ಭಾರತ-ಪಾಕಿಸ್ತಾನ ಪಂದ್ಯದ ಚೆಂಡು ₹1.5 ಲಕ್ಷಕ್ಕೆ ಹರಾಜು!
ವಿಶ್ವಕಪ್ ಟೂರ್ನಿಯ ಭಾರತ-ಪಾಕಿಸ್ತಾನ ನಡುವಿನ ಪಂದ್ಯದಲ್ಲಿ ಬಳಕೆಯಾಗಿದ್ದ ಬಾಲ್ ಬರೋಬ್ಬರಿ 1.5 ಲಕ್ಷ ರುಪಾಯಿಗೆ ಹರಾಜಾಗಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಲಂಡನ್(ಜು.13): ಬದ್ಧವೈರಿಗಳಾದ ಭಾರತ-ಪಾಕಿಸ್ತಾನ ನಡುವಿನ ಕ್ರಿಕೆಟ್ ಪಂದ್ಯಕ್ಕೆ ಎಲ್ಲಿಲ್ಲದ ಬೇಡಿಕೆ ಇದೆ. ಲಕ್ಷಾಂತರ ರುಪಾಯಿ ಕೊಟ್ಟು ಉಭಯ ತಂಡಗಳ ನಡುವಿನ ಏಕದಿನ ವಿಶ್ವಕಪ್ ಪಂದ್ಯದ ಟಿಕೆಟ್‌ಗಳನ್ನು ಖರೀದಿಸಿದ್ದ ಅಭಿಮಾನಿಗಳು, ಪಂದ್ಯಕ್ಕೆ ಬಳಕೆಯಾದ ಚೆಂಡು, ಸ್ಕೋರ್‌ಶೀಟ್‌ಗಳನ್ನು ದೊಡ್ಡ ಮೊತ್ತ ನೀಡಿ ಹರಾಜಿನಲ್ಲಿ ಖರೀದಿ ಮಾಡಿದ್ದಾರೆ.
ಇಂಡೋ-ಪಾಕ್ ಪಂದ್ಯದ ಬಳಿಕ ಆತ್ಮಹತ್ಯೆಗೆ ಯೋಚಿಸಿದ್ದ ಕೋಚ್
www.officialmemorabilia.com ವೆಬ್‌ಸೈಟ್‌ನಲ್ಲಿ ಐಸಿಸಿ, ವಿಶ್ವಕಪ್ ಪಂದ್ಯಗಳಲ್ಲಿ ಟಾಸ್‌ಗೆ ಬಳಕೆಯಾದ ನಾಣ್ಯ, ಚೆಂಡು, ಸ್ಕೋರ್ ಶೀಟ್, ಆಟಗಾರರ ಸಹಿಯುಳ್ಳ ಬ್ಯಾಟ್‌ಗಳನ್ನು ಹರಾಜು ಹಾಕುತ್ತಿದೆ. ಭಾರತ-ಪಾಕ್ ನಡುವೆ ಜೂ.16ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆದ ಪಂದ್ಯದಲ್ಲಿ ಟಾಸ್‌ಗೆ ಬಳಕೆಯಾಗಿದ್ದ ನಾಣ್ಯ ₹1 ಲಕ್ಷಕ್ಕೆ ಹರಾಜಾದರೆ, ಪಂದ್ಯದಲ್ಲಿ ಬಳಸಿದ ಚೆಂಡು ₹1.5 ಲಕ್ಷಕ್ಕೆ, ಅಧಿಕೃತ ಸ್ಕೋರ್ ಶೀಟ್ ₹75,000 ಬಿಡ್ ಆಗಿವೆ. ಆದರೆ ಪಾಕಿಸ್ತಾನ-ಆಸ್ಪ್ರೇಲಿಯಾ ನಡುವಿನ ಪಂದ್ಯದಲ್ಲಿ ಬಳಕೆಯಾಗಿದ್ದ ಚೆಂಡಿಗೆ ಕೇವಲ ₹10,000 ಸಿಕ್ಕಿದೆ. ಆಸ್ಪ್ರೇಲಿಯಾ-ದ.ಆಫ್ರಿಕಾ ನಡುವಿನ ಪಂದ್ಯದಲ್ಲಿ ಬಳಕೆಯಾದ ಚೆಂಡು ₹20,000ಕ್ಕೆ ಹರಾಜಾಗಿದೆ.
ಬುಮ್ರಾ ಭಯಕ್ಕೆ ನಿದ್ರೆಯೇ ಮಾಡಿರಲಿಲ್ವಂತೆ ಕಿವೀಸ್‌ನ ಈ ಬ್ಯಾಟ್ಸ್‌ಮನ್..!
ಸಾಂಪ್ರದಾಯಿಕ ಎದುರಾಳಿಗಳಾದ ಭಾರತ-ಪಾಕಿಸ್ತಾನ ನಡುವೆ ಮ್ಯಾಂಚೆಸ್ಟರ್ ನ ಓಲ್ಡ್ ಟ್ರಾಫೋರ್ಡ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನ ತಂಡವನ್ನು ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ 89 ರನ್ ಗಳಿಂದ ಮಣಿಸಿತ್ತು. ಅಲ್ಲದೇ ವಿಶ್ವಕಪ್ ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ದ ಸತತ ಏಳನೇ ಗೆಲುವು ದಾಖಲಿಸಿತ್ತು.