೆ ಮುರಿಯಲು ರೋಹಿತ್‌ಗೆ ಬೇಕು 27 ರನ್!
ಭುವನೇಶ್ವರ್ ಕುಮಾರ್ ಇಂಜುರಿಯಿಂದ ತಂಡ ಸೇರಿಕೊಂಡ ಮೊಹಮ್ಮದ್ ಶಮಿ ಅದ್ಭುತ ಪ್ರದರ್ಶನದ ಮೂಲಕ 14 ವಿಕೆಟ್ ಕಬಳಿಸಿದ್ದರು. ಆದರೆ ಕಳೆದ ಪಂದ್ಯದಲ್ಲಿ ಶಮಿಗೆ ವಿಶ್ರಾಂತಿ ನೀಡಲಾಗಿತ್ತು. ಆಗಲೇ ಕೊಹ್ಲಿ ನಿರ್ಧಾರಕ್ಕೆ ಅಪಸ್ವರ ಕೇಳಿಬಂದಿತ್ತು. ಆದರೆ ಲೀಗ್ ಹಂತದ ಕೊನೆಯ ಪಂದ್ಯವಾದ ಕಾರಣ ಯಾರೂ ಕೂಡ ತಲೆಕೆಡಿಸಿಕೊಂಡಿರಲಿಲ್ಲ. ಇದೀಗ ಮಹತ್ವದ ಸೆಮಿಫೈನಲ್ ಪಂದ್ಯಕ್ಕೆ ಶಮಿಗೆ ವಿಶ್ರಾಂತಿ ನೀಡಿರುವುದು ಸರಿಯಲ್ಲ ಅನ್ನೋ ವಾದ ಎದ್ದಿದೆ. ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ವೇಗಿ ಶಮಿ, ವಿರಾಟ್ ಕೊಹ್ಲಿ ಕೋಪಕ್ಕೆ ತುತ್ತಾಗಿದ್ದರು. ಇದೇ ಕಾರಣದಿಂದ ಶಮಿಗೆ ವಿಶ್ರಾಂತಿ ನೀಡಲಾಗಿದೆ ಅನ್ನೋ ಮಾತು ಕೇಳಿಬಂದಿದೆ.
ಇದನ್ನೂ ಓದಿ: ಶಮಿ ವಿಶ್ರಾಂತಿ ಹಿಂದೆ ಬಿಜೆಪಿ ಕೈವಾಡ; ಪಾಕ್ ವಿಶ್ಲೇಷಕನಿಂದ ವಿವಾದ!
ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದ್ದರು. ಆದರೆ ಫೀಲ್ಡಿಂಗ್ ವೇಳೆ ಮಾಡಿದ ಸಣ್ಣ ತಪ್ಪು ಕೊಹ್ಲಿ ಪಿತ್ತ ನೆತ್ತಿಗೇರಿಸಿತು. ಲಿಟ್ಟನ್ ದಾಸ್ ರನ್‌ಗಾಗಿ ಓಡಿದ ಸಂದರ್ಭದಲ್ಲಿ ಜಸ್ಪ್ರೀತ್ ಬುಮ್ರಾ ರನೌಟ್‌ಗಾಗಿ ಥ್ರೋ ಮಾಡಿದ್ದರು. ಆದರೆ ಫೀಲ್ಡಿಂಗ್‌ನಲ್ಲಿದ್ದ ಮೊಹಮ್ಮದ್ ಶಮಿ ಬ್ಯಾಕಪ್ ಮಾಡದ ಕಾರಣ ಹೆಚ್ಚುವರಿ ರನ್ ನೀಡಿದರು. ಇದಕ್ಕೆ ಕೊಹ್ಲಿ ಆಕ್ರೋಶ ವ್ಯಕ್ತಪಡಿಸಿದ್ದರು. ಅಲ್ಲಿ ಮಲಗಿದ್ದಿಯಾ ಎಂದು ಕೊಹ್ಲಿ ಕೋಪ ವ್ಯಕ್ತಪಡಿಸಿದ್ದರು.
ಶಮಿ ಫೀಲ್ಡಿಂಗ್ ನಿರ್ವಹಣೆ ಕುರಿತು ನಾಯಕ ವಿರಾಟ್ ಕೊಹ್ಲಿಗೆ ಅಸಮಧಾನವಿದೆ. ಫೀಲ್ಡಿಂಗ್ ಕಾರಣದಿಂದಲೇ ಶಮಿಗೆ ವಿಶ್ರಾಂತಿ ನೀಡಿದ್ದಾರೆ ಅನ್ನೋ ಮಾತು ಬಲವಾಗಿ ಕೇಳಿಬರುತ್ತಿದೆ.
