ವಿಶ್ವಕಪ್ ಫೈನಲ್ ಪ್ರವೇಶಿಸಿದ ಬೆನ್ನಲ್ಲೇ ಸ್ಟಾರ್ ಕ್ರಿಕೆಟಿಗನಿಗೆ ಬಿತ್ತು ಬರೆ..!
ಅಂಪೈರ್ ನಿರ್ಧಾರದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದು ಮಾತ್ರವಲ್ಲದೇ ಅನುಚಿತವಾಗಿ ವರ್ತಿಸಿದ ಆರೋಪದಡಿ ಇಂಗ್ಲೆಂಡ್ ಆರಂಭಿಕ ಬ್ಯಾಟ್ಸ್‌ಮನ್‌ಗೆ ಐಸಿಸಿ ದಂಡ ವಿಧಿಸಿದೆ. ಅದೃಷ್ಟವಶಾತ್ ಆ ಕ್ರಿಕೆಟಿಗ ನಿಷೇಧದ ಭೀತಿಯಿಂದ ಪಾರಾಗಿದ್ದಾರೆ. ಅಷ್ಟಕ್ಕೂ ಯಾರು ಆ ಕ್ರಿಕೆಟಿಗ..? ನೀವೇ ನೋಡಿ...
ಬರ್ಮಿಂಗ್‌ಹ್ಯಾಮ್(ಜು.13): ಇಂಗ್ಲೆಂಡ್ ತಂಡದ ಆರಂಭಿಕ ಬ್ಯಾಟ್ಸ್‌ಮನ್ ಜೇಸನ್ ರಾಯ್‌ಗೆ ಪಂದ್ಯದ ಸಂಭಾವನೆಯ ಶೇ.30ರಷ್ಟುಮೊತ್ತವನ್ನು ದಂಡವಾಗಿ ವಿಧಿಸಿರುವುದಾಗಿ ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಅಂಪೈರ್ ಜತೆ ಅನುಚಿತ ವರ್ತನೆ ತೋರಿದ್ದಕ್ಕೆ ಮ್ಯಾಚ್ ರೆಫ್ರಿ ರಂಜನ್ ಮದುಗಲೆ, ರಾಯ್‌ಗೆ ದಂಡ ಹಾಕಿದ್ದಾರೆ. ಆಸ್ಪ್ರೇಲಿಯಾ ವಿರುದ್ಧ ಇಲ್ಲಿ ನಡೆದ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಅಂಪೈರ್ ಕುಮಾರ ಧರ್ಮಸೇನಾ ನೀಡಿದ ತೀರ್ಪಿಗೆ ರಾಯ್ ಅಸಮಾಧಾನ ವ್ಯಕ್ತಪಡಿಸಿದ್ದರು. ಜತೆಗೆ ಔಟ್ ನೀಡಿದ ತಕ್ಷಣ ಹೊರನಡೆಯದೆ ಧರ್ಮಸೇನಾ ಜತೆ ವಾದಕ್ಕಿಳಿದಿದ್ದರು.
ಟೀಂ ಇಂಡಿಯಾ ಸೋತಿದ್ದೆಲ್ಲಿ..? ಇಲ್ಲಿವೆ ನೋಡಿ 5 ಕಾರಣಗಳು
ಆಸ್ಟ್ರೇಲಿಯಾ-ಇಂಗ್ಲೆಂಡ್ ನಡುವಿನ ಎರಡನೇ ಸೆಮಿಫೈನಲ್ ಪಂದ್ಯದ ವೇಳೆ 85 ರನ್ ಬಾರಿಸಿ ಶತಕದತ್ತ ಮುನ್ನುಗ್ಗುತ್ತಿದ್ದ ಜೇಸನ್ ರಾಯ್, ಲಂಕಾ ಅಂಪೈರ್ ಕುಮಾರ ಧರ್ಮಸೇನಾ ನೀಡಿದ ವಿವಾದಾತ್ಮಕ ತೀರ್ಪಿಗೆ ಬಲಿಯಾಗಿದ್ದರು. ಅದೃಷ್ಟವಶಾತ್ ವಿಶ್ವಕಪ್ ಫೈನಲ್‌ಗೆ ನಿಷೇಧದ ಭೀತಿಯಿಂದ ಪಾರಾಗಿದ್ದಾರೆ.
ಇಂಗ್ಲೆಂಡ್ vs ನ್ಯೂಜಿಲೆಂಡ್ ವಿಶ್ವಕಪ್ ಫೈನಲ್; ಯಾರೂ ಗೆದ್ದರೂ ಇತಿಹಾಸ!
ವಿಶ್ವಕಪ್ ಫೈನಲ್ ಪಂದ್ಯವು ಲಾರ್ಡ್ಸ್‌ನಲ್ಲಿ ಜುಲೈ 15ರಂದು ನಡೆಯಲಿದ್ದು, ಆತಿಥೇಯ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ.