Asianet Suvarna News Asianet Suvarna News

ವಿಶ್ವಕಪ್ 2019: ಯಾರಿಗೆ ಯಾರು ಸೆಮೀಸ್ ಎದುರಾಳಿ?

ವಿಶ್ವಕಪ್ ಟೂರ್ನಿಯ ಕೊನೆಯ ಲೀಗ್ ಪಂದ್ಯವಳಿಯಲ್ಲಿಂದು ಭಾರತ-ಶ್ರೀಲಂಕಾ ಹಾಗೂ ಆಸ್ಟ್ರೇಲಿಯಾ-ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿವೆ. ಈ ಎರಡು ಪಂದ್ಯಗಳಲ್ಲಿ ಯಾರು ಗೆದ್ದರೆ ಅಂತಿಮ ನಾಲ್ಕರಘಟ್ಟದಲ್ಲಿ ಕಾದಾಡಲಿದ್ದಾರೆ ಎನ್ನುವುದು ಸ್ಪಷ್ಟವಾಗಲಿದೆ. ಈ ಪಂದ್ಯಗಳ ಮೇಲಿನ ಲೆಕ್ಕಾಚಾರ ಇಲ್ಲಿದೆ ನೋಡಿ...  

World Cup 2019 Semi Final saga Australia vs New Zealand Indian vs England may fight in Knockouts
Author
London, First Published Jul 6, 2019, 9:52 AM IST
  • Facebook
  • Twitter
  • Whatsapp

ಲೀಡ್ಸ್(ಜು.06): ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಭಾರತಕ್ಕೆ ಸೆಮಿಫೈನಲ್ ಎದುರಾಳಿ ಯಾರು ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ. ಯಾರ ವಿರುದ್ಧ ಯಾರು ಆಡಲಿದ್ದಾರೆ ಎನ್ನುವುದು ಇನ್ನೂ ಇತ್ಯರ್ಥವಾಗಿಲ್ಲ. 

ವಿಶ್ವಕಪ್ ಸೆಮೀಸ್‌ನಲ್ಲಿ ಟಾಪ್ 4 ತಂಡಗಳ ಸೆಣಸಾಟ

ಶನಿವಾರ ತನ್ನ ಅಂತಿಮ ಪಂದ್ಯದಲ್ಲಿ ಆಸ್ಟ್ರೇಲಿಯಾ, ದ.ಆಫ್ರಿಕಾವನ್ನು ಎದುರಿಸಿದರೆ, ಭಾರತ, ಶ್ರೀಲಂಕಾ ಎದುರು ಸೆಣಸಲಿದೆ. ಈಗಾಗಲೇ ಅಂಕಪಟ್ಟಿಯಲ್ಲಿ 3  ಹಾಗೂ 4ನೇ ಸ್ಥಾನದಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್ ಸ್ಥಾನ ಪಡೆದಿದೆ. ಮೊದಲ 2 ಸ್ಥಾನಗಳಿಗಾಗಿ ಭಾರತ ಹಾಗೂ ಆಸೀಸ್ ನಡುವೆ ಪೈಪೋಟಿ ಏರ್ಪಟ್ಟಿದೆ. ರೌಂಡ್ ರಾಬಿನ್ ಮುಕ್ತಾಯಕ್ಕೆ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದ ತಂಡ, 4ನೇ ಸ್ಥಾನ ಪಡೆದ ತಂಡದ ಎದುರು ಸೆಣಸಲಿದೆ. 2 ಹಾಗೂ 3ನೇ ಸ್ಥಾನ ಪಡೆದ ತಂಡಗಳು ಎದುರಾಗಲಿವೆ.

7 ರನ್ ಗಡಿ ದಾಟಿದ ಬಾಂಗ್ಲಾದೇಶ- ಪಾಕಿಸ್ತಾನ ಟೂರ್ನಿಯಿಂದ ಔಟ್!

ಇಲ್ಲಿದೆ ನೋಡಿ ಸೆಮೀಸ್ ಕಂಪ್ಲೀಟ್ ಲೆಕ್ಕಾಚಾರ...

* 14 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿರುವ ಆಸ್ಟ್ರೇಲಿಯಾ, ದಕ್ಷಿಣ ಆಫ್ರಿಕಾ ವಿರುದ್ಧ ಸೋತು, ಮತ್ತೊಂದು ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತ ಗೆದ್ದರೇ 15 ಅಂಕಗಳೊಂದಿಗೆ ಭಾರತ ಮೊದಲ ಸ್ಥಾನಕ್ಕೇರಲಿದೆ. ಆಗ ಭಾರತ 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಎದುರು ಸೆಣಸಲಿದೆ. 

* 13 ಅಂಕಗಳೊಂದಿಗೆ 2ನೇ ಸ್ಥಾನದಲ್ಲಿರುವ ಭಾರತ, ಲಂಕಾ ವಿರುದ್ಧ ಸೋತರೂ/ ಗೆದ್ದರೂ, ಆಸೀಸ್ ದ. ಆಫ್ರಿಕಾ ವಿರುದ್ಧ ಜಯಿಸಿದರೇ 16 ಅಂಕಗಳೊಂದಿಗೆ ಅಗ್ರಸ್ಥಾನದಲ್ಲಿರಲಿದೆ. ಆಗ ಆಸೀಸ್ 4ನೇ ಸ್ಥಾನಿ ನ್ಯೂಜಿಲೆಂಡ್ ಎದುರು ಸೆಣಸಲಿದೆ. ಭಾರತ, 3ನೇ ಸ್ಥಾನಿ ಇಂಗ್ಲೆಂಡ್ ವಿರುದ್ಧ ಕಾದಾಟ ನಡೆಸಲಿದೆ. 

* ಒಂದೊಮ್ಮೆ ಆಸ್ಟ್ರೇಲಿಯಾ ದ.ಆಫ್ರಿಕಾ ವಿರುದ್ಧ ಸೋತು, ಭಾರತ, ಶ್ರೀಲಂಕಾ ಎದುರು ಸೋತರೇ 2ನೇ ಸಾಧ್ಯತೆಯಂತೆ ಆಸೀಸ್, ನ್ಯೂಜಿಲೆಂಡ್ ಎದುರು, ಭಾರತ, ಇಂಗ್ಲೆಂಡ್ ವಿರುದ್ಧ ಸೆಣಸಲಿದೆ.

Follow Us:
Download App:
  • android
  • ios