ಶ್ರೀಲಂಕಾ ವಿರುದ್ಧದ ವಿಶ್ವಕಪ್ ಲೀಗ್ ಪಂದ್ಯದಲ್ಲಿ ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾ ಜೋಡಿ ದಾಖಲೆ ಬರೆದಿದ್ದಾರೆ. ಈ ಮೂಲಕ ನಯನ್ ಮೊಂಗಿಯಾ ಹಾಗೂ ವೆಂಕಟೇಶ್ ಪ್ರಸಾದ್ ಅಪರೂಪದ ದಾಖಲೆಯನ್ನ ಮುರಿದಿದೆ.

ಲೀಡ್ಸ್(ಜು.06): ವಿಶ್ವಕಪ್ ಟೂರ್ನಿಯ ಅಂತಿಮ ಲೀಗ್ ಪಂದ್ಯದಲ್ಲಿ ಟೀಂ ಇಂಡಿಯಾ 7 ವಿಕೆಟ್ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಎಂ.ಎಸ್.ಧೋನಿ ಹಾಗೂ ರವೀಂದ್ರ ಜಡೇಜಾ ಜೋಡಿ ಅಪರೂಪದ ದಾಖಲೆ ಬರೆದಿದೆ. ಲಂಕಾ ವಿರುದ್ಧದ ಪಂದ್ಯದಲ್ಲಿ ಮೊಹಮ್ಮದ್ ಶಮಿ ಬದಲು ಸ್ಥಾನ ಪಡೆದ ರವೀಂದ್ರ ಜಡೇಜಾ ಮೊದಲ ಓವರ್‌ನಲ್ಲೇ ವಿಕೆಟ್ ಕಬಳಿಸಿ ಇದೀಗ ದಾಖಲೆ ಬರೆದಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದನ್ನೂ ಓದಿ: ಏಕದಿನ ಗೆಲುವಿನಲ್ಲಿ ದಾಖಲೆ ಬರೆದ ಟೀಂ ಇಂಡಿಯಾ!

ರವೀಂದ್ರ ಜಡೇಜಾ, ಲಂಕಾದ ಕುಸಾಲ್ ಮೆಂಡೀಸ್ ವಿಕೆಟ್ ಕಬಳಿಸಿದರು. ಧೋನಿ ಸ್ಟಂಪ್ ಔಟ್‌ನಿಂದ ಭಾರತಕ್ಕೆ ಭರ್ಜರಿ ಮೇಲುಗೈ ತಂದುಕೊಟ್ಟರು. ಈ ಮೂಲಕ ಜಡೇಜಾ ಹಾಗೂ ಧೋನಿ ಜೋಡಿ ಒಟ್ಟು 29 ಬ್ಯಾಟ್ಸ್‌ಮನ್‌ಗಳನ್ನು ಬಲಿಪಡೆದ ಸಾಧನೆ ಮಾಡಿದ್ದಾರೆ. ಇದಕ್ಕೂ ಮೊದಲು ಭಾರತದ ನಯನ್ ಮೋಂಗಿಯಾ ಹಾಗೂ ವೆಂಕಟೇಶ್ ಪ್ರಸಾದ್ ಜೋಡಿ 28 ಬ್ಯಾಟ್ಸ್‌ಮನ್‌ಗಳನ್ನು ಬಲಿಪಡೆದಿದ್ದರು.

ಇದನ್ನೂ ಓದಿ: ಶ್ರೀಲಂಕಾ ವಿರುದ್ಧ ಭರ್ಜರಿ ಗೆಲುವು; ಸೆಮೀಸ್‌ನಲ್ಲಿ ಭಾರತದ ಎದುರಾಳಿ ಯಾರು?

ಈ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿ ಧೋನಿ ಹಾಗೂ ಹರ್ಭಜನ್ ಸಿಂಗ್ ಅಲಂಕರಿಸಿದ್ದಾರೆ. ಧೋನಿ-ಭಜ್ಜಿ ಜೋಡಿ 25 ಬಾರಿ ಬ್ಯಾಟ್ಸ್‌ಮನ್‌ಗಳನ್ನು ಬಲಿಪಡೆದಿದ್ದಾರೆ. ವಿಶ್ವಕಪ್ ಟೂರ್ನಿಯಲ್ಲಿ ಸಿಕ್ಕ ಒಂದು ಅವಕಾಶದಲ್ಲಿ ದಾಖಲೆ ಬರೆದ ಧೋನಿ ಹಾಗೂ ಜಡೇಜಾ ಸಾಧನೆಗೆ ಮೆಚ್ಚುಗೆ ವ್ಯಕ್ತವಾಗಿದೆ.