ನವದೆಹಲಿ[ಜೂ.17]: ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ ತಂಡಕ್ಕೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿದೆ. ಕೇಂದ್ರ ಗೃಹ ಸಚಿವ ಅಮಿತ್‌ ಶಾ, ತಮ್ಮ ಅಧಿಕೃತ ಟ್ವೀಟರ್‌ ಖಾತೆ ಮೂಲಕ ವಿರಾಟ್‌ ಕೊಹ್ಲಿ ಪಡೆಯ ಗೆಲುವನ್ನು ಕೊಂಡಾಡಿದ್ದಾರೆ. 

ಪ್ರಧಾನಿಯ ಮಾತನ್ನೇ ಕಡೆಗಣಿಸಿದ ಪಾಕ್ ಕ್ರಿಕೆಟಿಗರು!

‘ಪಾಕಿಸ್ತಾನದ ಮೇಲೆ ಇದು ಮತ್ತೊಂದು ಸ್ಟ್ರೈಕ್‌ ಹಾಗೂ ಫಲಿತಾಂಶ ನಿರೀಕ್ಷಿಸಿದಂತೆಯೇ ಬಂದಿದೆ. ಇಡೀ ತಂಡಕ್ಕೆ ಅಭಿನಂದನೆಗಳು. ಭಾರತದ ಪ್ರತಿಯೊಬ್ಬರೂ ಹೆಮ್ಮೆ ಪಡುತ್ತಿದ್ದು, ಈ ಅದ್ಭುತ ಗೆಲುವನ್ನು ಸಂಭ್ರಮಿಸುತ್ತಿದ್ದಾರೆ’ ಎಂದು ಶಾ ಟ್ವೀಟ್‌ ಮಾಡಿದ್ದಾರೆ. ಸಿನಿಮಾ ತಾರೆಯರು, ರಾಜಕೀಯ ನಾಯಕರು, ಖ್ಯಾತ ಉದ್ಯಮಿಗಳು ಸೇರಿದಂತೆ ಕೋಟ್ಯಂತರ ಅಭಿಮಾನಿಗಳು ಸಾಮಾಜಿಕ ತಾಣಗಳಲ್ಲಿ ಭಾರತ ತಂಡಕ್ಕೆ ಅಭಿನಂದನೆ ಸಲ್ಲಿಸಿದ್ದಾರೆ.

ಬದ್ಧವೈರಿ ಪಾಕ್ ಮಣಿಸಿ ಸೇಡು ತೀರಿಸಿಕೊಂಡ ಭಾರತ!

ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ ನಿಗದಿತ 50 ಓವರ್’ಗಳಲ್ಲಿ 336 ರನ್ ಬಾರಿಸಿತ್ತು. ಮಳೆಯ ಕಾರಣದಿಂದಾಗಿ ಪಾಕಿಸ್ತಾನ ತಂಡಕ್ಕೆ ಗೆಲ್ಲಲು 40 ಓವರ್’ಗಳಲ್ಲಿ 302 ರನ್’ಗಳ ಗುರಿ ನೀಡಲಾಗಿತ್ತು. ಆದರೆ ಪಾಕ್ ಕೇವಲ 212 ರನ್ ಬಾರಿಸಲಷ್ಟೇ ಶಕ್ತವಾಯಿತು. ಹೀಗಾಗಿ ಪಾಕ್ 89 ರನ್’ಗಳಿಂದ ಸೋಲೊಪ್ಪಿಕೊಂಡಿತು.