ಬಾಂಗ್ಲಾ ವಿರುದ್ಧ ಗೆಲುವು; ವಿಶ್ವಕಪ್ ಟೂರ್ನಿಗೆ ಪಾಕಿಸ್ತಾನ ಗುಡ್ ಬೈ!
ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ರನ್ ರೇಟ್ ಕೊರತೆಯಿಂದ ಟೂರ್ನಿಯಿಂದ ಹೊರಬಿದ್ದಿದೆ. ಬಾಂಗ್ಲಾದೇಶ ವಿರುದ್ಧ 94 ರನ್ ಗೆಲುವು ಸಾಧಿಸಿ 11 ಅಂಕ ಸಂಪಾದಿಸಿರುವ ಪಾಕಿಸ್ತಾನ ಇದೀಗ ಟೂರ್ನಿಗೆ ಗುಡ್ ಬೈ ಹೇಳಿದೆ. ಇತ್ತ ಬಾಂಗ್ಲಾದೇಶ ಸೋಲಿನೊಂದಿಗೆ 7ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
ಲಾರ್ಡ್ಸ್(ಜು.05): ಬಾಂಗ್ಲಾದೇಶ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಪಾಕಿಸ್ತಾನ 94 ರನ್ ಭರ್ಜರಿ ಗೆಲುವು ಸಾಧಿಸಿದೆ. ಆದರೆ ರನ್ ರೇಟ್ ಕೊರತೆಯಿಂದ ಪಾಕಿಸ್ತಾನ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದೆ. ನ್ಯೂಜಿಲೆಂಡ್ ಹಾಗೂ ಪಾಕಿಸ್ತಾನ ತಲಾ 11 ಅಂಕ ಸಂಪಾದಿಸಿದೆ. ಉತ್ತಮ ರನ್ ರೇಟ್ ಹೊಂದಿರುವ ನ್ಯೂಜಿಲೆಂಡ್ ಸೆಮಿಫೈನಲ್ ಅರ್ಹತೆ ಗಿಟ್ಟಿಸಿಕೊಂಡಿದ್ದರೆ, ಪಾಕಿಸ್ತಾನ ಟೂರ್ನಿಗೆ ಗುಡ್ ಬೈ ಹೇಳಿತು. 9 ಪಂದ್ಯದಲ್ಲಿ 3 ಗೆಲುವು ಸಾಧಿಸಿದ ಬಾಂಗ್ಲಾದೇಶ ಸೋಲಿನೊಂದಿಗೆ ಟೂರ್ನಿಗೆ ವಿದಾಯ ಹೇಳಿತು.
ಗೆಲುವಿಗೆ 316 ರನ್ ಬೃಹತ್ ಟಾರ್ಗೆಟ್ ಪಡೆದ ಬಾಂಗ್ಲಾದೇಶ 7 ರನ್ ಸಿಡಿಸುತ್ತಿದ್ದಂತೆ ಪಾಕಿಸ್ತಾನ ಅಧೀಕೃತವಾಗಿ ವಿಶ್ವಕಪ್ ಸೆಮಿಫೈನಲ್ ಟೂರ್ನಿಯಿಂದ ಹೊರಬಿದ್ದಿತು. ಕಾರಣ ಬಾಂಗ್ಲಾದೇಶವನ್ನು 7 ರನ್‌ಗೆ ಆಲೌಟ್ ಮಾಡಿದರೆ ಪಾಕಿಸ್ತಾನಕ್ಕೆ ಸೆಮಿಫೈನಲ್ ಪ್ರವೇಶಿಸೋ ಅವಕಾಶವೊಂದಿತ್ತು. ಆದರೆ ಇದು ಅಸಾಧ್ಯವಾದ ಸವಾಲಾಗಿತ್ತು. ದಿಟ್ಟ ಹೋರಾಟ ನೀಡೋ ಸೂಚನೆ ನೀಡಿದ ಬಾಂಗ್ಲಾ ಆರಂಭದಲ್ಲೇ ಸೌಮ್ಯ ಸರ್ಕಾರ್ ವಿಕೆಟ್ ಪತನಗೊಂಡಿತು. ಸರ್ಕಾರ್ 22 ರನ್ ಸಿಡಿಸಿ ಔಟಾದರು.
ಸರ್ಕಾರ್ ಬೆನ್ನಲ್ಲೇ ತಮೀಮ್ ಇಕ್ಬಾಲ್ 8 ರನ್ ಸಿಡಿಸಿ ನಿರ್ಗಮಿಸಿದರು. ಎಂದಿನಂತೆ ಶಕೀಬ್ ಅಲ್ ಹಸನ್ ಹೋರಾಟ ಮುಂದುವರಿಸಿದರು. ಮುಶ್ಫಿಕರ್ ರಹೀಮ್ 16 ರನ್ ಸಿಡಿಸಿ ಪೆವಿಲಿಯನ್ ಸೇರಿಕೊಂಡರು. ಶಕೀಬ್ ಹಾಗೂ ಲಿಟ್ಟನ್ ದಾಸ್ ಜೊತೆಯಾಟದಿಂದ ಬಾಂಗ್ಲಾ ಚೇತರಿಸಿಕೊಂಡಿತು. ಆದರೆ ಲಿಟ್ಟನ್ ದಾಸ್ 32 ರನ್ ಸಿಡಿಸಿ ಔಟಾದರು.
ಹಾಫ್ ಸೆಂಚುರಿ ಸಿಡಿಸಿದ ನೆರವಾಗಿದ್ದ ಶಕೀಬ್ 64 ರನ್ ಗಳಿಸಿ ಔಟಾದರು. ಮೊಸಾದೆಕ್ ಹುಸೈನ್ ಹಾಗೂ ಮೊಹಮ್ಮದ್ ಸೈಫುದ್ದೀನ್ ಅಬ್ಬರಿಸಲಿಲ್ಲ. ಮೊಹಮ್ಮದುಲ್ಲಾ 29 ರನ್ ಕಾಣಿಕೆ ನೀಡಿದರು. ಮುಸ್ತಾಫಿಜುರ್ ರಹಮಾನ್ ವಿಕೆಟ್ ಪತನದೊಂದಿಗೆ ಬಾಂಗ್ಲಾದೇಶ 44.1 ಓವರ್‌ಗಳಲ್ಲಿ 221 ರನ್‌ಗೆ ಆಲೌಟ್ ಆಯಿತು. ಈ ಮೂಲಕ ಪಾಕಿಸ್ತಾನ 94 ರನ್ ಗೆಲುವು ಸಾಧಿಸಿತು.
ಪಾಕಿಸ್ತಾನ ಹಿರಿಯ ಕ್ರಿಕೆಟಿಗ ಶೋಯಿಬ್ ಮಲ್ಲಿಕ್‌ಗೆ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದರು. ಇತ್ತ ಬಾಂಗ್ಲಾದೇಶ ಆಲ್ರೌಂಡರ್ ಶಕೀಬ್ ಅಲ್ ಹಸನ್ 606 ರನ್ ಹಾಗೂ 11 ವಿಕೆಟ್ ಕಬಳಿಸಿ ಕರಿಯರ್ ಬೆಸ್ಟ್ ಪ್ರದರ್ಶನ ನೀಡಿದರು. ಈ ಪಂದ್ಯದೊಂದಿಗೆ ಉಭಯ ತಂಡಗಳ ವಿಶ್ವಕಪ್ ಹೋರಾಟ ಅಂತ್ಯಗೊಂಡಿತು.