ಬರ್ಮಿಂಗ್‌ಹ್ಯಾಮ್(ಜು.07): ವಿಶ್ವಕಪ್ ಟೂರ್ನಿಯ ಸೆಮಿಫೈನಲ್ ಪಂದ್ಯಕ್ಕೆ ಭಾರತ, ನ್ಯೂಜಿಲೆಂಡ್, ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ತಂಡ ಸಜ್ಜಾಗಿದೆ. ಮೊದಲ ಪಂದ್ಯಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಹೋರಾಟ ನಡೆಸಲಿವೆ. ಇನ್ನು 2ನೇ ,ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಮುಖಾಮುಖಿಯಾಗಲಿವೆ. ಆದರೆ ಸೆಮೀಸ್ ಹೋರಾಟಕ್ಕೂ ಮುನ್ನ ಆಸ್ಟ್ರೇಲಿಯಾ ತಂಡಕ್ಕೆ ಮತ್ತೊಂದು ಹೊಡೆತ ಬಿದ್ದಿದೆ. 

ಇದನ್ನೂ ಓದಿ: ಸೆಮಿಫೈನಲ್ ಪಂದ್ಯಕ್ಕೂ ಮುನ್ನ ಆಸೀಸ್ ಮೈಂಡ್ ಗೇಮ್ ಶುರು!

ಮಹತ್ವದ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾಗೆ ಮತ್ತೆ ಇಂಜುರಿ ಸಮಸ್ಯೆ ಎದುರಾಗಿದೆ. ಸೌತ್ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಂಜುರಿಗೆ ತುತ್ತಾಗಿದ್ದ ಆಸೀಸ್ ಆರಂಭಿಕ ಬ್ಯಾಟ್ಸ್‌ಮನ್ ಉಸ್ಮಾನ್ ಖವಾಜ ವಿಶ್ವಕಪ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇಂಜುರಿ ಕಾರಣದಿಂದ ಮುಂದಿನ ವಿಶ್ವಕಪ್ ಪಂದ್ಯಕ್ಕೆ ಖವಾಜ ಲಭ್ಯರಿಲ್ಲ ಎಂದು ಕೋಚ್ ಜಸ್ಟಿನ್ ಲ್ಯಾಂಗರ್ ಹೇಳಿದರು.

ಇದನ್ನೂ ಓದಿ: ಪಿಸಿಬಿ ಅಂಗಳದಲ್ಲಿ ಚೆಂಡು-ಪಾಕಿಸ್ತಾನ ತಂಡಕ್ಕೆ ಸರ್ಜರಿ?

ಇಂಜುರಿಯಿಂದಾಗಿ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶಾನ್ ಮಾರ್ಶ್ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಇದರ ಬೆನ್ನಲ್ಲೇ ಖವಾಜ ಕೂಡ ಗಾಯಕ್ಕೆ ತುತ್ತಾಗಿರುವುದು ಆಸ್ಟ್ರೇಲಿಯಾ ಚಿಂತೆ ಹೆಚ್ಚಿಸಿದೆ. ಜುಲೈ 11 ರಂದು ನಡೆಯಲಿರುವ 2ನೆ ಸೆಮಿಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಹಾಗೂ ಇಂಗ್ಲೆಂಡ್ ಹೋರಾಟ ನಡೆಸಲಿದೆ.