ಭಾರತ ವಿರುದ್ಧದ ಸೋಲು ಕಾಣುತ್ತಿದ್ದಂತೆ ಪಾಕಿಸ್ತಾನ ತಂಡಕ್ಕೆ ಟೀಕೆಗಳ ಸರಮಾಲೆಯನ್ನೇ ಎದುರಿಸುತ್ತಿದೆ. ಇದೀಗ ಪಾಕಿಸ್ತಾನ ಅಭಿಮಾನಿಯೋರ್ವ ತಂಡದ ಕಳಪೆ ಪ್ರದರ್ಶನಕ್ಕೆ ಗಳಗಳನೆ ಅತ್ತಿದ್ದಾನೆ. ಇಷ್ಟೇ ಅಲ್ಲ ಆಕ್ರೋಶ ವ್ಯಕ್ತಪಡಿಸಿದ್ದಾನೆ. 

ಮ್ಯಾಂಚೆಸ್ಟರ್(ಜೂ.17): ವಿಶ್ವಕಪ್ ಟೂರ್ನಿಯಲ್ಲಿ ಭಾರತ ವಿರುದ್ದ ಸೋಲು ಕಂಡಿರುವ ಪಾಕಿಸ್ತಾನ ಇದೀಗ ಟೀಕೆಗೆ ಗುರಿಯಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ಸತತ 7ನೇ ಬಾರಿಗೆ ಭಾರತಕ್ಕೆ ಶರಣಾಗಿರುವ ಪಾಕ್ ವಿರುದ್ದ ಅಭಿಮಾನಿಗಳು ರೊಚ್ಚಿಗೆದ್ದಿದ್ದಾರೆ. ಪಂದ್ಯ ಬಳಿಕ ಪಾಕ್ ಅಭಿಮಾನಿಯೋರ್ವ ಪಾಕ್ ತಂಡಕ್ಕೆ ಬೈಗುಳದ ಸುರಿಮಳೆಗೈದಿದ್ದಾರೆ.

ಇದನ್ನೂ ಓದಿ: ಪಾಕ್ ಬಗ್ಗುಬಡಿದ ಟೀಂ ಇಂಡಿಯಾ; ಜೈ ಹೋ ಎಂದ ಕ್ರಿಕೆಟಿಗರು..!

ಎಲ್ಲಾ ಕೆಲಸ ಬಿಟ್ಟು ಪಾಕ್ ತಂಡವನ್ನು ಬೆಂಬಲಿಸಲು ಕ್ರೀಡಾಂಗಣಕ್ಕೆ ಆಗಮಿಸುತ್ತೇವೆ. ಆದರೆ ಪಾಕ್ ಕ್ರಿಕೆಟಿಗರು ಬರ್ಗರ್, ಪಿಝಾ ತಿಂದು ಯಾವುದೇ ಫಿಟ್ನೆಸ್ ಇಲ್ಲದೆ, ಫಾರ್ಮ್ ಇಲ್ಲದೆ ಕಣಕ್ಕಿಳಿಯುತ್ತಿದ್ದಾರೆ. ಇವರು ವಿಶ್ವಕಪ್ ಟೂರ್ನಿಯನ್ನು ಗಂಭೀರವಾಗಿ ಪರಿಗಣಿಸಿಲ್ಲ ಎಂದು ಪಾಕ್ ಅಭಿಮಾನಿ ಆಕ್ರೋಶ ವ್ಯಕ್ತಪಡಿಸಿದ್ದಾನೆ.

Scroll to load tweet…

ಇದನ್ನೂ ಓದಿ: ಪಾಕ್ ಮೇಲೆ ಇದು ಇನ್ನೊಂದು ಸ್ಟ್ರೈಕ್ ಎಂದ ಅಮಿತ್ ಶಾ

1992ರಿಂದ ಇಲ್ಲೀವರೆಗೆ ಭಾರತ ವಿರುದ್ಧ ಕನಿಷ್ಠ ಹೋರಾಟ ನೀಡಲು ಪಾಕ್ ತಂಡಕ್ಕೆ ಸಾಧ್ಯವಾಗುತ್ತಿಲ್ಲ. 1992ರಿಂದ ಇಲ್ಲೀವರೆಗೆ ಹಲವು ಬದಲಾವಣೆಗಳಾಗಿವೆ. ಆದರೆ ಪಾಕಿಸ್ತಾನ ತಂಡ ಮಾತ್ರ ಭಾರತ ವಿರುದ್ಧ ಸೋಲುವುದು ಬದಲಾಗಿಲ್ಲ ಎಂದು ಪಾಕ್ ಅಭಿಮಾನಿ ಅಳಲು ತೋಡಿಕೊಂಡಿದ್ದಾನೆ. ಪಾಕ್ ಪ್ರದರ್ಶವನ್ನು ಟೀಕಿಸಿದ ಅಭಿಮಾನಿ ಗಳಗಳನೆ ಅತ್ತಿದ್ದಾನೆ. 

Scroll to load tweet…
Scroll to load tweet…