ಮ್ಯಾಂಚೆಸ್ಟರ್: ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್'ಮನ್ ಜೇಸನ್ ರಾಯ್, ಗಾಯದ ಸಮಸ್ಯೆಯಿಂದಾಗಿ ವಿಶ್ವಕಪ್‌ನ ಮುಂಬರುವ 2 ಪಂದ್ಯಗಳಿಗೆ ಅಲಭ್ಯರಾಗಲಿದ್ದಾರೆ ಎಂದು ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ ಸೋಮವಾರ ತಿಳಿಸಿದೆ. 

ಆತಿಥೇಯ ಇಂಗ್ಲೆಂಡ್‌ಗೆ ಆಫ್ಘನ್ನರ ಚಾಲೆಂಜ್

ಕಳೆದ ಶುಕ್ರವಾರ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ವೇಳೆ ಕ್ಷೇತ್ರ ರಕ್ಷಣೆ ಮಾಡುವಾಗ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದರು. ಮಂಗಳವಾರ ನಡೆಯಲಿರುವ ಆಫ್ಘನ್ ಹಾಗೂ ಶುಕ್ರವಾರ ನಡೆಯಲಿರುವ ಶ್ರೀಲಂಕಾ ಎದುರಿನ ಪಂದ್ಯಕ್ಕೆ ಜೇಸನ್ ರಾಯ್ ಅಲಭ್ಯರಾಗಿದ್ದಾರೆ. ಇದರ ಮಧ್ಯೆ ನಾಯಕ ಇಯಾನ್ ಮಾರ್ಗನ್ ಕೂಡ ಬೆನ್ನು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ. ವಿಶ್ವಕಪ್ ಸೆಮೀಸ್ ಹಂತಕ್ಕೆ ಹತ್ತಿರವಾಗಿರುವ ಇಂಗ್ಲೆಂಡ್ ತಂಡದಲ್ಲಿ ಗಾಯದ ಸಮಸ್ಯೆ ಉಲ್ಬಣಿಸಿದಂತಾಗಿದೆ.

ಇಂಡೋ-ಪಾಕ್ ಪಂದ್ಯ: ಗಾಯಗೊಂಡ ಭುವನೇಶ್ವರ್ ಔಟ್!

ಕಾರ್ಡಿಫ್’ನಲ್ಲಿ ಬಾಂಗ್ಲಾದೇಶ ವಿರುದ್ಧ ಕೇವಲ 121 ಎಸೆತಗಳಲ್ಲಿ 153 ರನ್ ಬಾರಿಸಿದ್ದ ರಾಯ್, ಇದುವರೆಗೆ ವಿಶ್ವಕಪ್ ಟೂರ್ನಿಯಲ್ಲಿ ಮೂರು ಇನಿಂಗ್ಸ್’ಗಳಲ್ಲಿ ಒಂದು ಶತಕ ಹಾಗೂ ಒಂದು ಅರ್ಧಶತಕದ ನೆರವಿನಿಂದ 215 ರನ್ ಬಾರಿಸಿದ್ದಾರೆ. 

ವಿಶ್ವಕಪ್ ಟೂರ್ನಿಯಲ್ಲಿ ಆತಿಥೇಯ ಇಂಗ್ಲೆಂಡ್ ತಂಡವು ಪಾಕಿಸ್ತಾನ ಎದುರು ಮುಗ್ಗರಿಸಿತ್ತು. ಇದರ ಹೊರತಾಗಿ ಉದ್ಘಾಟನಾ ಪಂದ್ಯದಲ್ಲಿ ನ್ಯೂಜಿಲೆಂಡ್, ಆಬಳಿಕ ಬಾಂಗ್ಲಾದೇಶ ಹಾಗೂ ವೆಸ್ಟ್ ಇಂಡೀಸ್ ವಿರುದ್ಧ ಮಾರ್ಗನ್ ಪಡೆ ಜಯಭೇರಿ ಬಾರಿಸಿದೆ. ಇದರೊಂದಿಗೆ ಆಡಿದ 4 ಪಂದ್ಯಗಳಲ್ಲಿ ಮೂರು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ.